ಗೆದ್ದೆವೆಂದು ಮೈಮರೆಯದೇ, ಲೋಕಸಭೆ ಗುರಿ ಇರಲಿ: ಕೈ ಕಾರ್ಯಕರ್ತರಿಗೆ ಶಾಮನೂರು ಸಲಹೆ
ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಅಧಿಕಾರಕ್ಕೆ ಬಂದಿದ್ದೇವೆಂದು ಮೈಮರೆಯದೇ ಕಾಂಗ್ರೆಸ್‌ನ ಎಲ್ಲಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರುವ ಹೊಣೆ ಹೊರಬೇಕು ಎಂದು ಪಕ್ಷದ ಹಿರಿಯ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.
ದಾವಣಗೆರೆ (ಜು.24) : ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಅಧಿಕಾರಕ್ಕೆ ಬಂದಿದ್ದೇವೆಂದು ಮೈಮರೆಯದೇ ಕಾಂಗ್ರೆಸ್‌ನ ಎಲ್ಲಾ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರುವ ಹೊಣೆ ಹೊರಬೇಕು ಎಂದು ಪಕ್ಷದ ಹಿರಿಯ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಕರೆ ನೀಡಿದರು.
ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಎಲ್ಲಾ ಮುಂಚೂಣಿ ಘಟಕಗಳಿಂದ ಹಮ್ಮಿಕೊಂಡಿದ್ದ ನೂತನ ಸಚಿವರು, ಶಾಸಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆಯನ್ನೇರಿದಂತೆ ಕೇಂದ್ರದಲ್ಲೂ ಅಧಿಕಾರಕ್ಕೆ ಚುಕ್ಕಾಣಿ ಹಿಡಿಯಲು ನೀವೆಲ್ಲರೂ ಒಗ್ಗಟ್ಟಿನಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಕೈಜೋಡಿಸಬೇಕು ಎಂದರು.
ಬಿ.ಕೆ.ಹರಿಪ್ರಸಾದ್ ಹೇಳಿಕೆ ಬಗ್ಗೆ ನನಗೆ ಏನು ಗೊತ್ತಿಲ್ಲ: ಶಾಮನೂರು ಶಿವಶಂಕರಪ್ಪ
ಚುನಾವಣೆ ಪೂರ್ವದಲ್ಲಿ ಕೊಟ್ಟಮಾತಿನಂತೆ ನಡೆಯುವ ಸರ್ಕಾರ ನಮ್ಮದೆಂಬುದು ಸಾರಿದ್ದೇವೆ. 4 ಗ್ಯಾರಂಟಿ ಭರವಸೆ ಜಾರಿಗೊಳಿಸಿದ್ದೇವೆ. 5ನೇ ಗ್ಯಾರಂಟಿ ಯುವನಿಧಿ ಡಿಸೆಂಬರ್‌ನಲ್ಲಿ ಅನುಷ್ಠಾನಗೊಳ್ಳಲಿದೆ. ಶಕ್ತಿ ಯೋಜನೆಗೆ ರಾಜ್ಯವ್ಯಾಪಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನ್ನಭಾಗ್ಯದಡಿ ಕುಟುಂಬದ ಯಜಮಾನರಿಗೆ ಅಕ್ಕಿ ಹಣ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಗೃಹಲಕ್ಷ್ಮಿಗೆ ಚಾಲನೆ ನೀಡಿದ್ದು, ಆಗಸ್ಟ್‌ನಲ್ಲಿ ಕುಟುಂಬದ ಯಜಮಾನಿಗೆ ಖಾತೆಗೆ ಹಣ ಹಾಕಿ, ಮಹಿಳಾ ಸ್ವಾವಲಂಬನೆಗೆ ಉತ್ತೇಜಿಸಲಾಗುವುದು. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವೆಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸಿದ್ದೇವೆ. ಬಿಜೆಪಿ ಬಗ್ಗೆ ಎಚ್ಚರಿಕೆಯಿಂದಿದ್ದು, ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ನಾವು ಗೆಲ್ಲಿಸಬೇಕಿದೆ ಎಂದು ಹೇಳಿದರು.
ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ರೈತರ ಮೇಲೆ ಪ್ರಮಾಣ ಮಾಡಿ, ಹಿಂಬಾಗಿಲಿನ ಮೂಲಕ ಬಿಜೆಪಿ ಅಧಿಕಾರ ಹಿಡಿದಿತ್ತು. ಹಾಲು ಕುಡಿದ ಮಕ್ಕಳೇ ಬದುಕಲ್ಲ. ವಿಷ ಕುಡಿದವರು ಬದುಕುತ್ತಾರಾ? ಕಾಂಗ್ರೆಸ್ ಅಧಿಕಾರಕ್ಕೆ ಬರಲು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಜನ್ಮದಿನ ಅಮೃತ ಮಹೋತ್ಸವವೇ ವೇದಿಕೆಯಾಯಿತು. ದೇಶದಲ್ಲಿ ಯಾವೊಬ್ಬ ನಾಯಕರ ಜನ್ಮದಿನಕ್ಕೂ ಇಷ್ಟುಜನರ ಸೇರಿದ್ದಿಲ್ಲ. ಇದೆಲ್ಲಾ ಕಾಂಗ್ರೆಸ್ಸಿಗೆ ಮತ್ತಷ್ಟುಶಕ್ತಿ ತುಂಬಿತು ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ, ಮಾಜಿ ಶಾಸಕ ಎಸ್.ರಾಮಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಕೆಪಿಸಿಸಿ ವಕ್ತಾರ ಡಿ.ಬಸವರಾಜ, ಸೈಯದ್ ಸೈಫುಲ್ಲಾ, ಅನಿತಾ ಬಾಯಿ ಮಾಲತೇಶ, ಅಯೂ ಬ್ ಪೈಲ್ವಾನ್, ಎ.ನಾಗರಾಜ, ಕೆ.ಜಿ.ಶಿವಕುಮಾರ, ಎಸ್.ಮಲ್ಲಿಕಾರ್ಜುನ, ಡೋಲಿ ಚಂದ್ರು, ವಕೀಲ ಪ್ರಕಾಶ ಪಾಟೀಲ್, ಎಸ್.ಎಸ್.ಗಿರೀಶ, ರಾಕೇಶ, ಇಟ್ಟಿಗುಡಿ ಮಂಜುನಾಥ, ಟಿ.ಬಸವರಾಜ ಇತರರು ಇದ್ದರು.
ನಾವು ಸಂವಿಧಾನದ ಬಲದಲ್ಲಿದ್ದೀವಾ, ನೆರಳಲ್ಲಿದ್ದೀವಾ ಎಂಬ ಅರಿವು ಅಗತ್ಯ: ಹಂಸಲೇಖ
ದಾವಣಗೆರೆ ಖಾಸಗಿ ಬಸ್ ನಿಲ್ದಾಣಕ್ಕೆ ಶಾಮನೂರು ಶಿವಶಂಕರಪ್ಪ ಹೆಸರಿಟ್ಟಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೆ, ನಮಗೆ ತೊಂದರೆ ಇಲ್ಲ. ಮುಂಚೆಯೂ ಬಸ್ ನಿಲ್ದಾಣಕ್ಕೆ ನಮ್ಮ ಹೆಸರನ್ನೇ ಇಡಲಾಗಿತ್ತು. ಈಗ ಮತ್ತೆ ಹೆಸರಿಟ್ಟಿದ್ದಕ್ಕೆ ಕೆಲವರು ತಗಾದೆ ತೆಗೆದರೆ ನಾವೇನೂ ಮಾಡಲಾಗುವುದಿಲ್ಲ. ಆನೆ ಹೋಗುತ್ತಿದ್ದರೆ, ನಾಯಿಗಳು ಬೊಗಳುತ್ತಿರುತ್ತವೆ. ಅಷ್ಟೇ.
ಡಾ.ಶಾಮನೂರು ಶಿವಶಂಕರಪ್ಪ, ದಕ್ಷಿಣ ಶಾಸಕರು.
ದೆಹಲಿಯಿಂದ ಮೇಕಪ್ ಮಾಡಿಕೊಂಡು ಬರುವವರಿಗೆ, ಪ್ರಭಾವ ಬಳಸಿಕೊಂಡು ಬರುವಂತಹವರಿಗೆ ಅಧಿಕಾರ ಸಿಗಬಾರದು. ಬದಲಿಗೆ ಪಕ್ಷಕ್ಕಾಗಿ ಹಗಲಿರುಳು ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿದ ನಿಜವಾದ ಕಾರ್ಯಕರ್ತೆಯರಿಗೆ ಅವಕಾಶ, ಅಧಿಕಾರ ಸಿಕ್ಕರೆ ಮಾತ್ರ ಪಕ್ಷಕ್ಕಾಗಿ ದುಡಿದಿದ್ದು, ಸಾರ್ಥಕವಾಗುತ್ತದೆ.
ಕೆ.ಎಸ್.ಬಸವಂತಪ್ಪ, ಮಾಯಕೊಂಡ ಶಾಸಕ