2023ರ ಕರ್ನಾಟಕ ವಿಧಾನಸಭೆ ಚುನಾವಣೆ: 100 ಸ್ಥಾನಗಳಲ್ಲಿ ಎಐಎಂಐಎಮ್​ ಸ್ಪರ್ಧೆಗೆ ನಿರ್ಧಾರ, ಉಸ್ಮಾನ್​​ ಗಣಿ

ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆಗೆ ಇನ್ನೇನು ನಾಲ್ಕೈದು ತಿಂಗಳು ಮಾತ್ರ ಬಾಕಿ ಇದ್ದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ ಸೇರಿದಂತೆ ವಿವಿಧ ಪಕ್ಷಗಳು ಚುನಾವಣೆಗೆ ಸನ್ನದ್ದವಾಗಿರುವಂತೆ ಇತ್ತ ಎಐಎಂಐಎಮ್​ ಪಕ್ಷವು ಸಹ ಈ ಬಾರಿ ರಾಜ್ಯಾದ್ಯಂತ ಸ್ಪರ್ಧೆ ಮಾಡಲು ನಿರ್ಧರಿಸಿದೆ. 

AIMIM State President Usman Ghani Talks Over Karnataka Assembly Elections 2023 grg

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಾಗಲಕೋಟೆ

ಬಾಗಲಕೋಟೆ(ನ.09):  ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇನ್ನೇನು ನಾಲ್ಕೈದು ತಿಂಗಳು ಬಾಕಿ ಇರುವಾಗಲೇ ರಾಜಕೀಯ ಆಟ ಮೇಲಾಟಗಳು ಶುರುವಾಗಿರೋ ಬೆನ್ನಲ್ಲೆ ಎಐಎಂಐಎಂ ಪಕ್ಷವು ಸಹ ಈ ಬಾರಿ ಸಂಪೂರ್ಣ ಕಣಕ್ಕಿಳಿಯಲು ಸಜ್ಜಾಗಿದ್ದು, ಇವುಗಳ ಮಧ್ಯೆ ಎಐಎಂಐಎಂ ಪಕ್ಷದ ಸ್ಪರ್ಧೆಯಿಂದ ಒಂದೆಡೆ ಕಾಂಗ್ರೆಸ್‌ಗೆ ನಷ್ಟ, ಬಿಜೆಪಿಗೆ ಲಾಭವೆಂದೇ ಚರ್ಚೆಯಾಗುತ್ತಿದೆ. ಆದ್ರೆ ಎಐಎಂಐಎಂ ಪಕ್ಷದ ಲೆಕ್ಕಾಚಾರವೇ ಬೇರೆ. ಈ ಕುರಿತ ವರದಿ ಇಲ್ಲಿದೆ.

ಒಂದೆಡೆ ನಿರಂತರ ಸಭೆಗಳ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿರೋ ಎಐಎಂಐಎಮ್​ ಪಕ್ಷದ ಮುಖಂಡರು, ಇತ್ತ ರಾಜ್ಯದಲ್ಲಿ ಸ್ಪರ್ಧೆಗೆ ಸಿದ್ದವಾಗಿರೋ ಬಗ್ಗೆ ಮಾಹಿತಿ ನೀಡಿದ ಎಐಎಂಐಎಮ್​ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನ್ ​​ಗಣಿ, ಅತ್ತ ಪಕ್ಷದ ಪ್ರವರ್ಧನಮಾನದ ಬಗ್ಗೆ ಚರ್ಚೆ ಮಾಡ್ತಿರೋ ಕಾರ್ಯಕರ್ತರು, ಅಂದಹಾಗೆ ಇಂತಹವೊಂದು ರಾಜಕೀಯ ಚಟುವಟಿಕೆಗಳು ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ. 

ಸಿದ್ದರಾಮಯ್ಯ ಕ್ಷೇತ್ರಕ್ಕೆ ಡಿಕೆಶಿ ಭೇಟಿ: ಏನಿದು 'ನಿಗೂಢ' ರಹಸ್ಯ?

ಹೌದು, ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆಗೆ ಇನ್ನೇನು ನಾಲ್ಕೈದು ತಿಂಗಳು ಮಾತ್ರ ಬಾಕಿ ಇದ್ದು ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಸೇರಿದಂತೆ ವಿವಿಧ ಪಕ್ಷಗಳು ಚುನಾವಣೆಗೆ ಸನ್ನದ್ದವಾಗಿರುವಂತೆ ಇತ್ತ ಎಐಎಂಐಎಮ್​ ಪಕ್ಷವು ಸಹ ಈ ಬಾರಿ ರಾಜ್ಯಾದ್ಯಂತ ಸ್ಪರ್ಧೆ ಮಾಡಲು ನಿರ್ಧರಿಸಿದೆ. ಇದಕ್ಕೆ ಪೂರಕವೆಂಬಂತೆ ಈಗಾಗಲೇ ಸಭೆ ಮೇಲೆ ಸಭೆ ನಡೆಸುತ್ತಿರೋ ಎಐಎಂಐಎಮ್​ ಪಕ್ಷದ ರಾಜ್ಯಾದ್ಯಕ್ಷ ಉಸ್ಮಾನಗಣಿ ಹುಮ್ನಾಬಾದ್​ ಪಕ್ಷ ಸಂಘಟನೆ ಜೊತೆಗೆ 2023ರ ಚುನಾವಣೆಯಲ್ಲಿ 100 ಮತಕ್ಷೇತ್ರಗಳಲ್ಲಿ ಎಐಎಂಐಎಮ್​ ಪಕ್ಷದ ಅಭ್ಯರ್ಥಿಗಳನ್ನ ಸ್ಪರ್ಧೆಗಿಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದು, ಈ ಮಧ್ಯೆ ಮೀಸಲಾತಿ ಇರುವ 52 ಮತಕ್ಷೇತ್ರಗಳಲ್ಲಿ ಈ ಬಾರಿ ಎಐಎಂಐಎಮ್​ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದು, ಸಂವಿಧಾನ ರಕ್ಷಣೆ ಜೊತೆಗೆ ಜನರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಒಳ್ಳೆಯ ಅಭ್ಯರ್ಥಿಗಳನ್ನ ನಿಲ್ಲಿಸಿ ಈ ಬಾರಿ ಹೆಚ್ಚು ಅಭ್ಯರ್ಥಿಗಳನ್ನ ಗೆಲ್ಲಿಸುವ ಗುರಿ ಹೊಂದಿದ್ದೇವೆ ಎಂದಿದ್ದಾರೆ. 

ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ: ಪ್ರಮೋದ್‌ ಮುತಾಲಿಕ್‌

ಇನ್ನು ಈಗಿನ ರಾಜ್ಯ ರಾಜಕಾರಣದ ಲೆಕ್ಕಾಚಾರದ ಪ್ರಕಾರ ಒಂದೊಮ್ಮೆ ಎಐಎಂಐಎಮ್​ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಲ್ಲಿ ಮುಸ್ಲಿಂ ಸಮುದಾಯದ ಮತಗಳು ಒಡೆದು ಕಾಂಗ್ರೆಸ್​ ಪಕ್ಷಕ್ಕೆ ನಷ್ಟ ಉಂಟಾದ್ರೂ ಅಚ್ಚರಿ ಇಲ್ಲ, ಈ ಮಧ್ಯೆ ಇತ್ತ ಎಐಎಂಐಎಮ್​ ಪಕ್ಷದ ಸ್ಪರ್ಧೆಯಿಂದ ಬಿಜೆಪಿಗೆ ಮತ್ತಷ್ಟು ಲಾಭ ತರಲಿದೆ ಎಂಬ ಲೆಕ್ಕಾಚಾರಗಳು ಕೇಳಿ ಬರುತ್ತಿದ್ದು, ಆದ್ರೆ ಇದ್ಯಾವುದನ್ನ ಲೆಕ್ಕಿಸದ ಎಐಎಂಐಎಮ್​ ಪಕ್ಷದ ರಾಜ್ಯ ಮುಖಂಡರು ಕೆಲವರು ಆರೋಪಿಸುವಂತೆ ನಾವ್ಯಾರು ಬಿ ಟೀಮ್​ ಅಲ್ಲ, ಬದಲಾಗಿ ಎ ಟೀಮ್​ ಆಗಿದ್ದು, ನಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದು ಒಂದೇ ನಮ್ಮ ಗುರಿ ಅಂತಿದ್ದಾರೆ. ಇನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಈಗಾಗಲೇ ಜಮಖಂಡಿ ಮತ್ತು ತೇರದಾಳ ಮತಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ನಿಲ್ಲಿಸುವುದಕ್ಕೆ ಮುಂದಾಗಿದ್ದು, ಇನ್ನು ಕೆಲವಡೆ ಸರ್ವೆ ಮಾಡಿ ಒಟ್ಟಿನಲ್ಲಿ ರಾಜ್ಯದ 100 ಕಡೆಗೆ ಈ ಬಾರಿ ಎಐಎಂಐಎಮ್​ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆಂದು ಪಕ್ಷದ ಮುಖಂಡ, ಎಐಎಂಐಎಮ್​ ಪಕ್ಷದ ಬಾಗಲಕೋಟೆ ಜಿಲ್ಲಾಧ್ಯಕ್ಷ ಅಬ್ದುಲ್​ಸಾಬ್​ ತಿಳಿಸಿದ್ದಾರೆ.         

ಒಟ್ಟಿನಲ್ಲಿ ರಾಜಕೀಯ ಪಕ್ಷಗಳು ಮುಂಬರುವ ವಿಧಾನಸಭಾ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿರುವುದರ ಮಧ್ಯೆಯೇ ಎಐಎಂಐಎಮ್​ ಪಕ್ಷವು ಸಹ ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಮುಂದಾಗಿದ್ದು, ಇದರ ಎಫೆಕ್ಟ್​ ಇನ್ನುಳಿದ ರಾಜಕೀಯ ಪಕ್ಷಗಳಿಗೆ ಲಾಭ ಮತ್ತು ನಷ್ಟ ತರಲಿರುವುದಂತೂ ಸುಳ್ಳಲ್ಲ. 
 

Latest Videos
Follow Us:
Download App:
  • android
  • ios