ಅಮಿತ್‌ ಶಾ ದೇಶದ ಮತ್ತೊಬ್ಬ ಉಕ್ಕಿನ ಮನುಷ್ಯ: ವಿಜಯೇಂದ್ರ

ದೇಶದ ಅಭಿವೃದ್ಧಿಗೆ ಅಮಿತ್ ಶಾ ಸಂಕಲ್ಪ ಮಾಡಿದ್ದಾರೆ. ಜಮ್ಮು ಕಾಶ್ಮೀರದ ಆರ್ಟಿಕಲ್ಸ್ 370 ರದ್ದು ಸೇರಿದಂತೆ ಅನೇಕ ಕಾನೂನು ಜಾರಿಗೊಳಿಸಿದ್ದಾರೆ. ಅಂತಹವರ ಆಗಮನದಿಂದ ಇಡೀ ರಾಜ್ಯದಲ್ಲಿ ಸಂಚಲನ ಉಂಟಾಗಿದೆ. ಇದು ಕೇವಲ ರಾಜಕೀಯಕ್ಕೆ ಮಾತ್ರವಲ್ಲದೆ, ಎಲ್ಲಾ ಹಂತದಲ್ಲಿಯೂ ಸಂಚಲನ ಸೃಷ್ಟಿಯಾಗಿದೆ ಎಂದು ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

Amit Shah is another Iron Man of India Says BY Vijayendra grg

ಮೈಸೂರು(ಫೆ.12): ಇತ್ತೀಚಿನ ದಿನಗಳಲ್ಲಿ ಸಾಧ್ಯವಾಗದ ಕಾನೂನುಗಳನ್ನು ಅಮಿತ್‌ಶಾ ಅವರು ಜಾರಿಗೊಳಿಸುವ ಮೂಲಕ ಮತ್ತೊಬ್ಬ ಸರ್ದಾರ್‌ ವಲ್ಲಬಾಯ್‌ ಪಟೇಲರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಣ್ಣಿಸಿದರು.

ಜಿಲ್ಲೆಯ ಸುತ್ತೂರಿನಲ್ಲಿ ನಡೆದ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಅಮಿತ್ ಶಾ ಸಂಕಲ್ಪ ಮಾಡಿದ್ದಾರೆ. ಜಮ್ಮು ಕಾಶ್ಮೀರದ ಆರ್ಟಿಕಲ್ಸ್ 370 ರದ್ದು ಸೇರಿದಂತೆ ಅನೇಕ ಕಾನೂನು ಜಾರಿಗೊಳಿಸಿದ್ದಾರೆ. ಅಂತಹವರ ಆಗಮನದಿಂದ ಇಡೀ ರಾಜ್ಯದಲ್ಲಿ ಸಂಚಲನ ಉಂಟಾಗಿದೆ. ಇದು ಕೇವಲ ರಾಜಕೀಯಕ್ಕೆ ಮಾತ್ರವಲ್ಲದೆ, ಎಲ್ಲಾ ಹಂತದಲ್ಲಿಯೂ ಸಂಚಲನ ಸೃಷ್ಟಿಯಾಗಿದೆ ಎಂದು ಹೇಳಿದರು.

ಬಿಎಸ್‌ವೈ ಮನವಿಗೆ ಸ್ಪಂದನೆ: ವಿಐಎಸ್ಎಲ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ, ಸಿಂಧಿಯಾಗೆ ಅಮಿತ್ ಶಾ ಪತ್ರ

ಸುತ್ತೂರು ಮಠ ಆಧ್ಯಾತ್ಮಿಕ ಚಟುವಟಿಕೆ ಮೂಲಕ ವಿಶ್ವವ್ಯಾಪಿ ಜ್ಞಾನ ಪಸರಿಸಿದೆ, ವಿನೂತನ ಸಾಧನೆ ಮಾಡಿದೆ. ಕನ್ನಡ ನಾಡು ಮಠ ಮಾನ್ಯಗಳ ನಾಡು. ಪರಂಪರೆಯ ಮಹಾಕೊಂಡಿಯಾಗಿ ರಾಜ್ಯದ ಮೂಲೆಮೂಲೆಗಳಲ್ಲಿ ಸೇವೆ ಸಲ್ಲಿಸಿದೆ. ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಕ್ಷೇತ್ರದಲ್ಲಿ ತನ್ನದೇ ಆದ ಸೇವೆ ಸಲ್ಲಿಸಿದೆ ಎಂದು ಅವರು ಬಣ್ಣಿಸಿದರು.

ಪ್ರಧಾನ ಮಂತ್ರಿ ಮೋದಿ ಅವರಿಗೂ ಕೂಡ ಮೈಸೂರು ಭಾಗದ ಸುತ್ತೂರು ಮಠದ ಬಗ್ಗೆ ಭಕ್ತಿ ಹೆಚ್ಚಿದೆ. ಹಾಗೆಯೇ ಅಮಿತ್ ಶಾ ಅವರು ಗೃಹ ಮಂತ್ರಿಯಾಗಿ ಮಾತ್ರವಲ್ಲ, ಮಠದ ಸದ್ಭಕ್ತರಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನದಲ್ಲಿ ಅತಿಹೆಚ್ಚು ಮಾರ್ಗದರ್ಶನ ಮಾಡಿದವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಹಾಗೂ ಸುತ್ತೂರು ಶ್ರೀಗಳು ಎಂದು ಹೇಳಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಜಾತ್ರಾ ಮಹೋತ್ಸವ ಆರು ದಿನಗಳಿಂದ ಶ್ರದ್ಧಾ ಭಕ್ತಿಗಳಿಂದ ನಡೆದಿದೆ. ಶ್ರೀಗಳ ಕೃಪೆ‌ ನಿರಂತರವಾಗಿ ಭಕ್ತರಿಗೆ ದೊರೆಯುತ್ತಿದೆ. ಆಧ್ಯಾತ್ಮಿಕ, ಧಾರ್ಮಿಕ ಜೊತೆಗೆ ಗ್ರಾಮೀಣ ಜನರ ಜೀವನಗಳನ್ನು ಪುನರುಜ್ಜೀವನ‌ ಮಾಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ನಡೆಸಲಾಯಿತು ಎಂದರು.

ಸುತ್ತೂರಿನ ಜಾತ್ರಾ ಕಾರ್ಯಕ್ರಮ ತಮ್ಮ ತವರು ಮನೆಯ ಕಾರ್ಯಕ್ರಮ ಎಂದು ಅಪಾರ ಭಕ್ತರು ಭಾಗವಹಿಸಿದ್ದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕವಾಗಿ ಪರಮಪೂಜ್ಯರು ಮಠವನ್ನು ಬೆಳೆಸಿರುವುದನ್ನು ನಾವು ಸ್ಮರಿಸಬಹುದು ಎಂದು ಹೇಳಿದರು.

ಶಾಮನೂರು ಶಿವಶಂಕರಪ್ಪ ಅವರು ಕ್ಷೇತ್ರಕ್ಕೆ ಬಂದ ಸಂದರ್ಭದಲ್ಲಿ ಅತಿಥಿ ಗೃಹ ನಿರ್ಮಾಣ ಮಾಡುವ ನಿರ್ಧಾರ ಮಾಡಿ, ಕಲ್ಪಿಸಿಕೊಟ್ಟಿದ್ದಾರೆ. ಕಳೆದ ವರ್ಷವೇ ಉದ್ಘಾಟನೆ ಆಗಬೇಕಿತ್ತು ಎಂದ ಅವರು, ದೈವೆಚ್ಚೆಯಂತೆ ಇಂದು ಅವರ ಹಸ್ತದಿಂದಲೇ ಉದ್ಘಾಟನೆ ಆಗಿರುವುದು ಸಂತೋಷದ ಸಂಗತಿ ಎಂದರು.

ಅರುಣ್ ಅವರ ಬಾಲರಾಮ ಮೂರ್ತಿ ಅಯೋಧ್ಯೆಯಲ್ಲಿ ಉದ್ಘಾಟನೆ ಆಗಿದೆ, ಅವರಿಗೆ ಅದೃಷ್ಟ ಒಲಿದು ಬಂದಿದ್ದು, ಅರುಣ್ ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದರು ಎಂಬುದು ಸಂತಸದ ಸಂಗತಿ ಎಂದು ಹೇಳಿದರು.

ಅಮಿತ್‌ ಶಾ ಅವರಿಗೆ ಮೈಸೂರಿನ ಗುರುಗಳಿಂದ ಪಾಠ

ಅಮಿತ್ ಶಾ ಅವರು ದೇಶದ ಹಿಂದಿನ ದೊಡ್ಡ ಶಕ್ತಿ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಂತೆ ಹಾಗೂ ಚಾಣಕ್ಯನ ಶಕ್ತಿ ಹೊಂದಿದ್ದಾರೆ. ದೇಶದ ಏಕತೆ, ಸಮಗ್ರತೆ ಹಾಗೂ ಪರಂಪರೆ ಉಳಿಸುವ ನಿಟ್ಟಿನಲ್ಲಿ ಅಮಿತ್ ಶಾ ಅವರು ಹಲವು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರ ಅಭಿವೃದ್ಧಿಪರ ತೀರ್ಮಾನಗಳ ಹಿಂದೆ ಶಾ ಅವರು ಇದ್ದಾರೆ ಎಂದರು.

ಅಮಿತ್‌ಶಾ ಅವರು ವೇದ, ಉಪನಿಷತ್ ಎಲ್ಲವನ್ನೂ ಅಧ್ಯಯನ ಮಾಡಿದ್ದು, ಇದಕ್ಕೆ ಕಾರಣರು ಮೈಸೂರಿನ ಗುರುಗಳು

ನೀತಿಗೆಟ್ಟ ರಾಜಕಾರಣಕ್ಕೆ ಜಗದೀಶ ಶೆಟ್ಟರ್ ಉದಾಹರಣೆ; ಬಿಜೆಪಿ ಮರುಸೇರ್ಪಡೆಯಾಗಿದ್ದಕ್ಕೆ ವೀರಶೈವ ಮುಖಂಡರು ಆಕ್ರೋಶ

ಮೈಸೂರು ಸಂಸ್ಥಾನದ ಅಂತ್ಯವಾದಾಗ ಅಲ್ಲಿನ ಪಂಡಿತರೆಲ್ಲರೂ ದೇಶದ ಮೂಲೆ ಮೂಲೆಗೆ ಹೋದರು. ಹೀಗೆ ಹೋದವರಲ್ಲಿ ಮೈಸೂರಿನ ಅರಮನೆಯಲ್ಲಿದ್ದ ಕೇಶವ ಪಂಡಿತರು ಕೂಡ ಒಬ್ಬರು. ಅವರು ಗುಜರಾತ್‌ ಗೆ ಹೋಗಿ ಅಮಿತ್‌ ಶಾ ಅವರ ತಂದೆಯ ಆಶ್ರಯಕ್ಕೆ ಸೇರಿದರು.

ಅವರಿಂದ ಅಮಿತ್‌ ಶಾ ಅವರಿಗೆ ಮನೆಯಲ್ಲಿಯೇ ವೇದಾಗಮನದ ಶಿಕ್ಷಣ ಆಯಿತು. ಅದ್ದರಿಂದ ಶಾ ಅವರು ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕ ಆರ್‌. ಅಶೋಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಂಸದ ಪ್ರತಾಪ ಸಿಂಹ, ಮಾಜಿ ಸಂಸದ ಪ್ರಭಾಕರ ಕೋರೆ ಇದ್ದರು.

Latest Videos
Follow Us:
Download App:
  • android
  • ios