ಯಾದಗಿರಿ: ಬಿಜೆಪಿ ಉತ್ಸಾಹ ಇಮ್ಮ​ಡಿ​ಸಿದ ಅಮಿತ್‌ ಶಾ ರೋಡ್‌ ಶೋ!

ಆಡಳಿತಾರೂಢ ಶಾಸಕರ ವಿರುದ್ಧ ಮೂಡಿದ್ದ ಅಸಮಾಧಾನದ ಅಲೆಯಿಂದಾಗಿ ಕೊಂಚ ಕಮರಿದ್ದ ಯಾದಗಿರಿ ಬಿಜೆಪಿಗೆ ಮಂಗಳವಾರ ಕೇಂದ್ರ ಸಚಿವ ಅಮಿತ್‌ ಶಾ ನಡೆಸಿದ ರೋಡ್‌ ಶೋ ಬಲ ಮೂಡಿಸಿದೆ.

Amit Shahs road show that got BJP excited in yadgir at raichur rav

ಯಾದಗಿರಿ (ಏ.25) : ಆಡಳಿತಾರೂಢ ಶಾಸಕರ ವಿರುದ್ಧ ಮೂಡಿದ್ದ ಅಸಮಾಧಾನದ ಅಲೆಯಿಂದಾಗಿ ಕೊಂಚ ಕಮರಿದ್ದ ಯಾದಗಿರಿ ಬಿಜೆಪಿಗೆ ಮಂಗಳವಾರ ಕೇಂದ್ರ ಸಚಿವ ಅಮಿತ್‌ ಶಾ ನಡೆಸಿದ ರೋಡ್‌ ಶೋ ಬಲ ಮೂಡಿಸಿದೆ.

ಮಂಗಳವಾರ ಸಂಜೆ 4.20ರಿಂದ ಸುಮಾರು 1 ಗಂಟೆ ಕಾಲ ನಗರದ ವಾಲ್ಮಿಕಿ ವೃತ್ತದಿಂದ ಲಾಲ್‌ ಬಹಾದ್ದೂರ್‌ ಶಾಸ್ತಿ್ರ ವೃತ್ತದವರೆಗಿನ ಪ್ರಮುಖ ರಸ್ತೆಯಲ್ಲಿ ಅಮಿತ್‌ ಶಾ ನಡೆಸಿದ ರೋಡ್‌ ಶೋ ಬಿಜೆಪಿ ಉತ್ಸಾಹ ಇಮ್ಮಡಿಸಿದಂತಾಗಿದೆ. ಇದೇ ಮೊದಲ ಬಾರಿಗೆ ಆಗಮಿಸಿದ್ದ ಅಮಿತ್‌ ಶಾ(Amit shah) ಸ್ವಾಗತಕ್ಕಾಗಿ ಕೇಸರಿಮಯವಾಗಿದ್ದ ಯಾದಗಿರಿಯಲ್ಲಿ ರಾರ‍ಯಲಿಯುದ್ದಕ್ಕೂ ಸಾವಿರಾರು ಜನರು ಹೂಮಳೆಗೈದು ಸ್ವಾಗತಿಸಿದ್ದುದು ವಿಶೇಷ.

Party Rounds: ಏಷ್ಯಾನೆಟ್‌ ಸುವರ್ಣನ್ಯೂಸ್‌ ಜೊತೆ ಅಮಿತ್‌ ಶಾ ಎಕ್ಸ್‌ಕ್ಲೂಸಿವ್‌ ಸಂದರ್ಶನ!

4.15ರ ಸುಮಾರಿಗೆ ಹಲಿಕಾಪ್ಟರ್‌ ಮೂಲಕ ಯಾದಗಿರಿಗೆ ಆಗಮಿಸಿದ ಅಮಿತ್‌ ಶಾ, 4.20 ರ ಸುಮಾರಿಗೆ ಇಲ್ಲಿನ ವಾಲ್ಮಿಕಿ ವೃತ್ತದಲ್ಲಿ ತೆರೆದ ವಾಹನದ ರಾರ‍ಯಲಿ ರಥವೇರಿ ಚಾಲನೆ ನೀಡಿದರು. ಬಿಜೆಪಿ, ಮೋದಿ(Narenddra Modi) ಹಾಗೂ ತಮಗೆ ಜೈಕಾರಗಳ ಕೂಗುತ್ತಿದ್ದ ಜನರತ್ತ ಹೂಗಳ ಚೆಲ್ಲಿ, ಜನಸಮೂಹದತ್ತ ಕೈಬೀಸಿ, ನಮಸ್ಕರಿಸುತ್ತ ಸಾಗಿದ ಅಮಿತ್‌ ಶಾ, ನೆರೆದಿದ್ದ ಸಾವಿರಾರು ಜನರ ಕಂಡು ಪುಳಿಕಿತರಾದಂತಿತ್ತು. ಬಿಗಿ ಭದ್ರತೆಯ ಮಧ್ಯೆಯೂ ಜನರಿಗೆ ಹತ್ತಿರುವಾಗುತ್ತ ಸಾಗಿದ ಶಾ ಅವರನ್ನು ಕಂಡು ಜನರು ಮತ್ತಷ್ಟೂಖುಷಿಯಿಂದ ಕೂಗತೊಡಗಿದರು. ಲಾಲ್‌ ಬಹಾದ್ದೂರ್‌ ಶಾಸ್ತಿ್ರ ವೃತ್ತದಲ್ಲಿ ಸಮಾರೋಪಗೊಂಡ ರಾರ‍ಯಲಿ ನಂತರ ತೆರೆದ ವಾಹನದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.

2024ರಲ್ಲಿ ಮತ್ತೇ ಮೋದಿ ಪ್ರಧಾನಿ:

2024ರಲ್ಲಿ ಮತ್ತೇ ನರೇಂದ್ರ ಮೋದಿ(Narendra Modi)ಯವರನ್ನು ಪ್ರಧಾನಿಯನ್ನಾಗಿಸುವಿರಾ? ಎಂದು ಜನರತ್ತ ಪ್ರಶ್ನೆ ಎಸೆದ ಅಮಿತ್‌ ಶಾ ಮಾತುಗಳಿಗೆ ಮೋದಿ ಮೋದಿ ಘೋಷಣೆಗಳು ಮುಗಿಲು ಮುಟ್ಟಿದ್ದವು. ಕಲ್ಯಾಣ ಕರ್ನಾಟಕ (Kalyana karnataka) ಭಾಗದಲ್ಲಿ ಪ್ರಚಾರದ ವೇಳೆ ಇಂತಹ ಉತ್ಸಾಹ ನೋಡಿಲ್ಲ ಎಂದು ಹರ್ಷ ವ್ಯಕ್ತಪಡಿಸಿದ ಅಮಿತ್‌ ಶಾ, ಕಾಂಗ್ರೆಸ್‌ ಸರ್ಕಾರದಲ್ಲಿ ಮುಸ್ಲಿಮರಿಗೆ ನೀಡಿದ್ದ ಶೇ.4 ಮೀಸಲಾತಿಯನ್ನು ನಾವು (ಬಿಜೆಪಿ ಸರ್ಕಾರ) ರದ್ದು ಮಾಡಿ ಒಕ್ಕಲಿಗ, ಲಿಂಗಾಯತ ಹಾಗೂ ಎಸ್ಸಿ/ಎಸ್ಟಿವರ್ಗದವರಿಗೆ ನೀಡಿದ್ದೇವೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮತ್ತೆ ಮುಸ್ಲಿಮರಿಗೆ ಮೀಸಲಾತಿ ನೀಡುತ್ತದೆ. ಹೀಗಾಗಿ, ನೀವು ಅಭಿವೃದ್ಧಿ, ಭದ್ರತೆ ಹಾಗೂ ಸಾಮಾಜಿಕ ದೃಷ್ಟಿಕೋನದಿಂದ ಬಿಜೆಪಿಗೆ ಬಹುಮತ ನೀಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತನ್ನಿ. ಜೊತೆಗೆ 2024ರ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿಯರವನ್ನು ಪ್ರಧಾನಿಯನ್ನಾಗಿಸಿ ಎಂದು ಮನವಿ ಮಾಡಿದರು.

ಯಾದಗಿರಿ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್‌ ಪರ ಮತಯಾಚಿಸಿದ ಅಮಿತ್‌ ಶಾ, ಬಿಜೆಪಿ ಕಮಲದ ಚಿನ್ಹೆಗೆ ಮತ ನೀಡುವ ಮೂಲಕ ಡಬ್ಬಲ್‌ ಎಂಜಿನ್‌ ಸರ್ಕಾರ ಕರ್ನಾಟಕದಲ್ಲಿ, ದಕ್ಷಿಣ ಭಾರತದಲ್ಲಿ ಬಲಿಷ್ಠವಾಗಲಿ ಎಂದು ಆಶಿಸಿದರು. ಪ್ರಧಾನಿ ಮೋದಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.

ಸರ್ಕಾರ ಮಾಡುವಷ್ಟು ನಂಬರ್‌ ಕಾಂಗ್ರೆಸ್‌ಗೆ ಬರೋದೇ ಇಲ್ಲ: ಅಮಿತ್‌ ಶಾ ಲೇವಡಿ

ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್‌(Raja Amareshwar nayak), ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್‌, ಮಾಜಿ ಶಾಸಕ ಡಾ. ವೀರಬಸವಂತ ರೆಡ್ಡಿ ಮುದ್ನಾಳ್‌, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್‌, ಅಲೆಮಾರಿ ನಿಗಮದ ಅಧ್ಯಕ್ಷ ದೇವೇಂದ್ರ ನಾದ್‌, ನಗರಸಭೆ ಅಧ್ಯಕ್ಷ ಸುರೇಶ್‌ ಅಂಬಿಗೇರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆತುಮಕೂರು ರಾರ‍ಯಲಿ ವೇಳೆ ಅಮಿತ್‌ ಶಾ ಜೊತೆಗಿದ್ದರು. ಜಾರ್ಖಂಡ ಶಾಸಕ ಹಾಗೂ ಯಾದಗಿರಿ ಚುನಾವಣೆಯ ಪಕ್ಷದ ಉಸ್ತುವಾರಿ ಅನಂತ ಓಜಾ ಶಾ ಅವರನ್ನು ಭೇಟಿ ಮಾಡಿದರು.

Latest Videos
Follow Us:
Download App:
  • android
  • ios