ಸಚಿವಾಕಾಂಕ್ಷಿಗಳಿಗೆ ಭಾರೀ ನಿರಾಸೆ: ಸಿಎಂ, ಡಿಸಿಎಂ ಜತೆ 8 ಜನ ಸಚಿವರ ಪ್ರಮಾಣ ವಚನ
26 ರಿಂದ 28 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲು ಸಿದ್ಧತೆ ನಡೆದಿತ್ತು. ನಾಯಕರ ನಡುವೆ ಗೊಂದಲ ಮುಂದುವರೆದ ಹಿನ್ನಲೆಯಲ್ಲಿ ಸದ್ಯಕ್ಕೆ ದೊಡ್ಡ ಸಂಖ್ಯೆಯ ಸಂಪುಟವನ್ನ ಹೈಕಮಾಂಡ್ ಕೈ ಬಿಟ್ಟಿದೆ.
ಬೆಂಗಳೂರು(ಮೇ.20): ಮಂತ್ರಿಗಿರಿಗಾಗಿ ಭಾರೀ ಲಾಬಿ ನಡೆಸುತ್ತಿದ್ದ ಶಾಸಕರಿಗೆ ಭಾರೀ ನಿರಾಸೆಯಾಗಿದೆ. ಹೌದು, ಇಂದು(ಶನಿವಾರ) ಸಿಎಂ ಮತ್ತು ಡಿಸಿಎಂ ಜೊತೆ 8 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ನಿನ್ನೆ(ಶುಕ್ರವಾರ) 26 ರಿಂದ 28 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲು ಸಿದ್ಧತೆ ನಡೆದಿತ್ತು. ನಾಯಕರ ನಡುವೆ ಗೊಂದಲ ಮುಂದುವರೆದ ಹಿನ್ನಲೆಯಲ್ಲಿ ಸದ್ಯಕ್ಕೆ ದೊಡ್ಡ ಸಂಖ್ಯೆಯ ಸಂಪುಟವನ್ನ ಹೈಕಮಾಂಡ್ ಕೈ ಬಿಟ್ಟಿದೆ. ಜಮೀರ್ ಅಹಮದ್ ಖಾನ್ ಸೇರಿದಂತೆ 8 ಮಂದಿ ಸಚಿವರ ಪಟ್ಟಿ ಕ್ಲಿಯರ್ ಆಗಿದೆ.
ಕಾಂಗ್ರೆಸ್ 5 ಗ್ಯಾರಂಟಿ ಸ್ಕೀಂ ಜಾರಿ ಹೇಗೆ?: ರಾಜ್ಯ ಸರ್ಕಾರದ ಬೊಕ್ಕಸಕ್ಕೆ 65,000 ಕೋಟಿ ಹೆಚ್ಚುವರಿ ಹೊರೆ
ಪ್ರಮಾಣ ವಚನ ಸ್ವೀಕಾರ ಮಾಡಲಿರುವ ನೂತನ ಸಚಿವರು
ಎಂ.ಬಿ. ಪಾಟೀಲ್
ಡಾ.ಜಿ. ಪರಮೇಶ್ವರ
ಕೆ.ಎಚ್.ಮುನಿಯಪ್ಪ
ಕೆ.ಜೆ. ಜಾರ್ಜ್
ಸತೀಶ್ ಜಾರಕಿಹೊಳಿ
ಪ್ರಿಯಾಂಕ್ ಖರ್ಗೆ
ಜಮೀರ್ ಅಹಮದ್ ಖಾನ್
ರಾಮಲಿಂಗ ರೆಡ್ಡಿ
ಮೊದಲ ಸಚಿವ ಸಂಪುಟದಲ್ಲಿ ಆರು ಸಮುದಾಯಕ್ಕೆ ಅವಕಾಶ
ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಆರು ಸಮುದಾಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಐದು ಸಮುದಾಯಕ್ಕೆ ಒಂದೊಂದು ಸಚಿವ ಸ್ಥಾನ, ದಲಿತ ಸಮುದಾಯಕ್ಕೆ ಮೂರು ಸ್ಥಾನ, ಅದರಲ್ಲಿ ದಲಿತ ಬಲ ಸಮುದಾಯಕ್ಕೆ ಎರಡು, ದಲಿತ ಎಡ ಸಮುದಾಯಕ್ಕೆ ಒಂದು ಸಚಿವ ಸ್ಥಾನ ನೀಡಲಾಗಿದೆ.
ಸಿದ್ದರಾಮಯ್ಯ ಅವರೇ ಶಾಸಕಿಯರಿಗೆ ಪ್ರಮುಖ ಖಾತೆ ನೀಡಿ: ಪೂಜಾ ಗಾಂಧಿ
ಲಿಂಗಾಯತ, ಎಂ.ಬಿ. ಪಾಟೀಲ್
ದಲಿತ ಬಲ, ಡಾ. ಜಿ.ಪರಮೇಶ್ವರ್
ದಲಿತ ಬಲ, ಪ್ರಿಯಾಂಕ್ ಖರ್ಗೆ
ದಲಿತ ಎಡ, ಕೆ.ಎಚ್. ಮುನಿಯಪ್ಪ
ಕ್ರಿಶ್ಚಿಯನ್, ಕೆ.ಜೆ. ಜಾರ್ಜ್
ಎಸ್ಟಿ (ವಾಲ್ಮೀಕಿ) ಸತೀಶ್ ಜಾರಕಿಹೊಳಿ
ಮುಸ್ಲಿಂ, ಜಮೀರ್ ಅಹಮದ್ ಖಾನ್
ರೆಡ್ಡಿ ಸಮುದಾಯ, ರಾಮಲಿಂಗಾ ರೆಡ್ಡಿ