Karnataka Politics: ರಾಜ್ಯಕ್ಕೆ ಬರಲಿದ್ದಾರೆ ಅಮಿತ್ ಶಾ...ಅವರ ಮುಂದೆಯೇ ಸಂಪುಟ ಫೈನಲ್

* ಏ.1ಕ್ಕೆ ಗೃಹ ಸಚಿವ ಅಮಿತ್‌ ಶಾ ರಾಜ್ಯ ಭೇಟಿ ಸಾಧ್ಯತೆ: ಸಂಪುಟ ಕಸರತ್ತಿನ ಚರ್ಚೆ?
* ಅಧಿಕೃತ ಕಾರ್ಯಕ್ರಮಗಳು ರಾಜ್ಯದಲ್ಲಿವೆ
* ಪಂಚ ರಾಜ್ಯಗಳ ಫಲಿತಾಂಶದ ನಂತರದ ಭೇಟಿ

Amit Shah to visit Karnataka  on April 1 and cabinet reshuffle mah

ಬೆಂಗಳೂರು(ಮಾ. 18) ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah)  ಅವರು ಬರುವ ಏ.1ಕ್ಕೆ ರಾಜ್ಯಕ್ಕೆ ಆಗಮಿಸುವ ಸಾಧ್ಯತೆಯಿದೆ. ಅವರು ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಆಗಮಿಸುತ್ತಿದ್ದು, ಇದೇ ವೇಳೆ ಸಂಪುಟ ಕಸರತ್ತಿನ(cabinet reshuffle) ಬಗ್ಗೆಯೂ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಯುವುದೇ ಎಂಬುದು ಕುತೂಹಲಕರವಾಗಿದೆ.

ಕೇಂದ್ರದ ಸಹಕಾರ ಇಲಾಖೆಯ ಹೊಣೆಯನ್ನೂ ಹೊತ್ತಿರುವ ಅವರು ರಾಜ್ಯ ಸಹಕಾರ ಇಲಾಖೆಯ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ ರಾಜ್ಯದ ಗೃಹ ಇಲಾಖೆಯೂ ಕಾರ್ಯಕ್ರಮ ಆಯೋಜಿಸುವ ಸಂಭವವಿದೆ. ಇದಲ್ಲದೆ ಸುತ್ತೂರು ಮತ್ತು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಚುನಾವಣೆ ಮುಗಿದ ಬಳಿಕ ಚರ್ಚೆ ಮಾಡೋಣ ಎಂಬ ಮಾತನ್ನು ಶಾ ಹೇಳಿದ್ದರು

Congress G 23 Leaders Meeting ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಜಿ23 ನಾಯಕರ ಸಭೆ, ವಿಭಜನೆ ಆಗುತ್ತಾ ಕಾಂಗ್ರೆಸ್?

ಚುನಾವಣೆ ಬೆನ್ನಲ್ಲೇ ರಾಜ್ಯದಲ್ಲಿ ಬಜೆಟ್‌ ಅಧಿವೇಶನ ನಡೆಯುತ್ತಿರುವುದರಿಂದ ಅದು ಮುಗಿಯುವವರೆಗೆ ಸಂಪುಟ ಕಸರತ್ತಿನ ಬಗ್ಗೆ ಯಾವುದೇ ಚರ್ಚೆ ಬೇಡ ಎಂಬ ನಿಲವಿಗೆ ಪಕ್ಷದ ನಾಯಕರು ಬಂದಿದ್ದರು. ಇದೀಗ ಅಮಿತ್‌ ಶಾ ಅವರು ರಾಜ್ಯಕ್ಕೆ ಬರುವ ಹೊತ್ತಿಗೆ ಬಜೆಟ್‌ ಅಧಿವೇಶನವೂ ಮುಗಿದಿರುತ್ತದೆ. ಹೀಗಾಗಿ, ಅವರು ರಾಜ್ಯಕ್ಕೆ ಬಂದಾಗಲೇ ಮಾತುಕತೆ ನಡೆಯಬಹುದು ಎನ್ನಲಾಗುತ್ತಿದೆ.

ಎರಡು ಸಾರಿ ಮಂತ್ರಿಆದವರಿಗೆ ಕೋಕ್:   ರಾಜ್ಯ ಬಿಜೆಪಿಗೆ ಪಂಚರಾಜ್ಯ ಚುನಾವಣಾ ಫಲಿತಾಂಶ ಉತ್ಸಾಹ ತುಂಬಿದೆ. ಈ ಫಲಿತಾಂಶದ ಬೆನ್ನಲ್ಲೇ ರಾಜ್ಯ ಸಚಿವ ಸ್ಥಾನ ಆಕಾಂಕ್ಷಿಗಳ ಚಟುವಟಿಕೆಗಳು ಗರಿಗೆದರಿವೆ. ಅವರಲ್ಲಿನ ಉತ್ಸಾಹ, ನಿರೀಕ್ಷೆ ಹೆಚ್ಚಾಗಿದೆ. ಇದೇ ವೇಳೆ ಹಿರಿಯ ಸಚಿವರಲ್ಲಿ ಆತಂಕವೂ ಕಾಣಿಸಿಕೊಂಡಿದೆ. ಪುನಾರಚನೆಯೇ ಅಂತಿಮಗೊಂಡಲ್ಲಿ ವಯಸ್ಸಿನಲ್ಲಿ ಹಿರಿಯರಾಗಿರುವ ಅಥವಾ ಎರಡು ಬಾರಿ ಸಚಿವರಾಗಿರುವರನ್ನು ಪಕ್ಷ ಸಂಘಟನೆ  ಕಡೆ ಕಳಿಸಬಹುದು ಎನ್ನಲಾಗಿತ್ತು.

 

 

 

Latest Videos
Follow Us:
Download App:
  • android
  • ios