ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ: ಪ್ರಮೋದ್ ಮುತಾಲಿಕ್
ಇದು ನನ್ನ ಕೊನೆಯ ಪ್ರಯತ್ನ, ಈ ಬಾರಿ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ತಿಳಿಸಿದರು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ನ.05): ಇದು ನನ್ನ ಕೊನೆಯ ಪ್ರಯತ್ನ, ಈ ಬಾರಿ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ತಿಳಿಸಿದರು. ಅವರು ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ಮಾತನಾಡುತ್ತಾ, 2023ರ ವಿಧಾನ ಸಭೆ ಚುನಾವಣೆಗೆ ಖಂಡಿತ ಸ್ಫರ್ಧೆ ಮಾಡುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಶ್ರೀರಾಮಸೇನೆ ಚುನಾವಣೆಗೆ ಸ್ಫರ್ಧೆ ಮಾಡೋದಿಲ್ಲ. ಇದೊಂದು ಸಾಂಸ್ಕೃತಿಕ & ಹಿಂದೂ ಸಂಘಟನೆ.
ಆದ್ದರಿಂದ ನಾನು ಯಾವುದೇ ಪಕ್ಷದ ಟಿಕೆಟ್ ಪಡೆಯದೇ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಮುತಾಲಿಕ್ ಸ್ಪಷ್ಟಪಡಿಸಿದ್ದಾರೆ. ಯಾವ ಕ್ಷೇತ್ರದಿಂದ ಸ್ಪರ್ಧೆ ಅಂತ ಇನ್ನೂ ನಿರ್ಧಾರ ಆಗಿಲ್ಲ. ಡಿಸೆಂಬರ್ ಮೊದಲ ವಾರದಲ್ಲಿ ಡಿಕ್ಲೇರ್ ಮಾಡುತ್ತೇನೆ. ಈಗಾಗಲೇ ನಾವು ಎಲ್ಲಿ ನಿಲ್ಲಬೇಕೆಂದು ಕಾರ್ಯಕರ್ತರು ಸರ್ವೆ ಮಾಡುತ್ತಿದ್ದಾರೆ. ತೇರದಾಳ, ಜಮಖಂಡಿ, ಪುತ್ತೂರು, ಕಾರ್ಕಳ ಉಡುಪಿ ಸೇರಿದಂತೆ ಎಂಟತ್ತು ಕ್ಷೇತ್ರಗಳಲ್ಲಿ ಸರ್ವೆ ನಡೆಯುತ್ತಿದೆ ಎಂದು ಮುತಾಲಿಕ್ ತಿಳಿಸಿದ್ದಾರೆ.
ಮುಸ್ಲಿಂರೊಂದಿಗೆ ವ್ಯಾಪಾರ ರದ್ದುಗೊಳಿಸಿ: ಪ್ರಮೋದ್ ಮುತಾಲಿಕ್
ರೇಣುಕಾಚಾರ್ಯ ಅವರ ಸಹೋದರನ ಪುತ್ರನ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಲಿ: ಇದೇ ಸಮಯದಲ್ಲಿ ರೇಣುಕಾಚಾರ್ಯ ಸಹೋದರ ಪುತ್ರನ ಸಾವು ಹಿನ್ನೆಲೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್ 24 ವರ್ಷದ ಯುವಕನ ಸಾವು ದುರಂತದಲ್ಲಿ ಆಗಬಾರದಿತ್ತು. ಇದೊಂದು ನಿಗೂಢ ರೀತಿಯ ಸಾವು ಆಗಿದೆ. ರೇಣುಕಾಚಾರ್ಯ ಅವರೇ ಈಗಾಗಲೇ ಅದನ್ನ ಹೇಳಿದ್ದಾರೆ. ಸರ್ಕಾರ, ಪೊಲೀಸ್ ಇಲಾಖೆ ಸಮಗ್ರವಾಗಿ ತನಿಖೆ ಮಾಡಬೇಕು ಎಂದು ತಿಳಿಸಿದ ಅವರು, ಇದರ ಹಿಂದೆ ಯಾರು ಇದ್ದಾರೆ ಅಂತ ಕಂಡು ಹಿಡಿದು ಶಿಕ್ಷೆ ಕೊಡಿಸಬೇಕು. ರೇಣುಕಾಚಾರ್ಯ ಅವರು ನೇರವಾಗಿ ಹಿಂದೂತ್ವದ ಪ್ರತಿಪಾದಕರು. ಹಿಂದೂ ಧರ್ಮದ ಕುರಿತು ಸತ್ಯದ ವಿಚಾರ ಹೇಳುತ್ತಾ ಇದ್ದರು. ಹಾಗಾಗಿ ಆ ಆಯಾಮದಲ್ಲೂ ತನಿಖೆ ಆಗಬೇಕು ಎಂದು ಮುತಾಲಿಕ್ ಆಗ್ರಹಿಸಿದರು.
ಎರಡು ದಿನಗಳಲ್ಲಿ ಐದು ಬೆದರಿಕೆ ಕರೆ: ಜೀವಬೆದರಿಕೆ ಕರೆಗಳ ಆರೋಪ ಬಗ್ಗೆ ಮಾತನಾಡಿದ ಮುತಾಲಿಕ್ ಎರಡು ದಿನಗಳಲ್ಲಿ ಐದು ಬೆದರಿಕೆ ಕರೆಗಳು ಬಂದಿದೆ. ಎರಡು ಕರೆ ಸ್ವೀಕರಿಸಿದಾಗ ಧಮಕಿ ಹಾಕಿ, ಕೊಲೆ ಬೆದರಿಕೆ ಹಾಕಿದ್ದಾರೆ. ಎರಡು ದಿನ ಹುಕ್ಕೇರಿಯಲ್ಲಿ ಇದ್ದಾಗ ಐದು ಕರೆಗಳು ಬಂದಿದ್ದವು, ಈ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಕೊಲೆ ಬೆದರಿಕೆ ಹಾಕೋರಿಕೆಗೆ ಎಚ್ಚರಿಕೆ ಕೊಡುತ್ತೇನೆ. ಈ ರೀತಿಯ ಬೊಗಳುವಿಕೆ ನಿಲ್ಲಿಸಬೇಕು. ನಿಮ್ಮ ಬೆದರಿಕೆಯಿಂದ ನಾನು ಹೆದರುವವನಲ್ಲ. ನಾನು ಸಾಯೋವರೆಗೂ ಹಿಂದೂತ್ವ ಹಾಗೂ ದೇಶದ ಕೆಲಸ ಮಾಡುತ್ತೇನೆ.
ಕರಾವಳಿಯಿಂದ ಚುನಾವಣಾ ಕಣಕ್ಕೆ ಇಳಿಯುತ್ತಾರಾ ಪ್ರಮೋದ್ ಮುತಾಲಿಕ್?
ನಿಮ್ಮ ಕೊಲೆ ಬೆದರಿಕೆಗಳಿಗೆ ನಾನು ಆತಂಕಗೊಳ್ಳುವುದಿಲ್ಲ.ನಾನು ನಿರಂತರವಾಗಿ ಹಿಂದುತ್ವದ ಕೆಲಸ ಮಾಡಿ ತೋರಿಸುತ್ತೇನೆ ಎಂದರು. ನಾವು ಸಂವಿಧಾನ, ಕಾನೂನು,ಪ್ರಜಾಪ್ರಭುತ್ವ ಆಧಾರದ ಮೇಲೆ ಸಂಘಟನೆ ಮಾಡುತ್ತಿದ್ದೇವೆ. ಕೊಲೆ ಬೆದರಿಕೆಗೆ ಹೆದರುವವ ನಾನಲ್ಲ, ನಾನು ಕಂಪ್ಲೆಂಟ್ ಲಾರ್ಜ್ ಮಾಡಿದ್ದೇನೆ. ಮುಂದಿನ ಕೆಲಸ ಪೊಲೀಸ್ ಇಲಾಖೆಯದ್ದು ಇದೆ. ಅವರು ಇದನ್ನು ಶೋಧಿಸಬೇಕು. ಫೋನ್ ಮಾಡಿದ್ದು ಯಾರು? ಏನು? ಬೆದರಿಕೆ ಕರೆ ಮಾಡಿದ್ದು ಯಾರೂ ಏನು ಗೊತ್ತಿಲ್ಲ. ಫೋನ್ ನಂಬರ್ ಪೊಲೀಸರಿಗೆ ಕೊಟ್ಟಿದ್ದೇನೆ ಎಂದು ಮುತಾಲಿಕ್ ತಿಳಿಸಿದರು.