Asianet Suvarna News Asianet Suvarna News

Karnataka Election 2023: ಅಮಿತ್‌ ಶಾ ಭಾಷಣ 8ನೇ ಅದ್ಭುತ: ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯ

ಅಮಿತ್‌ ಶಾ ಅವರ ಭಾಷಣ 8ನೇ ಅದ್ಭುತವಿದ್ದಂತೆ. ಬಿಜೆಪಿಯವರು ಈಗ ಭ್ರಷ್ಟಾಚಾರಮುಕ್ತ ರಾಜ್ಯ ಮಾಡುತ್ತೇವೆ ಎನ್ನುತ್ತಾರೆ. ಅಧಿಕಾರಕ್ಕೆ ಬಂದು ಮೂರು ವರ್ಷ ಆಯ್ತು, ಈವರೆಗೆ ಏನು ಮಾಡುತ್ತಿದ್ದರು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

Amit Shah Speech 8th Awesome says HD Kumaraswamy at teerthahalli rav
Author
First Published Feb 25, 2023, 4:28 AM IST

ಶಿವಮೊಗ್ಗ (ಫೆ.25) : ಅಮಿತ್‌ ಶಾ ಅವರ ಭಾಷಣ 8ನೇ ಅದ್ಭುತವಿದ್ದಂತೆ. ಬಿಜೆಪಿಯವರು ಈಗ ಭ್ರಷ್ಟಾಚಾರಮುಕ್ತ ರಾಜ್ಯ ಮಾಡುತ್ತೇವೆ ಎನ್ನುತ್ತಾರೆ. ಅಧಿಕಾರಕ್ಕೆ ಬಂದು ಮೂರು ವರ್ಷ ಆಯ್ತು, ಈವರೆಗೆ ಏನು ಮಾಡುತ್ತಿದ್ದರು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ತೀರ್ಥಹಳ್ಳಿ(Teerthahalli) ತಾಲೂಕಿನ ಹುಂಚದ ಕಟ್ಟೆ(Hunchadakatte)ಯಲ್ಲಿ ಮಾತನಾಡಿ, ಈ ಮೊದಲು ಬಿಜೆಪಿಯವರು ನರೇಂದ್ರ ಮೋದಿ(Narendra Modi), ಅಮಿತ್‌ ಶಾ(Amit shah) ನೋಡಿ ಮತ ಕೊಡಿ ಎನ್ನುತ್ತಿದ್ದರು. ಪೇಶ್ವೆ ಡಿಎನ್‌(Peshve DNA)ಎ ಇರುವ ವ್ಯಕ್ತಿ ರಾಜ್ಯದ ಸಿಎಂ ಆಗಬಾರದು. ಅದಕ್ಕೆ ಅವಕಾಶ ನೀಡಲ್ಲ ಎಂದು ನಾನು ಹೇಳಿದ್ದಕ್ಕೆ ಬಿಜೆಪಿ ನಾಯಕರು ಈಗ ಯಡಿಯೂರಪ್ಪ(BS Yadiyurappa) ಅವರ ಹೆಸರನ್ನು ಮುಂದಕ್ಕೆ ತರುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ರಾಜಕೀಯದಿಂದ ನಿವೃತ್ತಿ ಕೊಡಿಸಿ, ಈಗ ಅವರ ಮುಖ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

 

Pancharatna rathayatre:: ಮೂರು ತಿಂಗಳು ತಡೀರಿ ಸೈಕಲ್ ಕೊಡ್ತೇನೆ; ಶಾಲಾ ಮಕ್ಕಳಿಗೆ ಮಾತುಕೊಟ್ಟ ಕುಮಾರಣ್ಣ

ಅಮಿತ್‌ ಶಾ ಅವರು ದೇವೇಗೌಡರ ಕುಟುಂಬ(HD Devegowda Family)ದಲ್ಲಿ ಎಲ್ಲರೂ ರಾಜಕೀಯ ಮಾಡುವುದಾದರೆ ಮನೆ ಕೆಲಸ ಮಾಡುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಅಮಿತ್‌ ಶಾ ಅವರಿಗೆ ನಮ್ಮ ಮನೆ ಕೆಲಸದ ಬಗ್ಗೆ ಕಾಳಜಿ ಇರುವುದಕ್ಕೆ ಧನ್ಯವಾದ. ಯಡಿಯೂರಪ್ಪ ಅವರ ಇಬ್ಬರು ಮಕ್ಕಳು ರಾಜಕೀಯಕ್ಕೆ ಬಂದಿದ್ದಾರೆ. ಅವರ ಮನೆಯ ಕೆಲಸವನ್ನು ಯಾರು ಮಾಡುತ್ತಿದ್ದಾರೆ ಎಂದು ಅವರಿಗೆ ಕೇಳಿದ್ದರೆ ಅವರೇ ಅವರ ಪ್ರಶ್ನೆಗೆ ಉತ್ತರ ಕೊಡುತ್ತಿದ್ದರು ಎಂದು ಲೇವಡಿ ಮಾಡಿದರು.

ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಸಾಧ್ಯ. ತಮಿಳುನಾಡು(Tamilunadu), ತೆಲಂಗಾಣ(Telangana), ಆಂಧ್ರಪ್ರದೇಶ(Andhrapradesh)ದಲ್ಲಿ ಅಭಿವೃದ್ಧಿ ಆಗಿಲ್ವಾ? . ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಭ್ರಷ್ಟಾಚಾರ ಯಾವ ಮಟ್ಟಿಗಿದೆ ಎಂಬುದು ಅಂಕಿ-ಅಂಶ ತೆಗೆದರೆ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

HD Kumaraswamy: ಇಂದು ತೀರ್ಥಹಳ್ಳಿಗೆ ಎಚ್‌ಡಿಕೆ: ಹಸಿ ಅಡಕೆ ಬೃಹತ್‌ ಹಾರ, ಟೋಪಿ ರೆಡಿ!

ಜೆಡಿಎಸ್‌ ಗಟ್ಟಿಯಾಗಿದೆ:

ಜೆಡಿಎಸ್‌, ಕೇವಲ ಎರಡು ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಖಾತೆ ತೆರೆಯುತ್ತೇವೆ. ಉತ್ತರ ಕರ್ನಾಟಕದಲ್ಲಿ ಈ ಬಾರಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕರಾವಳಿ ಭಾಗದಲ್ಲಿ ನಾನು ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇನೆ. ಅಲ್ಲಿನ ಜನರ ನಾಡಿಮಿಡಿತ ತಿಳಿದುಕೊಂಡಿದ್ದೇನೆ. ಉಳಿದಂತೆ ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಸಂಪೂರ್ಣವಾಗಿ ಗಟ್ಟಿಯಾಗಿದೆ ಎಂದರು.

Follow Us:
Download App:
  • android
  • ios