ಕೊಟ್ಟೂರು[ಜ.16]: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕುತೂಹಲ ನನಗೆ ಕಾಡುತ್ತಿಲ್ಲ. ಬದಲಾಗಿ ವಿಜಯನಗರ ಜಿಲ್ಲೆ ರಚನೆಯ ಅಧಿಕೃತ ಆದೇಶ ಆದಷ್ಟುಬೇಗ ಹೊರಬೀಳಲೆಂದು ಕಾಯುತ್ತಿರುವೆ ಎಂದು ಹೊಸಪೇಟೆ ಶಾಸಕ ಆನಂದ್‌ ಸಿಂಗ್‌ ಹೇಳಿದರು.

ಉಜ್ಜಯಿನಿಯ ಸದ್ದರ್ಮಪೀಠದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವನಾಗುವ ಅವಶ್ಯಕತೆಯೂ ನನ​ಗಿ​ಲ್ಲ. ಸಚಿವ ಸಂಪುಟ ವಿಸ್ತ​ರಣೆ ಯಾವಾಗ ನಡೆ​ಯ​ಲಿದೆ ಎಂದು ನಾನು ಹೇಳಲಾರೆ. ಈ ವಿಷಯ ಕುರಿತು ದಿನಾಂಕ ನಿಗದಿ ಮಾಡಲು ಮುಖ್ಯಮಂತ್ರಿ ಮತ್ತು ಬಿಜೆಪಿ ವರಿಷ್ಠ ಮಂಡಳಿ ತೀರ್ಮಾನ ಕೈಗೊಳ್ಳಲಿದೆ ಎಂದ​ರು.

ವಿಜಯನಗರ ಜಿಲ್ಲೆಗೆ ಶಾಸಕ ಸಿಂಗ್‌ ಆಗ್ರಹ: ಸಿಎಂ ಮೌನ, ಹುಸಿಯಾದ ನಿರೀಕ್ಷೆ

ವಿಜಯನಗರ ಜಿಲ್ಲೆ ರಚನೆಗೆ ಈ ಹಿಂದೆ ಸಿಎಂ ಯಡಿಯೂರಪ್ಪ ಬಳಿ ನಿಯೋಗ ಒಯ್ದು ಮನವಿ ಪತ್ರ ಸಲ್ಲಿಸಿದ್ದೆ. ಜಿಲ್ಲೆ ರಚನೆ ವಿಷಯ ಇಷ್ಟೊಂದು ಮಹತ್ವ ಪಡೆಯಲು ಉಜ್ಜಯಿನಿ ಜಗದ್ಗುರುಗಳು ನಿಯೋಗದ ನೇತೃತ್ವ ವಹಿಸಿದ್ದೇ ಪ್ರಬಲ ಕಾರಣ.

ಜಗದ್ಗುರುಗಳ ಒತ್ತಾಸೆಯಿಂದ ಮುಖ್ಯಮಂತ್ರಿ ಕೂಡಲೇ ಬಳ್ಳಾರಿ ಜಿಲ್ಲಾಧಿಕಾರಿಗಳ ಮೂಲಕ ವಿಜಯನಗರ ಜಿಲ್ಲೆ ರಚನೆಯ ಪೂರಕ ಮಾಹಿತಿಗಳನ್ನು ಪಡೆದು ಆದೇಶ ಹೊರಡಿಸುವುದಾಗಿ ಮಾತು ಕೊಟ್ಟಿದ್ದರು. ಈಗಾಗಲೇ ಜಿಲ್ಲಾಡಳಿತ ಮತ್ತು ನಾನು ಇದಕ್ಕೆ ಸಂಬಂಧಿಸಿದ ಪೂರಕ ಮಾಹಿತಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದರು.

ಮಂತ್ರಿಗಿರಿ, ವಿಜಯನಗರ ಜಿಲ್ಲೆ ಎರಡನ್ನೂ ಪಡೆಯುತ್ತೇನೆ: ಆನಂದ ಸಿಂಗ್‌