Congress G 23 Leaders Meeting ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಜಿ23 ನಾಯಕರ ಸಭೆ, ವಿಭಜನೆ ಆಗುತ್ತಾ ಕಾಂಗ್ರೆಸ್?

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದಯನೀಯ ಸೋಲು

ಪಕ್ಷದ ಹಿರಿಯ ನಾಯಕರು ಹಾಗೂ ಗಾಂಧಿ ಕುಟುಂಬದ ನಡುವೆ ಭಿನ್ನಾಭಿಪ್ರಾಯ

ಕಳೆದ 24 ಗಂಟೆಯಲ್ಲಿ 2ನೇ ಬಾರಿಗೆ ಜಿ23 ನಾಯಕರ ಸಭೆ

Is the grand old Party about to split again the group of 23 leaders of the congress are set to meet again san

ನವದೆಹಲಿ (ಮಾ. 17): ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ಕಾಂಗ್ರೆಸ್ ಸೋತ ನಂತರ, ಪಕ್ಷದಲ್ಲಿ ಹೊಸ ಸಂಘರ್ಷ ಹುಟ್ಟಿಕೊಂಡಿದೆ. ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ದೊಡ್ಡ ಮಟ್ಟದಲ್ಲಿ ತಲೆದೋರಿದ್ದು, ಜಿ23 ಗುಂಪಿನ  ( G 23 Leaders ) ನಾಯಕರು ಗುರುವಾರ ಸಂಜೆ ಹಿರಿಯ ನಾಯಕ ಗುಲಾ ನಬಿ ಆಜಾದ್ (ghulam Nabi Azad) ಅವರ ನಿವಾಸದಲ್ಲಿ ಸಭೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಕಪಿಲ್ ಸಿಬಲ್ (Kapil Sibal) ಹಾಗೂ ಹರಿಯಾಣದ (Haryana) ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಹೂಡಾ (Bhupinder Singh Hooda) ಕೂಡ ಗುಲಾಂ ನಬಿ ಆಜಾದ್ ಮನೆಗೆ ತಲುಪಿದ್ದಾರೆ.

ಭೂಪೇಂದ್ರ ಸಿಂಗ್ ಹೂಡಾ ಮೂಲಕ ಪಕ್ಷದ ರೆಬಲ್ ನಾಯಕರೊಂದಿಗೆ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ (Rahul Gandhi) ಮಾತನಾಡಿದ್ದರು. ಅದರ ಬೆನ್ನಲ್ಲಿಯೇ ಜಿ23 ಗುಂಪಿನ ಮತ್ತೊಂದು ಸಭೆ ನಿಗದಿಯಾಗಿದೆ. ಈ ಭಿನ್ನಾಭಿಪ್ರಾಯಗಳು ಕಾಂಗ್ರೆಸ್ ಅನ್ನು ಮತ್ತೊಮ್ಮೆ ವಿಭಜನೆಯ ಅಂಚಿಗೆ ಕರೆದೊಯ್ಯಬಹುದು ಎಂದು ಅಂದಾಜಿಸಲಾಗಿದೆ. 

ಕಾಂಗ್ರೆಸ್ ನಲ್ಲಿ ಈ ರೀತಿಯ ಬಂಡಾಯ ಹೊಸತೇನಲ್ಲ. ಇಂಥ ಬಂಡಾಯ ಎದ್ದಾಗಲೆಲ್ಲಾ ಕಾಂಗ್ರೆಸ್ ಚುಕ್ಕಾಣಿ ಹಿಡಿಯೋರು ಸಿಗಬಹುದು ಎಂಬ ಭರವೆಸೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡುತ್ತೆ. ಗಾಂಧಿ ಪರಿವಾರಕ್ಕೆ ನಿಷ್ಠರಾಗಿರುವವರು ಅಥವಾ ಪಕ್ಷಕ್ಕೆ ನಿಷ್ಠರಾಗಿರುವವರು ಅಧ್ಯಕ್ಷರಾಗಬಹುದೋ ಎಂಬ ಲೆಕ್ಕಚಾರಗಳೂ ನಡೆಯುತ್ತೆ. 

ಆದರೆ, ಯಾವುದೇ ಅಂತಿಮ ನಿರ್ಧಾರಕ್ಕೆ ಬರುವಲ್ಲಿ ಪಕ್ಷ ವಿಫಲವಾಗುತ್ತೆ. ಸೂಕ್ತ ನಾಯಕರಲ್ಲಿದೆ ಐತಿಹಾಸಿಕ ರಾಷ್ಟ್ರೀಯ ಪಕ್ಷ ಅಂಬಿಗನಿಲ್ಲದ ದೋಣಿಯಂತಾಗುತ್ತದೆ. ಪಕ್ಷವನ್ನು ಸಂಘಟಿಸುವ ನಾಯಕ ಪಕ್ಷದ ಚುಕ್ಕಾಣಿ ಹಿಡಿಯೋಲ್ಲ. ಹಾಗಂತೆ ಈ ಆಗಾಗ ಪಕ್ಷದ ವಿರುದ್ಧ ಧ್ವನಿ ಎತ್ತುವ, ಬಂಡಾಯದ ಬಾವುಟ ಹಾರಿಸುವ ಈ ಹಿರಿಯ ಮುಖಂಡರೂ ಪಕ್ಷ ತೊರೆಯೋಲ್ಲ. ಮತ್ತೊಂದು ಚುನಾವಣೆ ಬರುತ್ತೆ. ಸಂಘಟನೆಯ ಕೊರತೆಯಿಂದ ಕಾಂಗ್ರೆಸ್ ಮತ್ತಷ್ಟು ಕಡಿಮೆ ಸ್ಥಾನಗಳನ್ನು ಗೆಲ್ಲುವುದು ಗ್ಯಾರಂಟಿ. ಇದು ಮೋದಿಗೆ ಸಹಕಾರಿಯಾಗಲಿದೆ ಹೊರತು, ಕಾಂಗ್ರೆಸ್ ನಲ್ಲಿ ದಿಟ್ಟ ನಿರ್ಧಾರದ ಕೊರತೆ ಯಾವಾಗಲೂ ಕಾಡಲಿದೆ. ಸೂಕ್ತ ಅಧ್ಯಕ್ಷರ ಆಯ್ಕೆ ಆಗೋ ತನಕ ಪಕ್ಷವನ್ನು ಸರಿ ದಾರಿಗೆ ಕೊಂಡೋಯ್ಯುವುದು ಕಷ್ಟವೆಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

G-23 Meet ಬಂಡಾಯ ನಾಯಕರ ಸಭೆಗೆ ಶಶಿ ತರೂರ್ ಹಾಜರ್, ಕಾಂಗ್ರೆಸ್‌ನಲ್ಲಿ ತಳಮಳ!
ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಜಿ 23 ರ ಕೆಲವೇ ಸದಸ್ಯರು ಸಭೆ ಸೇರಲಿದ್ದಾರೆ. ಹೂಡಾ ಮತ್ತು ಮಾಜಿ ಸಚಿವ ಕಪಿಲ್ ಸಿಬಲ್ ಅವರು ಆಜಾದ್ ಅವರ ಮನೆಗೆ ಸಭೆಗೆ ಆಗಮಿಸುತ್ತಿರುವುದು ಕಂಡುಬಂದಿದೆ. ಈ ಹಿಂದೆ, ಜಿ 23 ರಾಹುಲ್ ಗಾಂಧಿಯಲ್ಲಿ "ನಂಬಿಕೆ ಹೊಂದಿಲ್ಲ" ಎಂದು ಹೇಳಿತ್ತು, ಹಾಗೂ ನಾಯಕತ್ವ ಬದಲಾವಣೆಯ ಬೇಡಿಕೆಯಲ್ಲಿ ದೃಢವಾಗಿ ಉಳಿದಿತ್ತು. ಐದು ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಸೋಲಿನ ಬಗ್ಗೆ ಚರ್ಚಿಸಲು ಬುಧವಾರ ನಡೆದ ಸಭೆಯ ನಂತರ, ಜಿ 23 "ಸಾಮೂಹಿಕ ಮತ್ತು ಅಂತರ್ಗತ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವುದು" ಮಾದರಿಯನ್ನು ಅಳವಡಿಸಿಕೊಳ್ಳುವುದು ಕಾಂಗ್ರೆಸ್‌ನ ಮುಂದಿರುವ ಏಕೈಕ ಮಾರ್ಗವಾಗಿದೆ ಎಂದು ಹೇಳಿದೆ.

ಹಿರಿಯ ಕಾಂಗ್ರೆಸ್ಸಿಗ ಗುಲಾಂ ನಬೀ ಆಜಾದ್‌ ತಮ್ಮನ ಮಗ BJP ತೆಕ್ಕೆಗೆ
ಬುಧವಾರದ ಸಭೆಯಲ್ಲಿ ಉಪಸ್ಥಿತರಿದ್ದ ಜಿ 23 ಸದಸ್ಯ ಶಂಕರ್ ಸಿಂಗ್ ವಘೇಲಾ ಅವರು ಸಾಂಸ್ಥಿಕ ರಚನೆಯಲ್ಲಿ ಪುನಶ್ಚೇತನಕ್ಕೆ ಕರೆ ನೀಡಿದರು ಮತ್ತು ಗುಂಪಿಗೆ ರಾಹುಲ್ ಗಾಂಧಿಯಲ್ಲಿ ನಂಬಿಕೆ ಇಲ್ಲ ಎಂದು ಹೇಳಿದರು. "ನಮಗೆ ರಾಹುಲ್ ಗಾಂಧಿಯಲ್ಲಿ ನಂಬಿಕೆ ಇಲ್ಲ... ಹೊಸ ನಾಯಕತ್ವ ಬರಬೇಕು. ನಾವು ಕಾಂಗ್ರೆಸ್‌ನ ಸುಧಾರಣೆಯನ್ನು ಬಯಸುತ್ತೇವೆ. ಇತರ ನಾಯಕರು ಶೀಘ್ರದಲ್ಲೇ ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ ”ಎಂದು ವಘೇಲಾ ಮಾಧ್ಯಮಕ್ಕೆ ತಿಳಿಸಿದ್ದರು.

Latest Videos
Follow Us:
Download App:
  • android
  • ios