ಮರಾಠಿಗರು ಒಗ್ಗೂಡಿದರೆ ಎಲ್ಲ ಪಕ್ಷಗಳು ಪರಿಗಣಿಸುತ್ತೆ: ಸಚಿವ ಸಂತೋಷ್‌ ಲಾಡ್

ವಿವಿಧ ಉಪ ಪಂಗಡಗಳನ್ನು ಹೊಂದಿರುವ ಮರಾಠಾ ಸಮಾಜದ ಸಕಲ ಮರಾಠಿಗರು ಒಂದಾಗಬೇಕು. ಆಗ ಮಾತ್ರ ಎಲ್ಲ ಪಕ್ಷಗಳು ಪರಿಗಣಿಸುತ್ತವೆ ಎಂದು ರಾಜ್ಯದ ಕಾರ್ಮಿಕ ಸಚಿವ ಮತ್ತು ಲೋಕಸಭಾ ಚುನಾವಣೆಯ ಉಸ್ತುವಾರಿ ಸಂತೋಷ್‌ ಲಾಡ್ ಕರೆ ನೀಡಿದರು. 

All parties will consider if Marathas unite Says Minister Santosh Lad gvd

ಬೀದರ್ (ನ.10): ವಿವಿಧ ಉಪ ಪಂಗಡಗಳನ್ನು ಹೊಂದಿರುವ ಮರಾಠಾ ಸಮಾಜದ ಸಕಲ ಮರಾಠಿಗರು ಒಂದಾಗಬೇಕು. ಆಗ ಮಾತ್ರ ಎಲ್ಲ ಪಕ್ಷಗಳು ಪರಿಗಣಿಸುತ್ತವೆ ಎಂದು ರಾಜ್ಯದ ಕಾರ್ಮಿಕ ಸಚಿವ ಮತ್ತು ಲೋಕಸಭಾ ಚುನಾವಣೆಯ ಉಸ್ತುವಾರಿ ಸಂತೋಷ್‌ ಲಾಡ್ ಕರೆ ನೀಡಿದರು. ನಗರದ ಹೊಟೇಲ್ ಕಸ್ತೂರಿ ಇಂಟರನ್ಯಾಷನಲ್ ಸಭಾಂಗಣದಲ್ಲಿ ಜಿಲ್ಲಾ ಸಕಲ ಮರಾಠಾ ಸಮಾಜದಿಂದ ಏರ್ಪಡಿಸಿದ ಸಮಾಜ ಚಿಂತನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮರಾಠಿಗರ ಅಭಿವೃದ್ಧಿಗಾಗಿ ದುಡಿಯುವ ಅಭ್ಯರ್ಥಿಗೆ ಬೆಂಬಲಿಸಿ ತಮ್ಮ ತಮ್ಮ ವೈಯಕ್ತಿಕ ವಿಚಾರ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಕಲ ಮರಾಠ ಸಮುದಾಗಳ ಏಳ್ಗೆಗಾಗಿ ಒಂದೇ ಸೂರಿನಡಿ ಸೇರಿ ಮರಾಠಿಗರು ಸುಸಂಘಟಿತರಾಗಬೇಕು ಎಂದರು.

ಬೇರೆ ಪಕ್ಷದವರು ಮರಾಠಿಗರನ್ನು ಒಡೆಯಲು ಹಿಂದು-ಮುಸ್ಲಿಂ ಹೆಸರಿನಲ್ಲಿ ಹೇಳಿಕೆ ನೀಡಿ ಬಲಿಷ್ಠ ಮರಾಠಾ ಸಮುದಾಯ ಒಡೆದು ಹಾಕುವ ಕುಟಿಲ ನೀತಿ ಅನುಸರಿಸಬಹುದು. ಅಥವಾ ಷಡ್ಯಂತ್ರ ಮಾಡಬಹುದು. ಹೀಗಾಗಿ ಸಕಲ ಮರಾಠಿಗರು ಅಂತಹ ಹೇಳಿಕೆಗಳಿಗೆ ವಿಚಲಿತರಾಗದೆ ಸಮಾಜ ಬಾಂಧವರು ಒಗ್ಗಟ್ಟಾಗಿರಬೇಕು. ಒಗ್ಗಟ್ಟಿನಲ್ಲಿಯೇ ಶಕ್ತಿ ಇದೆ ಎಂಬುದನ್ನು ಮರೆಯಬಾರದು. ಆಗ ಮಾತ್ರ ಯಾವ ಪಕ್ಷದವರೇ ಆಗಲಿ ನಿಮ್ಮ ಬೇಡಿಕೆಗೆ ಮನ್ನಣೆ ನೀಡಬಹುದು ಎಂದರು.

ಶಿವಾಜಿರಾವ ಮುಂಗನಾಳಕರ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಮಾಜದ ಮುಖಂಡರಾದ ನಾರಾಯಣ ಗಣೇಶ ವಕೀಲರಿಗೆ ಪಕ್ಷದಿಂದ ಟಿಕೆಟ್ ನೀಡಬೇಕೆಂದು ಮನವಿ ಮಾಡಿದರು. ಮಾಜಿ ಎಂಎಲ್‌ಸಿ ವಿಜಯಸಿಂಗ್ ಮಾತನಾಡಿ, ಮರಾಠಾ ಸಮಾಜ ಬೀದರ್‌ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ. ಸುಮಾರು ಮೂರುವರೆ ಲಕ್ಷ ಜನಸಂಖ್ಯೆ ಹೊಂದಿರುವ ಸಮಾಜ ಭಿನ್ನಾಭಿಪ್ರಾಯಗಳನ್ನು ಮರೆತು ಸಂಘಟಿತರಾಗಿರಬೇಕು ಎಂದರು.

ಬರಗಾಲದಲ್ಲಿ ರೈತರಿಗೆ ಸಾಂತ್ವನ ಹೇಳದ ರಾಜ್ಯ ಸರ್ಕಾರ: ಕೆ.ಎಸ್.ಈಶ್ವರಪ್ಪ ಆರೋಪ

ಪತ್ರಕರ್ತ ಹಾಗೂ ಸಮಾಜ ಮುಖಂಡರಾದ ಪ್ರದೀಪ ಬಿರಾದಾರ ಅವರು ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಕ್ಕೆ ಸಚಿವ ಸಂತೋಷ ಲಾಡ್, ಮಾಜಿ ಶಾಸಕ ವಿಜಯಸಿಂಗ್, ವಿಜಯಕುಮಾರ ಕಣಜಿ ಸೇರಿದಂತೆ ಅನೇಕ ಗಣ್ಯರು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷ ಪದ್ಮಾಕರ ಪಾಟೀಲ, ನಾರಾಯಣ ಗಣೇಶ ವಕೀಲರು, ಅಬ್ದುಲ್ ಮನ್ನಾನ್ ಸೇಠ್, ಗೋರಕ ಶ್ರೀಮಾಳೆ, ವೈಜಿನಾಥ ತಗಾರೆ, ಸಂತೋಷ, ಅನೀಲ ಕಾಳೆ, ಮಾರುತಿ ವಾಡಿಕಾರ, ಕೆರಬಾ ಪವಾರ್, ರಾಜೆಂದ್ರ ಸಿಂಧೆ, ಅಮರ ಜಾಧವ, ಆನಂದ ಪಾಟೀಲ, ಸತೀಶ ಸೂರ್ಯವಂಶಿ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios