ಸಿಎಂ ಬದಲು ಚರ್ಚೆ ಬೆನ್ನಲ್ಲೇ ಅಹಿಂದ ಪ್ರದರ್ಶನ: ವಿರೋಧಿಗಳಿಗೆ ಸಂದೇಶ ರವಾನಿಸುವ ಸಿದ್ದು..!

4 ಲಕ್ಷ ಜನರನ್ನು ಸೇರಿಸಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸಿದ್ದರಾಮಯ್ಯ ವಿರೋಧಿಗಳಿಗೆ ಪರೋಕ್ಷ ಸಂದೇಶ ರವಾನಿಸುವ ಗುರಿಯೊಂದಿಗೆ ಈ ಸಮಾವೇಶದ ರೂಪುರೇಷೆ ಸಿದ್ಧವಾಗುತ್ತಿದೆ. 

ahinda samavesha will be held in hubballi On siddaramaiah's birthday grg

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜು.05):  ಒಕ್ಕಲಿಗ ಸ್ವಾಮೀಜಿ ಹೇಳಿಕೆಯಿಂದಾಗಿ ಮುಖ್ಯ ಮಂತ್ರಿ ಬದಲಾವಣೆ ಕುರಿತು ಪರ-ವಿರೋಧ ಚರ್ಚೆ ಮತ್ತೆ ಮುನ್ನೆಲೆಗೆ ಬರುತ್ತಿದ್ದಂತೆಯೇ ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನದ ಅಂಗವಾಗಿ ಬೃಹತ್ ಸಮಾವೇಶ ನಡೆಸುವ ಮೂಲಕ 'ಅಹಿಂದ' ಶಕ್ತಿ ಪ್ರದರ್ಶನಕ್ಕೆ ಸದ್ದಿಲ್ಲದೆ ಸಿದ್ದತೆ ನಡೆಯುತ್ತಿದೆ.

4 ಲಕ್ಷ ಜನರನ್ನು ಸೇರಿಸಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸಿದ್ದರಾಮಯ್ಯ ವಿರೋಧಿಗಳಿಗೆ ಪರೋಕ್ಷ ಸಂದೇಶ ರವಾನಿಸುವ ಗುರಿಯೊಂದಿಗೆ ಈ ಸಮಾವೇಶದ ರೂಪುರೇಷೆ ಸಿದ್ಧವಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ಬದಲಿಸಿ ಉಪ ಮುಖ್ಯಮಂತ್ರಿ ಆಗಿರುವ ಡಿ.ಕೆ.ಶಿವಕುಮಾರ್ ಅವರನು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇ ಕೆನ್ನುವ ಕೂಗು ಹೊಸದೇನಲ್ಲ. ಆದರೆ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಪೀಠದ ಚಂದ್ರಶೇಖರನಾಥ ಸ್ವಾಮೀಜಿ ಇತ್ತೀ ಜೆಗೆ ಬೆಂಗಳೂರಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಬಹಿರಂಗ ಹೇಳಿಕೆ ನೀಡಿದ ಬಳಿಕ ಕೆಲ ದಿನಗ ವಿರೋಧ ಚರ್ಚೆ ತಾರಕಕ್ಕೇರಿದೆ. ಈ ಗದ್ದಲದ ನಡುವೆಯೇ ಇದೀಗ ಸಿದ್ದರಾಮಯ್ಯ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಅವರ ಪರ ಶಕ್ತಿ ಪ್ರದರ್ಶನ ನಡೆಸಲು ಅಹಿಂದ ಸಂಘಟನೆ ಸಿದ್ಧತೆ ಆರಂಭಿಸಿದೆ. 

ಸೈಟ್ ಫೈಟ್: ಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ, ನಾನು ರಿಸೈನ್‌ ಮಾಡಲ್ಲ ಎಂದ ಸಿದ್ದು..!

ಏನೇನು ಕಾರ್ಯಕ್ರಮ?: 

ದಾವಣಗೆರೆಯಲ್ಲಿ ಮೂರು ವರ್ಷದ ಹಿಂದೆ 'ಸಿದ್ದರಾಮೋತ್ಸವ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಆ ಕಾರ್ಯಕ್ರಮವನ್ನೂ ಮೀರಿಸುವ ರೀತಿಯಲ್ಲಿ ಸಮಾರಂಭವನ್ನು ಹುಬ್ಬಳ್ಳಿಯಲ್ಲಿ ಆಗಸ್ಟ್‌ನಲ್ಲಿ ಆಯೋಜಿಸಲು ಅಹಿಂದ ಸಂಘಟನೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಸಿದ್ದರಾಮಯ್ಯ ಅದರ 76ನೇ ಜನ್ಮದಿನದ ಅಂಗವಾಗಿ 'ಸಿದ್ದರಾಮಯ್ಯ ಅಹಿಂದ ರತ್ನ' ಎಂಬ ಹೆಸರಿನಡಿ 76 ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡುವುದು, ಬರೊಬ್ಬರಿ 100 ಕೆ.ಜಿ. ತೂಕದ ಕೇಕ್ ಕತ್ತರಿಸಿ ಜನ್ಮದಿನ ಆಚರಿಸುವುದು, ರಾಜ್ಯದ ವಿವಿಧ ಜಿಲ್ಲೆಗಳಿಂದ 3-4 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಲು ಅಹಿಂದ ಸಂಘಟನೆ ಯೋಜನೆ ಹಾಕಿಕೊ೦ಡಿದೆ.ಇದಕ್ಕಾಗಿ ಈಗಾಗಲೇ ಪ್ರಶಸ್ತಿ ಆಯ್ಕೆ ಸಮಿತಿ, ಸ್ವಾಗತ ಸಮಿತಿ ಸೇರಿ ಕೆಲವೊಂದಿಷ್ಟು ಸಮಿತಿ ರಚಿಸಲಾಗಿದೆ. ಎಲ್ಲ ಜಿಲ್ಲೆಗಳ ಅಹಿಂದ ಅಧ್ಯಕ್ಷರು ಸೇರಿ ಪ್ರಮುಖರ ನಿಯೋಗ ಇನ್ನೆರಡು ದಿನಗಳಲ್ಲಿ ಸಿಎಂ ಅವರನ್ನು ಭೇಟಿಯಾಗಿ ಕಾರ್ಯಕ್ರಮದ ಸಮಯ ಹಾಗೂ ದಿನಾಂಕ ನಿಗದಿಪಡಿಸಿಕೊಂಡು ಬರಲಿದೆ. ಈ ನಿಟ್ಟಿನಲ್ಲಿ ನಿಯೋ ಗವೂ ಬೆಂಗಳೂ ರಿಗೆ ತೆರಳಲಿದೆ. ಹುಬ್ಬಳ್ಳಿಯಲ್ಲಿ ಈಗಾ ಗಲೇ ಎರಡೂರು ಬಾರಿ ಸಭೆಗಳನ್ನೂ ನಡೆಸಲಾಗಿದೆ. 

ಹುಬ್ಬಳ್ಳಿ ಏಕೆ?: 

ಹಾಗೆ ನೋಡಿದರೆ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ ಹೀಗೆ ಬೇರೆ ಜಿಲ್ಲೆಗಳು ಸಿದ್ದರಾಮಯ್ಯ ಜನ್ಮದಿನದ ಕಾರ್ಯಕ್ರಮ ಆಯೋಜಿಸಲು ಮುಂದೆ ಬಂದಿದ್ದವು.ಆದರೆಸಂಘಟಕರುಹುಬ್ಬಳ್ಳಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೂ ಒಂದು ಕಾರಣವಿದೆ. ಹಿಂದೆ ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದಾಗ, ಎಚ್.ಡಿ.ದೇವೇಗೌಡರೊಂದಿಗೆ ಭಿನ್ನಾಭಿಪ್ರಾಯ ಬಂದಾಗ ಇದೇ ಹುಬ್ಬಳ್ಳಿ ಯಿಂದಲೇ ಅಹಿಂದ ಸಂಘಟನೆ ಹುಟ್ಟು ಹಾಕಿ ದ್ದರು. 2005ರಲ್ಲಿ ನಡೆದಿದ್ದ ಈ ಸಮಾವೇಶ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ನಾಂದಿ ಹಾಡಿ ಇತಿಹಾಸ ಸೃಷ್ಟಿಸಿತ್ತು. ಇದೀಗ ಅವರನ್ನು ಸಿಎಂ ಸ್ಥಾನದಿಂದ ಬದಲಿಸಲುಒಳಗೊಳಗೆಯತ್ನಗಳು ನಡೆಯುತ್ತಿವೆ. ಅದನ್ನು ಹತ್ತಿಕ್ಕಲು ಅವರ ಶಕ್ತಿ ಏನೆಂಬುದನ್ನು ತೋರಿಸಲು ಹುಬ್ಬಳ್ಳಿಯೇ ಸೂಕ್ತ ಎಂಬ ಕಾರಣದಿಂದ ಈ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸುತ್ತವೆ.

ಒಟ್ಟಿನಲ್ಲಿ ಸಿಎಂ ಬದಲಾವಣೆ ಕೂಗು ಗಟ್ಟಿ ಧ್ವನಿಯಲ್ಲಿ ಕೇಳುತ್ತಿದ್ದಂತೆ ಇತ್ತ ಆಹಿಂದ ಸಂಘಟನೆಯೂ ಮತ್ತೆ ರಾಜ್ಯದಲ್ಲಿ ಸಕ್ತಿ, ಯವಾಗುತ್ತಿದೆ. ಜತೆಗೆ ಒಂದು ವೇಳೆ ಸಿದ್ದರಾ ಮಯ್ಯ ಅವರನ್ನೇನಾದರೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನೂ ಅಹಿಂದ ಈಗಾಗಲೇ ನೀಡಿದೆ.

2005ರಲ್ಲಿನ ಸಮಾವೇಶ: 

ಹುಬ್ಬಳ್ಳಿಯಲ್ಲಿ 2005-06ರಲ್ಲಿ ನಡೆದಿದ್ದ ಅಹಿಂದ ಸಮಾವೇಶ ಇಡೀ ರಾಜ್ಯ ರಾಜಕೀಯದಲ್ಲೇ ಸಂಚಲನವ ಕವೇ ಸಿದ್ದರಾಮಯ್ಯ ಅಲ್ಪಸಂಖ್ಯಾತ, ಹಿಂದು ಳಿದ ಸಮುದಾಯದ ನಾಯಕರಾಗಿ ಹೊರಹೊ ಮೃದ್ದರು. ಅಹಿಂದದ ಮೂಲಕವೇ ಸಿಎಂ ಕುರ್ಚಿವರೆಗೂ ಸಿದ್ದರಾಮಯ್ಯ ಹೋಗಿದ್ದು, ತದನಂತರ ಅಹಿಂದ ನಿಷ್ಕ್ರಿಯ ಗೊಂಡಿತ್ತು. ಅದಕ್ಕೀಗ ಮತ್ತೆ ಚಾಲನೆ ಸಿಕ್ಕಿದಂತಾಗಿದೆ. ಜನವರಿಯಲ್ಲೇ ಸಂಘಟನೆಗೆ ನೋಂದಣಿ ಕೂಡ ಮಾಡಿಸಲಾಗಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಅವರೇ ಕಾರಣ. ಅವರನ್ನೇನಾದರೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಲು ಯತ್ನಿಸಿದರೆ ಪರಿಣಾಮ ನೆಟ್ಟಗಿರಲ್ಲ, ಯಾವುದೇ ಹೋರಾಟಕ್ಕಾದರೂ ನಮ್ಮ ಸಂಘಟನೆ ಸಿದ್ಧ. ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಹುಬ್ಬಳ್ಳಿಯಲ್ಲೇ ಆಯೋಜಿಸಲಾಗುತ್ತಿದೆ ಎಂದು ಅಹಿಂದ ಕಾರ್ಯಾಧ್ಯಕ್ಷ ಚಂದ್ರಶೇಖರ ಕರಡಿಕೊಪ್ಪ ತಿಳಿಸಿದ್ದಾರೆ. 

ಇನ್ಮುಂದೆ ಪ್ರತಿ ಗುರುವಾರ ಶಾಸಕರ ಜತೆ ಸಿಎಂ ಭೇಟಿ

ಸಿದ್ದರಾಮಯ್ಯ ಅವರ ಜನ್ಮದಿನವನ್ನು ಈ ಸಲ ಹುಬ್ಬಳ್ಳಿಯಲ್ಲಿ ಆಯೋಜಿಸಲಾ ಗುತ್ತಿದೆ. ಆಗಸ್ಟ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಹಿಂದ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಇದಕ್ಕೆ ರಾಜ್ಯಾದ್ಯಂತ ಲಕ್ಷಗಟ್ಟಲೆ ಜನ ಆಗಮಿಸಲಿದ್ದಾರೆ. ಇದಕ್ಕಾಗಿ ತಯಾರಿ ನಡೆಸಲಾಗುತ್ತಿದೆ ಎಂದು ಧಾರವಾಡ ಗ್ರಾಮೀಣ ಅಹಿಂದ ಜಿಲ್ಲಾಧ್ಯಕ್ಷ  ಮುತ್ತಣ್ಣ ಶಿವಳ್ಳಿ ಹೇಳಿದ್ದಾರೆ. 

ಸಮಾವೇಶ ಏಕೆ? ಹುಬ್ಬಳ್ಳಿಯಲ್ಲೇಕೆ?

ಸಿಎಂ ಬದಲಿಸಿ, ಡಿಕೆಶಿ ಸಿಎಂ ಮಾಡಬೇಕೆಂದು ಒಕ್ಕಲಿಗ ಸ್ವಾಮೀಜಿ ಬಹಿರಂಗ ಬೇಡಿಕೆ
• ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದಾಗ ಎಚ್.ಡಿ. ದೇವೇ ಗೌಡರ ಜತೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು
. ಅದಾದ ಬಳಿಕ ಸಿಎಂ ಬದಲಾವಣೆ ಕುರಿತು ರಾಜಕೀಯ ನಾಯಕರಿಂದ ಹೇಳಿಕೆಗಳ ಸಮರ
• ಈ ಗದ್ದಲದ ನಡುವೆಯೇ ಆಗಸ್ಟ್‌ನಲ್ಲಿ ಸಿದ್ದರಾಮಯ್ಯ ಅವರ 76ನೇ ಹುಟ್ಟು ಹಬ್ಬ
ಆ ಸಮಯದಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ
• ಸಿದ್ದರಾಮಯ್ಯ ವಿರೋಧಿಗಳಿಗೆ ಪರೋಕ್ಷವಾಗಿ ಸಂದೇಶ ರವಾನಿಸಲು ಅಹಿಂದ ತಯಾರಿ
• ಹುಬ್ಬಳ್ಳಿಯಲ್ಲಿ ಆಯೋಜನೆ ಗೊಂಡಿದ್ದ ಅಹಿಂದ ಸಮಾವೇಶದಲ್ಲಿಸಿದ್ದು ಭಾಗಿಯಿಂದ ಅದು ಸ್ಫೋಟವಾಗಿತ್ತು
• ಸಿದ್ದರಾಮಯ್ಯ ಪರ ಅಹಿಂದ ವರ್ಗ ನಿಲ್ಲುವ ಸಂದೇಶವನ್ನು ಆ ಸಮಾವೇ ಶದ ಮೂಲಕ ಸಾರಲಾಗಿತ್ತು
. ಅದೇ ಹುಬ್ಬಳ್ಳಿಯಲ್ಲಿ ಮತ್ತೆ ರ್ಕ್ಯಾಲಿ ಆಯೋಜಿಸಿ ಸಿಎಂ ಸ್ಥಾನದಿಂದ ಬದಲಿಸುವ ಯತ್ನ ಹತ್ತಿಕ್ಕಲು ಗುರಿ

Latest Videos
Follow Us:
Download App:
  • android
  • ios