Asianet Suvarna News Asianet Suvarna News

ಸೊಸೆಯಂತೆ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ : ಬಿಜೆಪಿ ಸೇರ್ಪಡೆ ಬಗ್ಗೆ ಸುಧಾಕರ್‌

  • ‘ಮನೆಯ ಮಗಳು ಏನು ಮಾಡಿದರೂ ನಡೆಯುತ್ತೆ. ಆದರೆ ಮನೆಯ ಸೊಸೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು’
  •  ವಲಸಿಗರೇ ಬಿಜೆಪಿಯನ್ನು ಚೆನ್ನಾಗಿ ಕಟ್ಟುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಹೇಳಿಕೆಗೆ ಸಂಬಂಧಿಸಿ ಆರೋಗ್ಯ ಸಚಿವ ಡಾ.ಸುಧಾಕರ್‌ ಪ್ರತಿಕ್ರಿಯೆ
all migrant leaders  working For strengthen BJP Says Minister Sudhakar snr
Author
Bengaluru, First Published Oct 4, 2021, 7:33 AM IST

 ನವದೆಹಲಿ (ಅ.04): ‘ಮನೆಯ ಮಗಳು ಏನು ಮಾಡಿದರೂ ನಡೆಯುತ್ತೆ. ಆದರೆ ಮನೆಯ ಸೊಸೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು’

-ಇದು ವಲಸಿಗರೇ ಬಿಜೆಪಿಯನ್ನು (BJP) ಚೆನ್ನಾಗಿ ಕಟ್ಟುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಹೇಳಿಕೆಗೆ ಸಂಬಂಧಿಸಿ ಆರೋಗ್ಯ ಸಚಿವ ಡಾ.ಸುಧಾಕರ್‌ (Dr K sudhakar) ಅಭಿಪ್ರಾಯ.

ನವೆಂಬರ್- ಡಿಸಂಬರ್ ಅಂತ್ಯಕ್ಕೆ ಮಕ್ಕಳಿಗೆ ಲಸಿಕೆ ಸಾಧ್ಯತೆ: ಡಾ. ಸುಧಾಕರ್

ಮನೆ ಸೊಸೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಆ ಮನೆಯವರಿಗೆ ಒಳಿತನ್ನು ಮಾಡಬೇಕು. ಈ ಹಿನ್ನೆಲೆಯಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಇದೇ ವೇಳೆ ಪ್ರತಿಪಕ್ಷದ ಮುಖಂಡ ಸಿದ್ದರಾಮಯ್ಯ (Siddaramaiah) ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದ ಅವರು, 30 ರಿಂದ 40 ವರ್ಷಗಳ ಕಾಲ ಗಾಂಧಿ ಕುಟುಂಬವನ್ನು ಬೈದವರು ಈಗ ಅದೇ ಪಕ್ಷಕ್ಕೆ ಹೋಗಿ ಗಾಂಧಿ ಕುಟುಂಬವನ್ನು ಹೊಗಳುತ್ತಾರೆ. ಕಾಂಗ್ರೆಸ್‌ನಲ್ಲಿ (Congress) ಇರುವರೆಲ್ಲಾ ಕಾಂಗ್ರೆಸ್‌ನವರಲ್ಲ, ಅಲ್ಲಿಗೂ ಬೇರೆ ಪಕ್ಷಗಳಿಂದ, ಜನತಾ ಪರಿವಾರದಿಂದಲೇ ಬಂದವರೇ ಹೆಚ್ಚು ಎಂದರು.

ಕಾಂಗ್ರೆಸ್ ವಿರುದ್ಧ ಬಹಿಂಗ ಅಸಮಾಧಾನ 

 

ರಾಜ್ಯದಲ್ಲಿ ಕೊರೋನಾದಿಂದ (corona) ಯಾರಾದರೂ ಸಾವನ್ನಪ್ಪಿದ್ದರೆ ಅದಕ್ಕೆ ನೇರ ಕಾರಣ ಕಾಂಗ್ರೆಸ್‌. ಸ್ವಾತಂತ್ರ್ಯಾನಂತರ ಕಾಂಗ್ರೆಸ್‌ ನಡೆಸಿರುವ ದುರಾಡಳಿತದಿಂದಲೇ ರಾಜ್ಯದಲ್ಲಿ ಕೊರೋನಾ ಅವಧಿಯಲ್ಲಿ ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ಕಾಂಗ್ರೆಸ್‌ನವರಿಗೆ ರಾಜ್ಯದ ಜನತೆ ಬಗ್ಗೆ ಯಾವುದೇ ಕಾಳಜಿ, ಬದ್ಧತೆ ಇಲ್ಲ. ಕೇವಲ ರಾಜಕೀಯ (Politics) ಹಿತಾಸಕ್ತಿಗಳಿಗಾಗಿ ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ. ದೇಶ ಹಾಗೂ ರಾಜ್ಯವು ಕೊರೋನಾ ನಿಯಂತ್ರಿಸಿರುವ ಪರಿಯ ಬಗ್ಗೆ ಇಡೀ ವಿಶ್ವವೇ ಕೊಂಡಾಡಿದೆ. ಗುರುವಾರ 5 ಗಂಟೆಗಳ ಕಾಲ ಆರೋಪ ಮಾಡಿರುವ ಕಾಂಗ್ರೆಸ್‌ನವರು ಇದೀಗ ಉತ್ತರ ಕೇಳದೆ ಹಿಟ್‌ ಅಂಡ್‌ ರನ್‌ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಳೆದ 60 ವರ್ಷದಿಂದ ಆಡಳಿತದಲ್ಲಿರುವ ಕಾಂಗ್ರೆಸ್‌ ರಾಜ್ಯದಲ್ಲಿ ಈವರೆಗೆ 725 ಐಸಿಯು (ICU) ಮಾತ್ರ ವ್ಯವಸ್ಥೆ ಮಾಡಿತ್ತು. ನಾವು 1 ವರ್ಷದಲ್ಲೇ 3,877 ಐಸಿಯು ಬೆಡ್‌ ವ್ಯವಸ್ಥೆ ಮಾಡಿದ್ದೇವೆ. ಈವರೆಗೆ ಕೇವಲ 4,847 ರಷ್ಟುಆಕ್ಸಿಜನ್‌ ಬೆಡ್‌ ಇತ್ತು. ಕಳೆದ 1 ವರ್ಷದಲ್ಲೇ 28,440 ಆಕ್ಸಿಜನ್‌ ಬೆಡ್‌ ಮಾಡಿದ್ದೇವೆ. ಆಕ್ಸಿಜನ್‌ ಸಂಗ್ರಹ ಸಾಮರ್ಥ್ಯವನ್ನು 320 ಟನ್‌ನಿಂದ 3,500 ಟನ್‌ಗೆ ಹೆಚ್ಚಳ ಮಾಡಿದ್ದೇವೆ. 5.40 ಕೋಟಿ ಡೋಸ್‌ ಲಸಿಕೆ ನೀಡಿದ್ದೇವೆ. ಹೀಗಾಗಿ ರಾಜ್ಯದಲ್ಲಿ ಕೊರೋನಾದಿಂದ ಯಾರಾದರೂ ಸಾವನ್ನಪ್ಪಿದ್ದರೆ ಅದಕ್ಕೆ ಕಾಂಗ್ರೆಸ್‌ ಪಕ್ಷವೇ ನೇರ ಕಾರಣ. ಅವರ ದುರಾಡಳಿತದಿಂದಲೇ ಜನ ಸಾವನ್ನಪ್ಪಿದ್ದಾರೆ ಎಂದು ದೂರಿದರು.

ಕಳೆದ 60 ವರ್ಷದಲ್ಲಿ ಕಾಂಗ್ರೆಸ್‌ ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ತಂದಿಲ್ಲ. ಈ ಬಗ್ಗೆ ಅಂಕಿ-ಅಂಶ ಸಹಿತ ಉತ್ತರ ನೀಡುತ್ತಿದ್ದರೂ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದಾರೆ. ಹೀಗಾಗಿ ಉತ್ತರವನ್ನು ಸದನದ ಮುಂದೆ ಮಂಡಿಸುತ್ತಿದ್ದು, ಕಡತಕ್ಕೆ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದರು.

Follow Us:
Download App:
  • android
  • ios