Asianet Suvarna News Asianet Suvarna News

ಇನ್ಮುಂದೆ ಪ್ರತಿ ಗುರುವಾರ ಶಾಸಕರ ಜತೆ ಸಿಎಂ ಭೇಟಿ

ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಲಭವಾಗಿ ಸಿಗುತ್ತಿಲ್ಲ. ಹೀಗಾಗಿ ನಮ್ಮ ಮನವಿ ಆಲಿಸಲು ಪ್ರತ್ಯೇಕ ಸಮಯ ನಿಗದಿ ಮಾಡಿಕೊಡಿ ಎಂದು ಶಾಸಕರಿಂದ ಮನವಿ ಕೇಳಿ ಬಂದಿತ್ತು.

CM siddaramaiah meets MLAs every Thursday in bengaluru grg
Author
First Published Jul 4, 2024, 6:30 AM IST

ಬೆಂಗಳೂರು(ಜು.04):  ಎಲ್ಲಾ ಶಾಸಕರನ್ನೂ ವಿಶ್ವಾಸಕ್ಕೆ ಪಡೆಯಲು ಹಾಗೂ ಶಾಸಕರ ಅಹವಾಲು ಆಲಿಸುವ ಸಲುವಾಗಿ ಪ್ರತಿ ಗುರುವಾರ ಸಂಜೆ 4 ಗಂಟೆಯಿಂದ 6 ಗಂಟೆವರೆಗೆ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಲಭವಾಗಿ ಸಿಗುತ್ತಿಲ್ಲ. ಹೀಗಾಗಿ ನಮ್ಮ ಮನವಿ ಆಲಿಸಲು ಪ್ರತ್ಯೇಕ ಸಮಯ ನಿಗದಿ ಮಾಡಿಕೊಡಿ ಎಂದು ಶಾಸಕರಿಂದ ಮನವಿ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಾಸಕರಿಗೆ ಮನವಿಗೆ ಸ್ಪಂದಿಸಿ ಅವರ ವಿಶ್ವಾಸ ಗಳಿಸಲು ಪ್ರತಿ ಗುರುವಾರ ಕಾವೇರಿ ನಿವಾಸದಲ್ಲಿ ಶಾಸಕರ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ ಇನ್ನು ಮುಂದೆ ಪ್ರತಿ ಗುರುವಾರ (ಮುಖ್ಯಮಂತ್ರಿಯವರು ಬೆಂಗಳೂರಿನಲ್ಲಿ ಇರುವ ಸಂದರ್ಭದಲ್ಲಿ) ಬೆಳಗ್ಗೆ ಸಚಿವ ಸಂಪುಟ ಸಭೆ ನಡೆದರೆ ಸಂಜೆ ಶಾಸಕರ ಭೇಟಿ ನಡೆಯಲಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಸಿಎಂ ಪಟ್ಟಕ್ಕಾಗಿ ಸದ್ದಿಲ್ಲದೆ ಶುರುವಾಗಿದ್ಯಾ ಶಕ್ತಿ ಪ್ರದರ್ಶನ..? ಕೆಪಿಸಿಸಿ ಅಧ್ಯಕ್ಷರು ನೋಟಿಸ್ ಕೊಡ್ತೇನೆ ಎಂದದ್ದು ಯಾರಿಗೆ..?

ಈ ಶಾಸಕರ ಭೇಟಿಯು ಕೇವಲ ಕಾಂಗ್ರೆಸ್‌ ಶಾಸಕರಿಗೆ ಮಾತ್ರವಲ್ಲ, ಬಿಜೆಪಿ ಹಾಗೂ ಜೆಡಿಎಸ್‌ ಸೇರಿದಂತೆ ಎಲ್ಲ ಶಾಸಕರಿಗೂ ಅವಕಾಶವಿರುತ್ತದೆ ಎಂದು ಈ ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios