Asianet Suvarna News Asianet Suvarna News

ಆಡ​ಳಿತ ವಿರೋಧಿ ಅಲೆ ಬಿಜೆಪಿ ಸೋಲಿಗೆ ಕಾರಣ: ಡಿ.ವಿ.​ಸ​ದಾ​ನಂದ​ಗೌಡ

ಆಡ​ಳಿತ ವಿರೋಧಿ ಅಲೆ ಚುನಾ​ವ​ಣೆ​ಯಲ್ಲಿ ಬಿರು​ಗಾ​ಳಿ​ಯಂತೆ ಬೀಸಿತು. ಆ ಗಾಳಿಯ ರಭ​ಸಕ್ಕೆ ಮಾಜಿ ಸಚಿವ ಸಿ.ಪಿ.​ಯೋ​ಗೇ​ಶ್ವರ್‌ ಅವ​ರಂತಹ ದೊಡ್ಡ ಬುಡ​ಗಳೇ ನೆಲ​ಕ್ಕು​ರ​ಳಿ​ದವು. ಪಕ್ಷದ ನಾಯ​ಕ​ನಾಗಿ ಆಡ​ಳಿತ ವಿರೋಧಿ ಇದ್ದಿ​ದ್ದನ್ನು ಪ್ರಾಮಾ​ಣಿ​ಕ​ವಾಗಿ ಒಪ್ಪಿ​ಕೊ​ಳ್ಳಲು ಸಿದ್ದ​ನಿ​ದ್ದೇನೆ: ಡಿ.ವಿ.​ಸ​ದಾ​ನಂದ​ಗೌಡ 

Anti Incumbency Wave Was the Reason for BJP's defeat in Karnataka Says Sadananda Gowda grg
Author
First Published Jun 24, 2023, 4:30 AM IST

ರಾಮ​ನ​ಗರ(ಜೂ.24):  ಬಿಜೆಪಿ ​ಸ​ರ್ಕಾ​ರದ ಆಡ​ಳಿತ ವಿರೋಧಿ ಅಲೆ ತಗ್ಗಿ​ಸಿ ಪೊಲಿ​ಟಿ​ಕಲ್‌ ಸ್ಟ್ರಾಟರ್ಜಿ ಮಾಡು​ವಲ್ಲಿ ಹಾಗೂ ಕಾಂಗ್ರೆಸ್‌ನ ಸುಳ್ಳಿನ ಗ್ಯಾರಂಟಿ​ಗ​ಳನ್ನು ಜನ​ರಿಗೆ ಮನ​ವ​ರಿಕೆ ಮಾಡಿ​ಕೊ​ಡು​ವಲ್ಲಿ ವಿಫ​ಲ​ವಾ​ಗಿ​ದ್ದೆ ವಿಧಾ​ನ​ಸ​ಭಾ ಚುನಾ​ವ​ಣೆ​ಯಲ್ಲಿ ಬಿಜೆಪಿ ಸೋಲಿಗೆ ಕಾರಣ ಎಂದು ಮಾಜಿ ಮುಖ್ಯ​ಮಂತ್ರಿ ಡಿ.ವಿ.​ಸ​ದಾ​ನಂದ​ಗೌಡ ಅವರು ಆಡ​ಳಿತ ವಿರೋಧಿ ಅಲೆ ಇದ್ದಿ​ದ್ದನ್ನು ಒಪ್ಪಿಕೊಂಡರು.

ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಆಡ​ಳಿತ ವಿರೋಧಿ ಅಲೆ ಚುನಾ​ವ​ಣೆ​ಯಲ್ಲಿ ಬಿರು​ಗಾ​ಳಿ​ಯಂತೆ ಬೀಸಿತು. ಆ ಗಾಳಿಯ ರಭ​ಸಕ್ಕೆ ಮಾಜಿ ಸಚಿವ ಸಿ.ಪಿ.​ಯೋ​ಗೇ​ಶ್ವರ್‌ ಅವ​ರಂತಹ ದೊಡ್ಡ ಬುಡ​ಗಳೇ ನೆಲ​ಕ್ಕು​ರ​ಳಿ​ದವು. ಪಕ್ಷದ ನಾಯ​ಕ​ನಾಗಿ ಆಡ​ಳಿತ ವಿರೋಧಿ ಇದ್ದಿ​ದ್ದನ್ನು ಪ್ರಾಮಾ​ಣಿ​ಕ​ವಾಗಿ ಒಪ್ಪಿ​ಕೊ​ಳ್ಳಲು ಸಿದ್ದ​ನಿ​ದ್ದೇನೆ. ಬಿಜೆಪಿ ಸರ್ಕಾ​ರದ ಸಾಧ​ನೆ​ಗಳು ಜನ​ರಿಗೆ ತಲು​ಪಿ​ಸು​ವಲ್ಲಿ ನಾವು ಸೋತವು. ಕಾಂಗ್ರೆಸ್‌ ಪಕ್ಷದ ಸುಳ್ಳಿನ ಗ್ಯಾರಂಟಿ​ಗ​ಳಿಗೆ ಕೌಂಟರ್‌ ಮಾಡು​ವಲ್ಲಿ ವಿಫ​ಲ​ರಾ​ದೆವು. ಅದ್ಯಾವ ಅಂಡರ್‌ ಕರೆಂಚ್‌ ಕೆಲಸ ಮಾಡಿತೊ ಗೊತ್ತಿಲ್ಲ. ಸುಳ್ಳು ಆಶ್ವಾಸನೆಯ ಚುನಾವಣೆ ಎಂಬುದಕ್ಕೆ ಈ ಚುನಾವಣೆ ನಿದರ್ಶನ ಎಂದು ಹೇಳಿ​ದ​ರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್‌ ಮೈತ್ರಿ: ರಾಜಕೀಯ ಗುಟ್ಟು ಬಹಿರಂಗ

ರಾಜ್ಯ ಹಾಗೂ ಜಿಲ್ಲಾ ನಾಯಕರ ಮಟ್ಟದಲ್ಲಿ ಕೆಲ​ವೊಂದು ತಪ್ಪುಗಳು ಆಗಿರಬಹುದು. ಆದರೆ, ಸೋಲಿಗೆ ಯಾರೂ ಎದೆಗುಂದಬೇಕಿಲ್ಲ. ಬಿಜೆಪಿ ಇಂತಹ ಅನೇಕ ಸೋಲು ಗೆಲು​ವು​ಗ​ಳನ್ನು ಕಂಡಿದೆ. ಸೋತ​ವೆಂದು ಕೈಕಟ್ಟಿಕೂರಲ್ಲ, ಪಲಾ​ಯನ ಮಾಡು​ವು​ದಿಲ್ಲ. ನಾವೀಗ ಗಾಯಗೊಂಡ ಹುಲಿಯಾಗಿದ್ದು, ಮತ್ತೆ ಬೇಟೆಯಾಡಬೇಕಿದೆ. ನಾವು ಎಲ್ಲಿ ಕಳೆ​ದು​ಕೊಂಡಿ​ದ್ದೇ​ವೆಯೊ ಅಲ್ಲಿಯೇ ಹುಡು​ಕ​ಬೇಕು. ಬೆಂಗ​ಳೂರು ಗ್ರಾಮಾ​ಂತರ ಸಂಸತ್‌ ಕ್ಷೇತ್ರ​ದಲ್ಲಿ ವಿಜಯ ಪತಾಕೆ ಹಾರಿಸಿ ಬಿಜೆಪಿ ಶಕ್ತಿ ತೋರಿ​ಸ​ಬೇ​ಕಿದೆ. ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಅವರ ಅಹಂಕಾರ, ಧಿಮಾ​ಕಿಗೆ ಜನರೇ ಪಾಠ ಕಲಿ​ಸು​ತ್ತಾರೆ ಎಂದು ಸದಾ​ನಂದ​ಗೌಡ ತಿಳಿ​ಸಿ​ದ​ರು.

ವಿಧಾನ ಪರಿ​ಷತ್‌ ಸದಸ್ಯ ಸಿ.ಪಿ.​ಯೋ​ಗೇ​ಶ್ವರ್‌ ಮಾತ​ನಾಡಿ, ಜಿಲ್ಲೆಯ ನಾಲ್ಕು ಕ್ಷೇತ್ರ​ಗ​ಳಲ್ಲಿ ಹೋರಾಟ ನಡೆ​ಸಿ​ದರು ಎಲ್ಲೂ ಗೆಲುವು ಸಾಧಿ​ಸಲು ಆಗ​ಲಿಲ್ಲ. ಬಿಜೆಪಿ ಮತ್ತು ಜೆಡಿ​ಎಸ್‌ ಹೋರಾ​ಟ​ದಲ್ಲಿ ಕಾಂಗ್ರೆಸ್‌ಗೆ ಲಾಭ​ವಾ​ಗಿದೆ. ಆದರೆ, ಮೈಸೂರು ಭಾಗ​ದಲ್ಲಿ ಜೆಡಿ​ಎಸ್‌ ಶಕ್ತಿ​ಯನ್ನು ಕುಂದಿ​ಸಿ​ದ್ದೇವೆ. ಬಿಜೆಪಿ ಸರ್ಕಾ​ರ​ದ ಅವ​ಧಿ​ಯಲ್ಲಿ ಜಿಲ್ಲೆ​ಯಲ್ಲಿ ಯಾವುದೇ ಛಾಪು ಮೂಡಿ​ಸ​ಲಿಲ್ಲ. ನಮ್ಮದೇ ಸರ್ಕಾರ ಇದ್ದರೂ ಜನ​ಸಾ​ಮಾ​ನ್ಯ​ರನ್ನು ಪಕ್ಷಕ್ಕೆ ಸೆಳೆ​ಯ​ಲಾ​ಗ​ಲಿಲ್ಲ. ಜನ​ರಲ್ಲಿ ಭರ​ವಸೆ ಮೂಡಿ​ಸಲು ಆಗ​ಲಿಲ್ಲ ಎಂಬ ನೋವಿದೆ ಎಂದು ಬೇಸರ ವ್ಯಕ್ತ​ಪ​ಡಿ​ಸಿ​ದ​ರು.

ಕಾಂಗ್ರೆಸ್‌ ಸುಳ್ಳು ಭರವಸೆ ಮತ್ತು ಟೋಕನ್‌ ಹಂಚಿ ಗೆಲುವು ಸಾಧಿ​ಸಿದೆ. ಆ ಪಕ್ಷದಲ್ಲಿ ಎರಡು ಗುಂಪುಗಳಿದ್ದು, ಜನರಿಗೆ ಕೊಟ್ಟಿರುವ ಭರವಸೆಯನ್ನು ಈಡೇರಿಸುವುದಿಲ್ಲ. ಮಹಿಳೆಯರಿಗೆ ಸಾರಿಗೆ ಬಸ್ಸಿ​ನಲ್ಲಿ ಉಚಿತ ಪ್ರಯಾ​ಣಕ್ಕೆ ಅವ​ಕಾಶ ನೀಡಿ​ದರು. ಆದರೆ, ಖಾಸಗಿ ಬಸ್‌ ನವ​ರಿಗೆ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ಆ ಪಕ್ಷದ ಐದು ಗ್ಯಾರಂಟಿಗಳು ಇದೇ ರೀತಿಯಿದ್ದು, ಅವೆ​ಲ್ಲವೂ ವಿಫ​ಲ​ವಾ​ಗ​ಲಿವೆ ಎಂದು ಹೇಳಿ​ದ​ರು.ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ಗೆ ಕರ್ನಾಟಕದಿಂದಲೇ ಹಣ ಹೊಂದಿಸಬೇಕಿದೆ. ಆ ಚುನಾ​ವ​ಣೆ​ ವೇಳೆಗೆ ಬದ​ಲಾದ ಪರಿ​ಸ್ಥಿ​ತಿ​ಯಲ್ಲಿ ಪಕ್ಷದ ವರಿ​ಷ್ಠರು ತೆಗೆ​ದು​ಕೊ​ಳ್ಳುವ ತೀರ್ಮಾ​ನಕ್ಕೆ ನಾವು ಬದ್ಧ​ರಾಗಿ ಕೆಲಸ ಮಾಡ​ಬೇ​ಕಿದೆ ಎಂದು ಯೋಗೇ​ಶ್ವರ್‌ ಬಿಜೆಪಿ - ಜೆಡಿ​ಎಸ್‌ ಮೈತ್ರಿ ಬಗ್ಗೆ ಪರೋ​ಕ್ಷ​ವಾಗಿ ಪ್ರಸ್ತಾ​ಪಿ​ಸಿ​ದ​ರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯ​ದರ್ಶಿ ಅಶ್ವತ್ಥ ನಾರಾ​ಯ​ಣ​ಗೌಡ ಮಾತ​ನಾಡಿ, ಉತ್ತಮ ಆಡ​ಳಿತ ನೀಡಿ​ಯೂ ಬಿಜೆಪಿ ಸೋತಿದೆ.​ ಜ​ನರು ನಮ್ಮ ಸಾಧ​ನೆ​ಗ​ಳನ್ನು ನೋಡಿ ಕೈ ಹಿಡಿ​ಯ​ಲಿ​ಲ್ಲ. ಕಾಂಗ್ರೆಸ್‌ ಪಕ್ಷ ರಚ​ನಾ​ತ್ಮ​ಕ​ವಾಗಿ ಕೆಲಸ ಮಾಡಿ ಅಧಿ​ಕಾ​ರಕ್ಕೆ ಬಂದಿಲ್ಲ ಎಂದು ಟೀಕಿ​ಸಿ​ದರು.

ಯಡಿ​ಯೂ​ರ​ಪ್ಪ​ರ​ವರು ತಮ್ಮ ಅವ​ಧಿ​ಯಲ್ಲಿ ಸದಾ​ನಂದ​ಗೌಡ, ಜಗ​ದೀಶ್‌ ಶೆಟ್ಟರ್‌ ಹಾಗೂ ಬಸ​ವ​ರಾಜ ಬೊಮ್ಮಾಯಿ ಅವ​ರನ್ನು ಮುಖ್ಯ​ಮಂತ್ರಿ ಮಾಡಿ​ದರು. ಆದರೆ, ಸಿದ್ದ​ರಾ​ಮ​ಯ್ಯ​ನವರು ದಲಿ​ತ​ರಿಗೆ ಅವ​ಕಾಶ ನೀಡ​ಲಿಲ್ಲ. ಕೆಪಿ​ಸಿಸಿ ಅಧ್ಯ​ಕ್ಷ​ರಾದ ಕಾರ​ಣಕ್ಕೆ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಉಪ ಮುಖ್ಯ​ಮಂತ್ರಿ ಸ್ಥಾನ ನೀಡಿ​ದ್ದಾರೆ ಎಂದು ಹೇಳಿ​ದ​ರು.

ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಪ್ರಧಾನ ಕಾರ್ಯದರ್ಶಿ ರುದದ್ರದೇವರು, ಮುಖಂಡರಾದ ಪ್ರಸಾದ್‌ಗೌಡ, ಅಪ್ಪಾಜಿಗೌಡ ಉಪ​ಸ್ಥಿ​ತ​ರಿ​ದ್ದ​ರು.

ವಿ​ಧಾ​ನ​ಸಭಾ ಚುನಾವಣೆ ಫಲಿತಾಂಶ ನಿರಾಶೆ ಮೂಡಿಸಿದೆ. ಆಗಿರುವ ತಪ್ಪುಗಳು ಮರುಕಳಿಸದಂತೆ ನಾವು ನೋಡಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ನಾವು ಮನೆಮನೆಗೆ ತಲುಪಿಸುವಲ್ಲಿ ನಾವು ವಿಫಲರಾದೆವು ಅಂತ ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ ತಿಳಿಸಿದ್ದಾರೆ. 

ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ: ಡಿ.ಕೆ.ಸುರೇಶ್ ವೈರಾಗ್ಯದ ಮಾತು..!

ಬೀದಿಗೆ ಬಂದ ಬಿಜೆಪಿ ಜಗಳ

ರಾನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಮುಕ್ತಾ​ಯ​ಗೊಂಡ ನಂತರ ಬಿಜೆಪಿ ಜಗಳ ಬೀದಿಗೆ ಬಂದಿ​ತು. ವಿಧಾ​ನ​ಸಭಾ ಚುನಾವಣೆಯಲ್ಲಿ ಸರಿಯಾಗಿ ಹಣ ಹಂಚಿಕೆ ಮಾಡಿಲ್ಲ ಎಂದು ಅರೋಪಿಸಿ ಕನಕಪುರ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ್‌ ಹಾಗೂ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಪೈಲ್ವಾನ್‌ ಸಿದ್ದಮರಿಗೌಡ ನಡುವೆ ಗುದ್ದಾಟ ನಡೆಯಿತು.

ಚುನಾ​ವ​ಣೆ ಸಮ​ಯ​ದಲ್ಲಿ ಪಕ್ಷದ ನಾಯ​ಕರು ಖರ್ಚಿ​ಗಾಗಿ 50 ಸಾವಿರ ತಲು​ಪಿ​ಸು​ವಂತೆ ನೀಡಿ​ದ್ದರು. ಆ ಹಣ​ವನ್ನು ಏಕೆ ತಲು​ಪಿ​ಸ​ಲಿಲ್ಲ ಎಂದು ಸಿದ್ದ​ಮ​ರಿ​ಗೌ​ಡ​ರ​ವರು ರಮೇಶ್‌ ಅವ​ರನ್ನು ಪ್ರಶ್ನಿ​ಸಿ​ದರು. ಇದು ವಾಗ್ವಾ​ದಕ್ಕೆ ತಿರು​ಗಿತು. ಇಬ್ಬರು ಕೈ-ಕೈ ಮಿಲಾಯಿಸಿ, ಕತ್ತಿನಪಟ್ಟಿಹಿಡಿದು ತಳ್ಳಾಟ, ನೂಕಾಟವಾಯಿತು. ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯ​ದರ್ಶಿ ಅಶ್ವತ್ಥ ನಾರಾ​ಯ​ಣ​ಗೌಡ ಹಾಗೂ ಜಿಲ್ಲಾ ಪ್ರಧಾನ ಕಾರ್ಯ​ದರ್ಶಿ ರುದ್ರ​ದೇ​ವರು ಮಧ್ಯ​ಪ್ರ​ವೇ​ಶಿಸಿ ಇಬ್ಬ​ರನ್ನು ಸಮಾ​ಧಾನಪಡಿ​ಸಿ​ದರು.

Follow Us:
Download App:
  • android
  • ios