ಬೆಂಗಳೂರು, (ಜೂನ್. 03): ರಾಜ್ಯಸಭೆ ಚುನಾವಣೆಗೆ ದಿನಾಂಕ ನಿಗಧಿಯಾಗಿದ್ದು, ಇನ್ನು ಕೇವಲ 2 ವಾರಗಳು ಮಾತ್ರ ಬಾಕಿಯಿವೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಆಡಳಿತ ಪಕ್ಷ ಬಿಜೆಪಿಯಲ್ಲಿ ಗರಿಗೆದರಿದ್ದು, ಸೂಕ್ತ ಅಭ್ಯರ್ಥಿಯನ್ನು ಹುಡಕಾಟ ನಡೆಸಿದ್ದಾರೆ. ಇದರ ಮಧ್ಯೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ರಾಜ್ಯಸಭೆಗೆ ಕಳುಹಿಸುವಂತೆ ಮನವಿ ಮಾಡಿದೆ.

ಕರ್ನಾಟಕದ 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ..!

ಕೊನೇ ಗಳಿಗೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ ತೇಜಸ್ವನಿ ಅನಂತ್​ಕುಮಾರ್ ಬದಲಿಗೆ ತೇಜಸ್ವಿ ಸೂರ್ಯ ಅವರಿಗೆ ನೀಡಿತು. ಇದರಿಂದ ತೇಜಸ್ವಿನಿ ಅವರು ಸಹಜವಾಗಿಯೇ ಬೇಸರಗೊಂಡಿದ್ದರು. ಇದೀಗ ಅವರ ಅವರನ್ನ ರಾಜ್ಯಸಭೆ ಕಳುಹಿಸುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಹಣಮಂತ ಕೊಟಬಾಗಿ ರಾಜ್ಯ ಬಿಜೆಪಿಗೆ ಆಗ್ರಹಿಸಿದ್ದಾರೆ. 

ಹಣಮಂತ ಕೊಟಬಾಗಿ  ಮನವಿ ಇಂತಿದೆ.
ಕರ್ನಾಟಕದಲ್ಲಿ ರಾಜ್ಯಸಭಾ ಚುನಾವಣೆ ಬಂದಿದೆ ಇಂದಿನಿಂದಲೇ ನಾಮಪತ್ರ ಪ್ರಾರಂಭವಾಗಿ 9 ನೇ ತಾರೀಕಿನವರೆಗೆ  ನಾಮಪತ್ರ ಸಲ್ಲಿಸುವ ಕೊನೆಯ ದಿನವಾಗಿದೆ. ನಮ್ಮ ಪಕ್ಷದಿಂದ ಸನ್ಮಾನ್ಯ ಪ್ರಭಾಕರ ಕೋರೆ ಅವರು 2ಬಾರಿ ರಾಜ್ಯಸಭಾ ಸದಸ್ಯರಾಗಿ ಒಮ್ಮೆ ಕಾಂಗ್ರೆಸ್ಸಿನಿಂದ ರಾಜ್ಯಸಭಾ ಸದಸ್ಯರಾಗಿ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟುವುದರಲ್ಲಿ ಪ್ರಮುಖರಾದವರು ಸನ್ಮಾನ ಬಿಎಸ್ ಯಡಿಯೂರಪ್ಪನವರು ಮತ್ತು ಅನಂತ್ ಕುಮಾರ್ ರವರು ಕರ್ನಾಟಕದಲ್ಲಿ ಎಲ್ಲ ಹಳ್ಳಿಗಳಲ್ಲಿ ಸಂಚರಿಸಿ ಪಕ್ಷವನ್ನು ಕಟ್ಟಿ ಒಂದು ಸುಸ್ಥಿತಿಗೆ ಬರಲು ಕಾರಣವಾದವರು ಈ ಪ್ರಮುಖರು.

ಇಂದಿನ ಕರ್ನಾಟಕದ ಭಾರತೀಯ ಜನತಾ ಪಕ್ಷದ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಪ್ರಮುಖರನ್ನು ಬೆಳೆಸಿದವರಲ್ಲಿ ಅನಂತ್ ಕುಮಾರ್ ಮೊದಲಿಗರು. ಸ್ವ ಪಕ್ಷವಾಗಲಿ  ವಿರೋಧ ಪಕ್ಷವಾಗಲಿ ಎಲ್ಲರನ್ನೂ ಪ್ರೀತಿಸುವ ಔದಾರ್ಯ ಅನಂತ ಕುಮಾರ್ ಅವರದ್ದಾಗಿತ್ತು.

ಕರ್ನಾಟಕ ರಾಜ್ಯದ ಹಿಂದಿನ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಸನ್ಮಾನ ಶ್ರೀ ಅನಂತ ಕುಮಾರ್ ಅವರು ಬಿ ಬಿ ಶಿವಪ್ಪ ನವರು. ಈಶ್ವರಪ್ಪನವರು ಅನೇಕ ಹಿರಿಯ ನಾಯಕರು ಕರ್ನಾಟಕದಲ್ಲಿ ಪಕ್ಷವನ್ನು ಕೆಳಹಂತದಿಂದ ಕಟ್ಟಿದವರು. ಆದರೆ ವಿಪರ್ಯಾಸ ಸರಕಾರದಲ್ಲಿ ಅನೇಕ ಭಾರತೀಯ ಜನತಾ ಪಕ್ಷದ ಮಂತ್ರಿಗಳು, ಹಿರಿಯ ರಾಜಕಾರಣಿಗಳನ್ನು ಸಂಪೂರ್ಣವಾಗಿ ಆಶೀರ್ವಾದ ಮಾಡಿದವರು ಸನ್ಮಾನ್ಯ ಅನಂತ ಕುಮಾರ್ ಅವರು.

 ಆದರೆ  ದೇವರ ಆಟ ಸುಮಾರು ಒಂದೂವರೆ ವರ್ಷಗಳ ಹಿಂದೆ ಸನ್ಮಾನ್ಯ ಅನಂತ ಕುಮಾರ್ ಅವರು ನಮ್ಮಿಂದ ದೂರವಾಗಿ ಹೋದರು. ದಿವಂಗತ ಅನಂತ್ ಕುಮಾರ್ ಅವರು ಯಾರಿಗೂ ಸಹಾಯ ಮಾಡದ ವ್ಯಕ್ತಿಯೇ ಇಲ್ಲ.  ಎಲ್ಲರೂ ಕೂಡ ಒಂದಿಲ್ಲೊಂದು ಸಹಾಯವನ್ನು ಸನ್ಮಾನ್ಯ ದಿವಂಗತ ಅನಂತ್ ಕುಮಾರರಿಂದ ಪಡೆದವರು. 

ಆದರೆ ವಿಪರ್ಯಾಸ ಎಂದು ಯಾರೂ ಕೂಡ ಅನಂತ್ ಕುಮಾರ್ ಅವರನ್ನ ಹಾಗೂ ಅವರ ಧರ್ಮ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ರನ್ನು ಸಂದರ್ಭವಾಗಿ ನೆನೆಯುವುವರಿಲ್ಲ. ನಾನು ನೇರವಾಗಿ ವಿಷಯಕ್ಕೆ ಬರುತ್ತೇನೆ ದಿವಂಗತರ ಪಕ್ಷ ಕಟ್ಟಿದ ಸಾಧನೆ ಎಲ್ಲವನ್ನೂ ನೆನೆದು ಬರುವ ರಾಜ್ಯಸಭಾ ಚುನಾವಣೆಯಲ್ಲಿ ದಿವಂಗತ ಅನಂತ್ ಕುಮಾರ್ ಅವರ ಧರ್ಮಪತ್ನಿ ಶ್ರೀಮತಿ ತೇಜಸ್ವಿನಿ ಅನಂತ ಕುಮಾರರಿಗೆ ಎಲ್ಲ ಶಾಸಕರು ಎಲ್ಲ ಲೋಕಸಭಾ ಸದಸ್ಯರು, ಹಿರಿಯ ರಾಜಕೀಯ ನಾಯಕರು ಆ ತಾಯಿಯನ್ನು ಬೆಂಬಲಿಸಬೇಕೆಂದು ವಿನಂತಿಸುತ್ತೇನೆ.

 ಅದಲ್ಲದೆ ಹಿರಿಯರಾದ ಡಾ ಪ್ರಭಾಕರ ಕೋರೆ ಅವರು ಕರ್ನಾಟಕ ರಾಜ್ಯದಿಂದ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅವರನ್ನು ಸಹಿತ ಈ ಮಟ್ಟಕ್ಕೆ ಬರಲು ಸನ್ಮಾನ್ಯ ದಿ॥ಅನಂತ ಕುಮಾರ್ ಅವರ ಸಹಾಯ ಸಹಕಾರ ಹಿಂದೆ ಇತ್ತು. ಆದ್ದರಿಂದ ಡಾಕ್ಟರ್ ಪ್ರಭಾಕರ ಕೋರೆ ಅವರನ್ನು ಇಡೀ ಬ್ರಾಹ್ಮಣ ಸಮಾಜದ ಪರವಾಗಿ. ಹಾಗೂ ಎಲ್ಲ ಭಾರತೀಯ ಜನತಾ ಪಕ್ಷದ ಸಾಮಾನ್ಯ ಕಾರ್ಯಕರ್ತರ ಪರವಾಗಿ ಕೈಮುಗಿದು ಶಿರ ಸಾಷ್ಟಾಂಗ ನಮಸ್ಕಾರ ಗಳೊಂದಿಗೆ ನೀವು ಈ ಬಾರಿ ತ್ಯಾಗ ಮಾಡಿ.

 ತಾಯಿಯಾದ ದಿವಂಗತ ಶ್ರೀ ಅನಂತ ಕುಮಾರ್ ಅವರ ಧರ್ಮ ಪತ್ನಿಯಾದ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ಟಿಕೆಟ್ ಕೊಡಿಸಿ .ತಾವೇ ಮುಂದು ನಿಂತು ಆ ತಾಯಿಯನ್ನು ರಾಜ್ಯಸಭೆಗೆ ಕಳುಹಿಸುವ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪರವಾಗಿ ಭಾರತೀಯ ಜನತಾ ಪಕ್ಷದ ಪರವಾಗಿ ಎಲ್ಲ ಹಿರಿಯ ಸಜ್ಜನರ ಪರವಾಗಿ ತಮ್ಮಲ್ಲಿ ಕೈಮುಗಿದು ವಿನಂತಿಸುತ್ತೇನೆ.

ಎಲ್ಲಾ ಪಕ್ಷದ ಹಿರಿಯ ನಾಯಕರು ಸಜ್ಜನರು ಹೃದಯವಂತರು ಭಾರತೀಯ ಜನತಾ ಪಕ್ಷದ ಕೋರ್ ಕಮಿಟಿಯ ಸದಸ್ಯರು ಆ ತಾಯಿಯ ಹೆಸರನ್ನು ರಾಷ್ಟ್ರಮಟ್ಟಕ್ಕೆ ಶಿಫಾರಸು ಮಾಡುವಂತೆ ತಮ್ಮೆಲ್ಲರನ್ನೂ ಕೈಮುಗಿದು ಕೇಳಿಕೊಳ್ಳುತ್ತೇನೆ. 
ತಮ್ಮ ವಿಶ್ವಾಸಿ 
ಹಣಮಂತ ಕೊಟಬಾಗಿ ಉಪಾಧ್ಯಕ್ಷರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ.