ಬಿಜೆಪಿ ಮೊದಲ ಪಟ್ಟಿ ಪ್ರಕಟ: ಹೊಸ ಮುಖಗಳಿಗೆ ಮಣೆ, ಟಿಕೆಟ್ ತಪ್ಪಿದ್ದು ಯಾರಿಗೆ?

ಇನ್ನುಳಿದ 35 ಕ್ಷೇತ್ರಗಳಿಗೆ ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಈಗ ಪ್ರಕಟಗೊಂಡಿರುವ ಕ್ಷೇತ್ರಗಳ ಪೈಕಿ ಸುಮಾರು 52 ಕ್ಷೇತ್ರಗಳಿಗೆ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿದೆ. ಈ ಮೊದಲ ಪಟ್ಟಿಯಲ್ಲಿ ಎಂಟು ಮಂದಿ ಮಹಿಳೆಯರಿದ್ದಾರೆ. 32 ಹಿಂದುಳಿದ ವರ್ಗದವರಿಗೆ, 30 ಪರಿಶಿಷ್ಟಜಾತಿ, 16 ಪರಿಶಿಷ್ಟಪಂಗಡದವರಿಗೆ ಟಿಕೆಟ್‌ ನೀಡಲಾಗಿದೆ.

BJP Announced of Candidates First List of Karnataka Assembly Elections 2023 grg

ಬೆಂಗಳೂರು(ಏ.12): ಕಳೆದ ನಾಲ್ಕು ದಿನಗಳ ಕಾಲ ಸರಣಿ ಸಭೆಗಳನ್ನು ನಡೆಸಿದ ಆಡಳಿತಾರೂಢ ಬಿಜೆಪಿಯು ಪ್ರಸಕ್ತ ವಿಧಾನಸಭಾ ಚುನಾವಣೆಗೆ ಒಟ್ಟು 224 ಕ್ಷೇತ್ರಗಳ ಪೈಕಿ ಮೊದಲ ಹಂತದಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಸಚಿವ ಎಸ್‌.ಅಂಗಾರ ಸೇರಿದಂತೆ ಒಟ್ಟು 9 ಮಂದಿ ಹಾಲಿ ಶಾಸಕರಿಗೆ ಕೊಕ್‌ ನೀಡಿದೆ.

ಇನ್ನುಳಿದ 35 ಕ್ಷೇತ್ರಗಳಿಗೆ ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಈಗ ಪ್ರಕಟಗೊಂಡಿರುವ ಕ್ಷೇತ್ರಗಳ ಪೈಕಿ ಸುಮಾರು 52 ಕ್ಷೇತ್ರಗಳಿಗೆ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿದೆ. ಈ ಮೊದಲ ಪಟ್ಟಿಯಲ್ಲಿ ಎಂಟು ಮಂದಿ ಮಹಿಳೆಯರಿದ್ದಾರೆ. 32 ಹಿಂದುಳಿದ ವರ್ಗದವರಿಗೆ, 30 ಪರಿಶಿಷ್ಟಜಾತಿ, 16 ಪರಿಶಿಷ್ಟಪಂಗಡದವರಿಗೆ ಟಿಕೆಟ್‌ ನೀಡಲಾಗಿದೆ. ಹೊಸಬರಿಗೆ ಟಿಕೆಟ್‌ ನೀಡಿ ಆಡಳಿತ ವಿರೋಧಿ ಅಲೆ ಮೆಟ್ಟಿನಿಲ್ಲುವ ತಂತ್ರವನ್ನು ಬಿಜೆಪಿ ಹೆಣೆದಿದೆ.

ಜೆಡಿಎಸ್‌ನಲ್ಲೇ ಇದ್ದು ಪಕ್ಷ ಸಂಘಟಿಸುವೆ : ಯೋಗಾ ನಂದಕುಮಾರ್‌

ಬೊಮ್ಮಾಯಿ ಶಿಗ್ಗಾವಿಯಿಂದ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಲಿದ್ದು, ಸೋಲುವ ಭೀತಿಯಿಂದ ಎರಡು ಕ್ಷೇತ್ರಗಳಿಂದ ಕಣಕ್ಕಿಳಿಯಬಹುದು ಎಂಬ ವದಂತಿಗೆ ಬ್ರೇಕ್‌ ಬಿದ್ದಂತಾಗಿದೆ. ಆದರೆ, ಟಿಕೆಟ್‌ ತಪ್ಪುವ ಸಾಧ್ಯತೆಯಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಪ್ರತಿನಿಧಿಸುವ ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ಕ್ಷೇತ್ರದ ಟಿಕೆಟ್‌ ಘೋಷಣೆ ಮಾಡಿಲ್ಲ. ಅದೇ ರೀತಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಪ್ರತಿನಿಧಿಸುವ ಶಿವಮೊಗ್ಗ ಕ್ಷೇತ್ರದಿಂದ ಅಭ್ಯರ್ಥಿ ಯಾರು ಎಂಬುದು ಕುತೂಹಲವಾಗಿಯೇ ಉಳಿದಿದೆ.

ಡಿಕೆಶಿ, ಸಿದ್ದುಗೆ ಕಠಿಣ ಸ್ಪರ್ಧೆ:

ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ನ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರನ್ನು ಕಟ್ಟಿಹಾಕುವ ಉದ್ದೇಶದಿಂದ ಇಬ್ಬರು ಸಚಿವರನ್ನು ಪ್ರಬಲ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿದೆ. ಆ ಇಬ್ಬರೂ ಸಚಿವರಿಗೆ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶವನ್ನೂ ನೀಡಲಾಗಿದೆ.

ವಸತಿ ಮತ್ತು ಮೂಲಸೌಕರ್ಯ ಸಚಿವ ವಿ.ಸೋಮಣ್ಣ ಅವರು ಈ ಬಾರಿ ತಾವು ಪ್ರತಿನಿಧಿಸುವ ಗೋವಿಂದರಾಜನಗರ ಕ್ಷೇತ್ರವನ್ನು ತೊರೆದಿದ್ದು, ಚಾಮರಾಜನಗರ ಕ್ಷೇತ್ರ ಮತ್ತು ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಕಂದಾಯ ಸಚಿವ ಆರ್‌.ಅಶೋಕ್‌ ಅವರು ಈಗಿನ ಪದ್ಮನಾಭನಗರ ಕ್ಷೇತ್ರದ ಜೊತೆಗೆ ಶಿವಕುಮಾರ್‌ ವಿರುದ್ಧ ಕನಕಪುರ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿನಿಧಿಸುವ ಚನ್ನಪಟ್ಟಣ ಕ್ಷೇತ್ರದಿಂದ ಹಾಲಿ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಸ್ಪರ್ಧಿಸಲಿದ್ದಾರೆ.

ಆನಂದ ಪುತ್ರಗೆ ಟಿಕೆಟ್‌:

ಹಾಲಿ ಸಚಿವ ಎಸ್‌.ಅಂಗಾರ ಅವರಿಗೆ ಟಿಕೆಟ್‌ ಕೈತಪ್ಪಿದೆ. ಆದರೆ, ಮತ್ತೊಬ್ಬ ಹಾಲಿ ಸಚಿವ ಆನಂದ್‌ ಸಿಂಗ್‌ ಅವರು ತಮ್ಮ ಬದಲಿಗೆ ವಿಜಯನಗರ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದರಿಂದ ಅದನ್ನು ಪರಿಗಣಿಸಿ ಸಿದ್ದಾರ್ಥ ಸಿಂಗ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಆದರೆ, ಹೊಸಕೋಟೆಯಿಂದ ತಮ್ಮ ಪುತ್ರನಿಗೆ ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದ ಸಚಿವ ಎಂಟಿಬಿ ನಾಗರಾಜ್‌ ಅವರ ಬೇಡಿಕೆಯನ್ನು ತಿರಸ್ಕರಿಸಿ ಅವರಿಗೇ ಟಿಕೆಟ್‌ ನೀಡಲಾಗಿದೆ.

ವಿಜಯೇಂದ್ರಗೆ ಮಣೆ:

ಶಿಕಾರಿಪುರದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಟಿಕೆಟ್‌ ಲಭಿಸಿದೆ. ನಿವೃತ್ತ ಐಎಎಸ್‌ ಅಧಿಕಾರಿ ಅನಿಲ್‌ಕುಮಾರ್‌ ಅವರು ಕೊರಟಗೆರೆಯಿಂದ ಮತ್ತು ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರ್‌ರಾವ್‌ ಅವರು ಚಾಮರಾಜಪೇಟೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಟಿಕೆಟ್‌ ತಪ್ಪುವ ವದಂತಿ ಹಬ್ಬಿರುವ ಹಾಲಿ ಶಾಸಕರಾದ ಅರವಿಂದ್‌ ಲಿಂಬಾವಳಿ, ಎಸ್‌.ಎ.ರಾಮದಾಸ್‌ ಅವರ ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.

Tumakur : ಜಿಲ್ಲೆಯಲ್ಲಿ ಕೈ ಸಾಧಿಸಲಿದೆ ಮೇಲುಗೈ : ಟಿ.ಬಿ.ಜಯಚಂದ್ರ

ಸವದಿಗೆ ಕೊಕ್‌:

ಅಥಣಿಯಿಂದ ತೀವ್ರ ಪ್ರಯತ್ನ ನಡೆಸಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ನಿರಾಸೆಯಾಗಿದೆ. ಆ ಕ್ಷೇತ್ರದಿಂದ ಹಾಲಿ ಶಾಸಕ ಮಹೇಶ್‌ ಕುಮಟಳ್ಳಿ ಅವರಿಗೇ ಮಣೆ ಹಾಕಲಾಗಿದೆ. ಇನ್ನು ನಿಧನ ಹೊಂದಿದ ಮಾಜಿ ಸಚಿವ ಉಮೇಶ್‌ ಕತ್ತಿ ಅವರ ಪುತ್ರ ನಿಖಿಲ್‌ ಕತ್ತಿ ಅವರಿಗೆ ಹುಕ್ಕೇರಿಯಿಂದ ನೀಡಿದರೆ, ಸಹೋದರ ರಮೇಶ್‌ ಕತ್ತಿ ಅವರಿಗೆ ಚಿಕ್ಕೋಡಿ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ನಿಧನ ಹೊಂದಿದ ವಿಧಾನಸಭೆಯ ಉಪಸಭಾಪತಿಯಾಗಿದ್ದ ವಿಶ್ವನಾಥ್‌ ಮಾಮನಿ ಪತ್ನಿ ರತ್ನ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

189 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ನಿಪ್ಪಾಣಿ ಶಶಿಕಲಾ ಜೊಲ್ಲೆ
ಚಿಕ್ಕೋಡಿ ಸದಲಗ ರಮೇಶ್‌ ಕತ್ತಿ
ಅಥಣಿ ಮಹೇಶ್‌ ಕುಮಟಳ್ಳಿ
ಕಾಗವಾಡ ಶ್ರೀಮಂತ ಪಾಟೀಲ್‌
ಕುಡುಚಿ ಪಿ.ರಾಜೀವ್‌
ರಾಯಬಾಗ ದುರ್ಯೋಧನ ಐಹೊಳೆ
ಹುಕ್ಕೇರಿ ನಿಖಿಲ್‌ ಕತ್ತಿ
ಅರಭಾವಿ ಬಾಲಚಂದ್ರ ಜಾರಕಿಹೊಳಿ
ಗೋಕಾಕ ರಮೇಶ್‌ ಜಾರಕಿಜೊಳಿ
ಯಮಕನಮರಡಿ ಬಸವರಾಜ್‌ ಹುಂಡ್ರಿ
ಬೆಳಗಾವಿ ಉತ್ತರ ಡಾ.ರವಿ ಪಾಟೀಲ್‌
ಬೆಳಗಾವಿ ದಕ್ಷಿಣ ಅಭಯ್‌ ಪಾಟೀಲ್‌
ಬೆಳಗಾವಿ ಗ್ರಾಮಾಂತರ ನಾಗೇಶ್‌ ಮನೋಳ್ಕರ್‌
ಖಾನಾಪುರ ವಿಠ್ಠಲ ಹಲಗೇಕರ್‌
ಕಿತ್ತೂರು ಮಹಾಂತೇಶ್‌ ದೊಡ್ಡಗೌಡರ್‌
ಬೈಲಹೊಂಗಲ ಜಗದೀಶ್‌ ಮೆಟಗುಡ್ಡ
ಸವದತ್ತಿ ಯಲ್ಲಮ್ಮ ರತ್ನಾ ವಿಶ್ವನಾಥ ಮಾಮನಿ
ರಾಮದುರ್ಗ ಚಿಕ್ಕ ರೇವಣ್ಣ
ಮುಧೋಳ ಗೋವಿಂದ್‌ ಕಾರಜೋಳ
ತೇರದಾಳ ಸಿದ್ದು ಸವದಿ
ಜಮಖಂಡಿ ಜಗದೀಶ ಗೌಡಗುಂಟಿ
ಬೀಳಗಿ ಮುರುಗೇಶ್‌ ನಿರಾಣಿ
ಬಾದಾಮಿ ಶಾಂತಗೌಡ ಪಾಟೀಲ್‌
ಬಾಗಲಕೋಟೆ ವೀರಭದ್ರಯ್ಯ ಚರಂತಿಮಠ
ಹುನಗುಂದ ದೊಡ್ಡನಗೌಡ ಜಿ.ಪಾಟೀಲ್‌
ಮುದ್ದೆಬಿಹಾಳ ಎ.ಎಸ್‌.ಪಾಟೀಲ್‌ ನಡಹಳ್ಳಿ
ಬಬಲೇಶ್ವರ ವಿಜುಗೌಡ ಎಸ್‌.ಪಾಟೀಲ್‌
ವಿಜಯಪುರ ನಗರ ಬಸನಗೌಡ ಪಾಟೀಲ್‌ ಯತ್ನಾಳ
ಸಿಂದಗಿ ರಮೇಶ್‌ ಭೂಸನೂರ
ಅಫ್ಜಲಪುರ ಮಾಲೀಕಯ್ಯ ಗುತ್ತೇದಾರ್‌
ಜೇವರ್ಗಿ ಶಿವನಗೌಡಪಾಟೀಲ್‌ ರದ್ದೇವಾಡಗಿ
ಸುರಪುರ ರಾಜೂಗೌಡ
ಶಹಪುರ ಅಮೀನ್‌ರೆಡ್ಡಿ ಯಾಲಗಿ
ಯಾದಗಿರಿ ವೆಂಕಟರೆಡ್ಡಿ ಮುದ್ನಾಳ್‌
ಚಿತ್ತಾಪುರ ಮಣಿಕಾಂತ ರಾಥೋಡ್‌
ಚಿಂಚೋಳಿ ಡಾ.ಅವಿನಾಶ್‌ ಜಾಧವ್‌
ಕಲಬುರಗಿ ಗ್ರಾಮಾಂತರ ಬಸವರಾಜ ಮತ್ತಿಮಡು
ಕಲಬುರಗಿ ದಕ್ಷಿಣ ದತ್ತಾತ್ರೇಯ ಪಾಟೀಲ್‌ ರೇವೂರ್‌
ಕಲಬುರಗಿ ಉತ್ತರ ಚಂದ್ರಕಾಂತ್‌ ಪಾಟೀಲ್‌
ಅಳಂದ ಸುಭಾಷ್‌ ಗುತ್ತೇದಾರ್‌
ಬಸವಕಲ್ಯಾಣ ಶರಣು ಸಲಗಾರ್‌
ಹುಮನಬಾದ್‌ ಸಿದ್ದು ಪಾಟೀಲ್‌
ಬೀದರ್‌ ದಕ್ಷಿಣ ಡಾ.ಶೈಲೇಂದ್ರ ಬೆಲ್ದಾಳೆ
ಔರಾದ್‌ ಪ್ರಭು ಚೌವ್ಹಾಣ್‌
ರಾಯಚೂರು ಗ್ರಾಮಾಂತರ ತಿಪ್ಪರಾಜು ಹವಾಲ್ದಾರ್‌
ರಾಯಚೂರು ಡಾ.ಶಿವರಾಜ ಪಾಟೀಲ್‌
ದೇವದುರ್ಗ ಕೆ.ಶಿವನಗೌಡ ನಾಯಕ್‌
ಲಿಂಗಸುಗೂರು ಮಾನಪ್ಪ ಡಿ ವಜ್ಜಲ್‌
ಸಿಂಧನೂರು ಕೆ.ಕರಿಯಪ್ಪ
ಮಸ್ಕಿ ಪ್ರತಾಪ್‌ಗೌಡ ಪಾಟೀಲ್‌
ಕುಷ್ಟಗಿ ದೊಡ್ಡನಗೌಡ ಪಾಟೀಲ್‌
ಕನಕಗಿರಿ ಬಸವರಾಜ ದಡೇಸಗೂರು
ಯಲಬುರ್ಗಾ ಹಾಲಪ್ಪ ಆಚಾರ್‌
ಶಿರಹಟ್ಟಿ ಡಾ.ಚಂದ್ರು ಲಮಾಣಿ
ಗದಗ ಅನಿಲ್‌ ಮೆಣಸಿನಕಾಯಿ
ನರಗುಂದ ಸಿ.ಸಿ.ಪಾಟೀಲ್‌,
ನವಲಗುಂದ ಶಂಕರ ಪಾಟೀಲ ಮುನೇನಕೊಪ್ಪ
ಕುಂದಗೋಳ ಎಂ.ಆರ್‌.ಪಾಟೀಲ್‌
ಧಾರವಾಡ ಅಮೃತ ದೇಸಾಯಿ
ಹುಬ್ಬಳ್ಳಿ-ಧಾರವಾಡ ಪೂರ್ವ ಡಾ.ಕ್ರಾಂತಿ ಕಿರಣ್‌
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಅರವಿಂದ ಬೆಲ್ಲದ
ಹಳಿಯಾಳ ಸುನೀಲ್‌ ಹೆಗ್ಡೆ
ಕಾರವಾರ ರೂಪಾಲಿ ನಾಯ್ಕ
ಕುಮಟಾ ದಿನಕರ್‌ ಶೆಟ್ಟಿ
ಭಟ್ಕಳ ಸುನೀಲ್‌ ನಾಯಕ್‌
ಸಿರಸಿ ವಿಶ್ವೇಶ್ವರ ಹೆಗಡೆ ಕಾಗೇರಿ
ಯಲ್ಲಾಪುರ ಶಿವರಾಮ ಹೆಬ್ಬಾರ್‌
ಶಿಗ್ಗಾಂವಿ ಬಸವರಾಜ ಬೊಮ್ಮಾಯಿ
ಬ್ಯಾಡಗಿ ವಿರೂಪಾಕ್ಷಪ್ಪ ಬಳ್ಳಾರಿ
ಹಿರೇಕೆರೂರು ಬಿ.ಸಿ.ಪಾಟೀಲ್‌
ರಾಣೇಬೆನ್ನೂರು ಅರುಣ್‌ಕುಮಾರ ಪೂಜಾರ
ಹಡಗಲಿ ಕೃಷ್ಣ ನಾಯ್‌್ಕ
ವಿಜಯನಗರ ಸಿದ್ದಾಥ್‌ರ್‍ ಸಿಂಗ್‌
ಕಂಪ್ಲಿ ಸುರೇಶ್‌ ಬಾಬು
ಶಿರಗುಪ್ಪ ಸೋಮಲಿಂಗಪ್ಪ
ಬಳ್ಳಾರಿ ಗ್ರಾಮೀಣ ಬಿ. ಶ್ರೀರಾಮುಲು
ಬಳ್ಳಾರಿ ನಗರ ಗಾಲಿ ಸೋಮಶೇಖರ ರೆಡ್ಡಿ
ಸಂಡೂರು ಶಿಲ್ಪಾ ರಾಘವೇಂದ್ರ
ಕೂಡ್ಲಿಗಿ ಲೋಕೇಶ್‌ ನಾಯಕ್‌
ಮೊಳಕಾಲ್ಮೂರು ಎಸ್‌.ತಿಪ್ಪೇಸ್ವಾಮಿ
ಚಳ್ಳಕೆರೆ ಅನಿಲ್‌ ಕುಮಾರ್‌
ಚಿತ್ರದುರ್ಗ ಜಿ.ಎಚ್‌.ತಿಪ್ಪಾರೆಡ್ಡಿ
ಹಿರಿಯೂರು ಪೂರ್ಣಿಮಾ ಶ್ರೀನಿವಾಸ್‌
ಹೊಸದುರ್ಗ ಎಸ್‌.ಲಿಂಗಮೂರ್ತಿ
ಹೊಳಲ್ಕೆರೆ ಎಂ.ಚಂದ್ರಪ್ಪ
ಜಗಳೂರು ರಾಮಚಂದ್ರ
ಹರಿಹರ ಬಿ.ಪಿ.ಹರೀಶ್‌
ಹೊನ್ನಾಳಿ ಎಂ.ಪಿ.ರೇಣುಕಾಚಾರ್ಯ
ಶಿವಮೊಗ್ಗ ಗ್ರಾಮಾಂತರ ಅಶೋಕ್‌ ನಾಯಕ್‌
ಭದ್ರಾವತಿ ಮಂಗೋಟಿ ರುದ್ರೇಶ್‌
ತೀರ್ಥಹಳ್ಳಿ ಅರಗ ಜ್ಞಾನೇಂದ್ರ
ಶಿಕಾರಿಪುರ ಬಿ.ವೈ.ವಿಜಯೇಂದ್ರ
ಸೊರಬ ಕುಮಾರ್‌ ಬಂಗಾರಪ್ಪ
ಸಾಗರ ಹರತಾಳು ಹಾಲಪ್ಪ
ಕುಂದಾಪುರ ಕಿರಣ್‌ ಕುಮಾರ್‌ ಕೊಡ್ಗಿ
ಉಡುಪಿ ಯಶಪಾಲ್‌ ಸುವರ್ಣ
ಕಾಪು ಗುರ್ಮೆ ಸುರೇಶ್‌ ಶೆಟ್ಟಿ
ಕಾರ್ಕಳ ವಿ. ಸುನಿಲ್‌ ಕುಮಾರ್‌
ಶೃಂಗೇರಿ ಡಿ.ಎನ್‌.ಜೀವರಾಜ್‌
ಚಿಕ್ಕಮಗಳೂರು ಸಿ.ಟಿ.ರವಿ
ತರೀಕೆರೆ ಡಿ.ಎಸ್‌. ಸುರೇಶ್‌
ಕಡೂರು ಬೆಳ್ಳಿ ಪ್ರಕಾಶ್‌
ಚಿಕ್ಕನಾಯಕಹಳ್ಳಿ ಜೆ.ಸಿ ಮಾಧುಸ್ವಾಮಿ
ತಿಪಟೂರು ಬಿ.ಸಿ. ನಾಗೇಶ್‌
ತುರುವೇಕೆರೆ ಮಸಾಲ ಜಯರಾಂ
ಕುಣಿಗಲ್‌ ಕೃಷ್ಣಕುಮಾರ್‌
ತುಮಕೂರು ನಗರ ಜ್ಯೋತಿ ಗಣೇಶ್‌
ತುಮಕೂರು ಗ್ರಾಮಾಂತರ ಸುರೇಶ್‌ ಗೌಡ
ಕೊರಟಗೆರೆ ಬಿ.ಎಚ್‌.ಅನಿಲ್‌ ಕುಮಾರ್‌
ಶಿರಾ ರಾಜೇಶ್‌ ಗೌಡ
ಪಾವಗಡ ಕೃಷ್ಣ ನಾಯಕ್‌
ಮಧುಗಿರಿ ಎಲ್‌.ಸಿ.ನಾಗರಾಜ್‌
ಗೌರಿಬಿದನೂರು ಡಾ.ಶಶಿಧರ್‌
ಬಾಗೇಪಲ್ಲಿ ಎಸ್‌. ಮುನಿರಾಜ್‌
ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್‌
ಚಿಂತಾಮಣಿ ವೇಣುಗೋಪಾಲ್‌
ಶ್ರೀನಿವಾಸಪುರ ಗುಂಜೂರು ಶ್ರೀನಿವಾಸ ರೆಡ್ಡಿ
ಮುಳಬಾಗಿಲು ಶೀಗೇಹಳ್ಳಿ ಸುಂದರ್‌
ಬಂಗಾರಪೇಟೆ ಎಂ. ನಾರಾಯಣಸ್ವಾಮಿ
ಕೋಲಾರ ವರ್ತೂರು ಪ್ರಕಾಶ್‌
ಮಾಲೂರು ಕೆ.ಎಸ್‌.ಮಂಜುನಾಥ ಗೌಡ
ಯಲಹಂಕ ಎಸ್‌.ಆರ್‌.ವಿಶ್ವನಾಥ್‌
ಕೆ.ಆರ್‌.ಪುರ- ಬಿ.ಎ.ಬಸವರಾಜ್‌
ಬ್ಯಾಟರಾಯನಪುರ ತಮ್ಮೇಶ್‌ ಗೌಡ
ಯಶವಂತಪುರ ಎಸ್‌.ಟಿ.ಸೋಮಶೇಖರ್‌
ರಾಜರಾಜೇಶ್ವರಿ ನಗರ ಮುನಿರತ್ನ
ದಾಸರಹಳ್ಳಿ ಮುನಿರಾಜು
ಮಹಾಲಕ್ಷ್ಮಿ ಕೆ.ಗೋಪಾಲಯ್ಯ
ಮಲ್ಲೇಶ್ವರ ಡಾ.ಸಿ.ಎನ್‌.ಅಶ್ವತ್ಥನಾರಾಯಣ
ಪುಲಿಕೇಶಿ ನಗರ ಮುರಳಿ
ಸರ್ವಜ್ಞ ನಗರ ಪದ್ಮನಾಭರೆಡ್ಡಿ
ಸಿ.ವಿ. ರಾಮನ್‌ನಗರ ಎಸ್‌.ರಘು
ಶಿವಾಜಿ ನಗರ ಎನ್‌.ಚಂದ್ರ
ಶಾಂತಿನಗರ ಶಿವಕುಮಾರ್‌
ಗಾಂಧಿನಗರ ಎ.ಆರ್‌.ಸಪ್ತಗಿರಿಗೌಡ
ರಾಜಾಜಿನಗರ ಎಸ್‌ ಸುರೇಶ್‌ ಕುಮಾರ್‌
ವಿಜಯನಗರ ಎಚ್‌.ರವೀಂದ್ರ
ಚಾಮರಾಜಪೇಟೆ ಭಾಸ್ಕರ ರಾವ್‌
ಚಿಕ್ಕಪೇಟೆ ಉದಯ್‌ ಗರುಡಾಚಾರ್‌
ಬಸವನಗುಡಿ ರವಿ ಸುಬ್ರಹ್ಮಣ್ಯ
ಪದ್ಮನಾಭನಗರ ಆರ್‌. ಅಶೋಕ್‌
ಬಿಟಿಎಂ ಲೇಔಚ್‌ ಶ್ರೀಧರ ರೆಡ್ಡಿ
ಜಯನಗರ ಸಿ.ಕೆ. ರಾಮಮೂರ್ತಿ
ಬೊಮ್ಮನಹಳ್ಳಿ ಸತೀಶ್‌ ರೆಡ್ಡಿ
ಬೆಂಗಳೂರು ದಕ್ಷಿಣ ಎಂ.ಕೃಷ್ಣಪ್ಪ
ಆನೇಕಲ್‌ ಹುಲ್ಲಹಳ್ಳಿ ಶ್ರೀನಿವಾಸ್‌
ಹೊಸಕೋಟೆ ಎಂ.ಟಿ.ಬಿ.ನಾಗರಾಜು
ದೇವನಹಳ್ಳಿ ಪಿಳ್ಳಮುನಿಶಾಮಪ್ಪ
ದೊಡ್ಡಬಳ್ಳಾಪುರ ಧೀರಜ್‌ ಮುನಿರಾಜು
ನೆಲಮಂಗಲ ಸಪ್ತಗಿರಿ ನಾಯಕ್‌
ಮಾಗಡಿ ಪ್ರಸಾದ್‌ ಗೌಡ
ರಾಮನಗರ ಗೌತಮ್‌ ಗೌಡ
ಕನಕಪುರ ಆರ್‌.ಅಶೋಕ್‌
ಚನ್ನಪಟ್ಟಣ ಸಿ.ಪಿ. ಯೋಗೇಶ್ವರ್‌
ಮಳವಳ್ಳಿ ಮುನಿರಾಜು
ಮದ್ದೂರು ಎಸ್‌.ಪಿ.ಸ್ವಾಮಿ
ಮೇಲುಕೋಟೆ ಡಾ.ಇಂದ್ರೇಶ್‌ ಕುಮಾರ್‌
ಮಂಡ್ಯ ಅಶೋಕ ಜಯರಾಂ
ಶ್ರೀರಂಗಪಟ್ಟಣ ಇಂಡುವಾಳು ಸಚ್ಚಿದಾನಂದ
ನಾಗಮಂಗಲ ಸುಧಾ ಶಿವರಾಮ್‌
ಕೆ.ಆರ್‌.ಪೇಟೆ ನಾರಾಯಣಗೌಡ
ಬೇಲೂರು ಎಚ್‌.ಕೆ. ಸುರೇಶ್‌
ಹಾಸನ ಪ್ರೀತಮ್‌ ಗೌಡ
ಹೊಳೆನರಸೀಪುರ ದೇವರಾಜ ಗೌಡ
ಅರಕಲಗೂಡು ಯೋಗಾ ರಮೇಶ್‌
ಸಕಲೇಶಪುರ ಸಿಮೆಂಟ್‌ ಮಂಜು
ಬೆಳ್ತಂಗಡಿ ಹರೀಶ್‌ ಪೂಂಜಾ
ಮೂಡಬಿದ್ರೆ ಉಮಾಕಾಂತ್‌ ಕೋಟ್ಯಾನ್‌
ಮಂಗಳೂರು ನಗರ ಉತ್ತರ ವೈ. ಭರತ್‌ ಶೆಟ್ಟಿ
ಮಂಗಳೂರು ನಗರ ದಕ್ಷಿಣ ವೇದವ್ಯಾಸ ಕಾಮತ್‌
ಮಂಗಳೂರು ಸತೀಶ್‌ ಕುಂಪಾಲ
ಬಂಟ್ವಾಳ ರಾಜೇಶ್‌ ನಾಯ್‌್ಕ
ಪುತ್ತೂರು ಆಶಾ ತಿಮ್ಮಪ್ಪ
ಸುಳ್ಯ ಭಾಗೀರಥಿ ಮುರುಳ್ಯ
ಮಡಿಕೇರಿ ಅಪ್ಪಚ್ಚು ರಂಜನ್‌
ವಿರಾಜಪೇಟೆ ಕೆ.ಜೆ.ಬೋಪಯ್ಯ
ಪಿರಿಯಾಪಟ್ಟಣ ವಿಜಯಶಂಕರ್‌
ಕೃಷ್ಣರಾಜನಗರ ವೆಂಕಟೇಶ್‌ ಹೊಸಹಳ್ಳಿ
ಹುಣಸೂರು ದೇವರಹಳ್ಳಿ ಸೋಮಶೇಖರ್‌
ನಂಜನಗೂಡು ಬಿ.ಹರ್ಷವರ್ಧನ್‌
ಚಾಮುಂಡೇಶ್ವರಿ ಕವೀಶ್‌ ಗೌಡ
ಚಾಮರಾಜ ಎಲ್‌.ನಾಗೇಂದ್ರ
ನರಸಿಂಹರಾಜ ಸಂದೇಶ್‌ ಸ್ವಾಮಿ
ವರುಣಾ ವಿ.ಸೋಮಣ್ಣ
ಟಿ.ನರಸೀಪುರ ಡಾರೇವಣ್ಣ
ಹನೂರು ಪ್ರೀತಮ್‌ ನಾಗಪ್ಪ
ಕೊಳ್ಳೆಗಾಲ ಎನ್‌.ಮಹೇಶ್‌
ಚಾಮರಾಜನಗರ ವಿ.ಸೋಮಣ್ಣ
ಗುಂಡ್ಲುಪೇಟೆ ನಿರಂಜನಕುಮಾರ್‌

ಟಿಕೆಟ್‌ ಘೋಷಣೆಯಾಗದ ಸಸ್ಪೆನ್ಸ್‌ ಕ್ಷೇತ್ರಗಳು

ಹುಬ್ಬಳ್ಳಿ ಸೆಂಟ್ರಲ್‌ (ಜಗದೀಶ್‌ ಶೆಟ್ಟರ್‌)
ಗೋವಿಂದರಾಜನಗರ (ಸೋಮಣ್ಣ)
ಶಿವಮೊಗ್ಗ ನಗರ- (ಈಶ್ವರಪ್ಪ ನಿವೃತ್ತಿ)
ಮಹದೇವಪುರ (ಅರವಿಂದ ಲಿಂಬಾವಳಿ)
ಕೃಷ್ಣರಾಜ (ರಾಮದಾಸ್‌)
ಹಾವೇರಿ (ನೆಹರು ಓಲೇಕಾರ್‌)
ಮೂಡಿಗೆರೆ (ಎಂ.ಪಿ.ಕುಮಾರಸ್ವಾಮಿ)
ಗಂಗಾವತಿ (ಪರಣ್ಣ ಮುನವಳ್ಳಿ)
ರೋಣ (ಕಳಕಪ್ಪ ಬಂಡಿ)
ಹಾವೇರಿ (ನೆಹರು ಓಲೇಕಾರ್‌)
ಕೊಪ್ಪಳ (ಕರಡಿ ಸಂಗಣ್ಣ)

9 ಹಾಲಿಗಳಿಗೆ ಟಿಕೆಟಿಲ್ಲ

ಎಸ್‌.ಅಂಗಾರ- ಸುಳ್ಯ
ಲಕ್ಷ್ಮಣ ಸವದಿ- ಅಥಣಿ
ಗೂಳಿಹಟ್ಟಿಶೇಖರ್‌- ಹೊಸದುರ್ಗ
ರಘುಪತಿ ಭಟ್‌- ಉಡುಪಿ
ಸಂಜೀವ್‌ ಮಠಂದೂರು- ಪುತ್ತೂರು
ಲಾಲಾಜಿ ಮೆಂಡನ್‌- ಕಾಪು
ರಾಮಪ್ಪ ಲಮಾಣಿ- ಶಿರಹಟ್ಟಿ
ಅನಿಲ್‌ ಬೆನಕೆ- ಬೆಳಗಾವಿ ಉತ್ತರ
ಮುದ್ದಹನುಮೇಗೌಡ- ಕುಣಿಗಲ್‌
ಆರ್‌.ಶಂಕರ್‌- ರಾಣೆಬೆನ್ನೂರು
ಸೊಗಡು ಶಿವಣ್ಣ- ತುಮಕೂರು ನಗರ
ಶಿವರಾಂ (ಐಎಎಸ್‌)- ಆನೇಕಲ್‌

ಪ್ರಮುಖ ಹೊಸಮುಖ

ಬಿ.ವೈ.ವಿಜಯೇಂದ್ರ- ಶಿಕಾರಿಪುರ
ಭಾಸ್ಕರರಾವ್‌ (ಐಪಿಎಸ್‌)- ಚಾಮರಾಜಪೇಟೆ
ಅನಿಲ್‌ಕುಮಾರ್‌ (ಐಎಎಸ್‌)- ಕೊರಟಗೆರೆ
ಕಿರಣ್‌ ಕೊಡ್ಗಿ- ಕುಂದಾಪುರ
ಯಶಪಾಲ್‌ ಸುವರ್ಣ- ಉಡುಪಿ
ತಮ್ಮೇಶ್‌ಗೌಡ- ಬ್ಯಾಟರಾಯನಪುರ
ಆಶಾ ತಿಮ್ಮಪ್ಪ- ಪುತ್ತೂರು
ಭಾಗೀರಥಿ ಮುರುಳ್ಯ- ಸುಳ್ಯ
ಕವೀಶ್‌ಗೌಡ- ಚಾಮುಂಡೇಶ್ವರಿ
ಎಸ್‌.ಅಂಗಾರ ಬಿಟ್ಟು ಎಲ್ಲ ಸಚಿವರಿಗೂ ಟಿಕೆಟ್‌
ಸಚಿವ ಆನಂದ ಸಿಂಗ್‌ ಬದಲು ಪುತ್ರಗೆ ಮಣೆ
ಕಾಂಗ್ರೆಸ್‌-ಜೆಡಿಎಸ್‌ನಿಂದ ವಲಸೆ ಬಂದ ಸಚಿವರಿಗೆ ಟಿಕೆಟ್‌

ಮಕ್ಕಳಿಗೆ ಟಿಕೆಟ್‌ ಭಾಗ್ಯ

ನಿಖಿಲ್‌ ಕತ್ತಿ- ಹುಕ್ಕೇರಿ (ಉಮೇಶ್‌ ಕತ್ತಿ ಪುತ್ರ)
ಸಿದ್ಧಾರ್ಥ್‌ ಸಿಂಗ್‌- ವಿಜಯನಗರ (ಆನಂದ ಸಿಂಗ್‌ ಮಗ)
ವಿಜಯೇಂದ್ರ- ಶಿಕಾರಿಪುರ (ಯಡಿಯೂರಪ್ಪ ಪುತ್ರ)
ಅವಿನಾಶ್‌ ಜಾಧವ್‌- ಚಿಂಚೋಳಿ (ಉಮೇಶ್‌ ಜಾಧವ್‌ ಪುತ್ರ)
ಜ್ಯೋತಿ ಗಣೇಶ್‌- ತುಮಕೂರು ನಗರ (ಸಂಸದ ಬಸವರಾಜು ಪುತ್ರ)

ಕುಟುಂಬಸ್ಥರು

ರಮೇಶ್‌ ಜಾರಕಿಹೊಳಿ- ಗೋಕಾಕ್‌ (ಜಾರಕಿಹೊಳಿ ಕುಟುಂಬ)
ಬಾಲಚಂದ್ರ ಜಾರಕಿಹೊಳಿ- ಅರಭಾವಿ (ಜಾರಕಿಹೊಳಿ ಕುಟುಂಬ)
ರಮೇಶ್‌ ಕತ್ತಿ- ಚಿಕ್ಕೋಡಿ- ಸದಲಗಾ (ಉಮೇಶ್‌ ಕತ್ತಿ ಸೋದರ)
ರತ್ನಾ ಮಾಮನಿ- ಸವದತ್ತಿ ಯಲ್ಲಮ್ಮ (ಆನಂದ ಮಾಮನಿ ಪತ್ನಿ)
ಸುಧಾ ಶಿವರಾಮೇಗೌಡ- ನಾಗಮಂಗಲ (ಶಿವರಾಮೇಗೌಡ ಪತ್ನಿ)
ಶಶಿಕಲಾ ಜೊಲ್ಲೆ- ನಿಪ್ಪಾಣಿ (ಸಂಸದ ಜೊಲ್ಲೆ ಪತ್ನಿ)
ಕಾಂಗ್ರೆಸ್‌ನ ಡಿಕೆಶಿ, ಸಿದ್ದು ಕಟ್ಟಿಹಾಕಲು
ಅಶೋಕ್‌, ಸೋಮಣ್ಣಗೆ ಡಬಲ್‌ ಸೀಟು

ಡಿಕೆಶಿ, ಸಿದ್ದರಾಮಯ್ಯ ಕಟ್ಟಿಹಾಕಲು ಅಶೋಕ್‌, ಸೋಮಣ್ಣಗೆ ಡಬಲ್‌ ಸೀಟು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಕಂದಾಯ ಸಚಿವ ಆರ್‌.ಅಶೋಕ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಅಭ್ಯರ್ಥಿಗಳಾಗಿ ಬಿಜೆಪಿ ಕಣಕ್ಕಿಳಿಸಿದೆ. ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ತನ್ಮೂಲಕ ಮೂವರೂ ಪ್ರಬಲ ವಿಪಕ್ಷ ನಾಯಕರನ್ನು ಅವರ ಕ್ಷೇತ್ರಗಳಲ್ಲೇ ಕಟ್ಟಿಹಾಕಲು ಪ್ರಬಲ ತಂತ್ರ ರೂಪಿಸಿದೆ.
ಅಶೋಕ್‌ ಅವರಿಗೆ ಬೆಂಗಳೂರಿನ ಪದ್ಮನಾಭನಗರದ ಜತೆಗೆ ರಾಮನಗರ ಜಿಲ್ಲೆಯ ಡಿಕೆಶಿ ಸ್ಪರ್ಧಿಸುವ ಕನಕಪುರ ಕ್ಷೇತ್ರದ ಟಿಕೆಟ್‌ ಕೂಡ ಘೋಷಿಸಲಾಗಿದೆ. ಮತ್ತೊಂದೆಡೆ, ಸೋಮಣ್ಣ ಅವರಿಗೆ ಚಾಮರಾಜನಗರ ಕ್ಷೇತ್ರದ ಜತೆಗೆ ಸಿದ್ದರಾಮಯ್ಯ ಪ್ರತಿನಿಧಿಸುವ ಮೈಸೂರು ಜಿಲ್ಲೆಯ ವರುಣ ಕ್ಷೇತ್ರದ ಟಿಕೆಟ್‌ ಕೂಡ ನೀಡಲಾಗಿದೆ. ಆದರೆ ಸೋಮಣ್ಣ ಸ್ವಕ್ಷೇತ್ರದ ಬೆಂಗಳೂರಿನ ಗೋವಿಂದರಾಜನಗರಕ್ಕೆ ಯಾವುದೇ ಅಭ್ಯರ್ಥಿಯನ್ನು ಘೋಷಿಸದೆ ಕುತೂಹಲ ಮೂಡಿಸಲಾಗಿದೆ. 2018ರ ಚುನಾವಣೆಯಲ್ಲಿ ಬಿ.ಶ್ರೀರಾಮುಲು ಮಾತ್ರ ಬಿಜೆಪಿಯಿಂದ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಆದರೆ ಈ ಬಾರಿ ಅಶೋಕ್‌ ಹಾಗೂ ಸೋಮಣ್ಣ ಅವರಿಗೆ ಎರಡು ಕ್ಷೇತ್ರಗಳ ಟಿಕೆಟ್‌ ನೀಡಲಾಗಿದೆ.

52 ಹೊಸಮುಖ ವೃತ್ತಿಪರರು ಎಷ್ಟು?

31 ಸ್ನಾತಕೋತ್ತರ ಪದವೀಧರರು, 8 ಮಹಿಳೆಯರು, 5 ವಕೀಲರು, 9 ವೈದ್ಯರು, 3 ಶಿಕ್ಷಣ ತಜ್ಞರು, 1 ನಿವೃತ್ತ ಐಎಎಸ್‌, 1 ನಿವೃತ್ತ ಐಪಿಎಸ್‌, 3 ನಿವೃತ್ತ ಸರ್ಕಾರಿ ಅಧಿಕಾರಿಗಳು, 8 ಸಾಮಾಜಿಕ ಹೋರಾಟಗಾರರಿಗೆ ಅವಕಾಶ

ಯಾವ ವರ್ಗಕ್ಕೆ ಎಷ್ಟು?

32 ಒಬಿಸಿ, 30 ಎಸ್ಸಿ, 16 ಎಸ್‌ಟಿ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios