ಅಸೆಂಬ್ಲಿ ಚುನಾವಣೆ ಬಳಿಕ ಬಿಜೆಪಿ ಕಸದ ಬುಟ್ಟಿಗೆ: ಹರೀಶ್ ಕುಮಾರ್ ತಿರುಗೇಟು
ರಾಜ್ಯದಲ್ಲಿ ಇನ್ನು ಬಿಜೆಪಿಗೆ ಉಳಿಗಾಲವಿಲ್ಲ, ಅಸೆಂಬ್ಲಿ ಚುನಾವಣೆ ನಂತರ ಮೇ ಅಂತ್ಯದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಲಿದ್ದು, ಬಿಜೆಪಿ ಕಸದ ಬುಟ್ಟಿಸೇರುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ತಿರುಗೇಟು ನೀಡಿದ್ದಾರೆ.
ಮಂಗಳೂರು (ಮಾ.18) : ರಾಜ್ಯದಲ್ಲಿ ಇನ್ನು ಬಿಜೆಪಿಗೆ ಉಳಿಗಾಲವಿಲ್ಲ, ಅಸೆಂಬ್ಲಿ ಚುನಾವಣೆ ನಂತರ ಮೇ ಅಂತ್ಯದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಲಿದ್ದು, ಬಿಜೆಪಿ ಕಸದ ಬುಟ್ಟಿಸೇರುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್(Harish kumar) ತಿರುಗೇಟು ನೀಡಿದ್ದಾರೆ.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿ(Mangaluru congress)ಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿ ಕಾರ್ಡ್(Congress Guarantee Card) ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ವೋಟ್‌ಗಾಗಿ ದೈವ ದೇವರ ಹೆಸರು ಬಳಸುವ ಬಿಜೆಪಿ ಗೆದ್ದ ಬಳಿಕ ದೈವ ದೇವರನ್ನೇ ಹೀಯಾಳಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಬಿಜೆಪಿ ಇದುವರೆಗೆ ಸುಳ್ಳು ಹೇಳಿಯೇ ಅಧಿಕಾರಕ್ಕೆ ಬಂದಿದ್ದು, ಇದರ ಅರಿವು ಜನತೆಗೆ ಆಗಿದೆ. ಬಿಜೆಪಿಯ ಸುಳ್ಳಿನ ಕಾರ್ಖಾನೆಯಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್, ಜೆಡಿಎಸ್ ಹೋರಾಟದ ನಾಟಕ ಮಾಡುತ್ತಿದ್ದಾರೆ: ಅಶೋಕ್ ಕಿಡಿ
ಆರಗ ರಾಜಿನಾಮೆ ನೀಡಲಿ:
ತುಳುನಾಡಿ(Tulunadu)ನ ಪ್ರಧಾನ ಆರಾಧ್ಯ ದೈವ ಗುಳಿಗನ ಬಗ್ಗೆ ಅವಹೇಳನ ರೀತಿಯಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ(Araga jnanendra) ಅವರು ರಾಜೀನಾಮೆ ನೀಡಬೇಕು. ತೀರ್ಥಹಳ್ಳಿಯಲ್ಲಿ ಪ್ರದಶಿಸಲ್ಪಟ್ಟತುಳುನಾಡಿನ ಭಕ್ತಿ ಪ್ರಧಾನ ‘ಶಿವಧೂತೆ ಗುಳಿಗೆ’ ನಾಟಕಕ್ಕೆ ಸಂಬಂಧಿಸಿ ಮಾತನಾಡುವ ವೇಳೆ ಗೃಹ ಸಚಿವರು ಹಗುರವಾಗಿ ಮಾತನಾಡಿರುವುದು ಈಗಾಗಲೇ ವೈರಲ್ ಆಗಿದೆ. ಬಿಜೆಪಿಯದು ಡೋಂಗಿ ಹಿಂದುತ್ವ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ಎಂದರು.
50 ಕೋಟಿ ರು. ಡೀಲ್ ಶಂಕೆ:
ಸರ್ಕಾರಿ ಸ್ವಾಮ್ಯದ ಬಸ್ ಮಾರ್ಗಗಳಲ್ಲಿ 24 ಕಿ.ಮೀ. ತನಕ ಖಾಸಗಿ ಬಸ್‌ಗಳಿಗೆ ಪರವಾನಗಿ ಒದಗಿಸುವ ಮಸೂದೆಯೊಂದನ್ನು ಚುನಾವಣೆ ಘೋಷಣೆ ಮೊದಲು ತರಾತುರಿಯಲ್ಲಿ ಜಾರಿಗೊಳಿಸಲು ಸಾರಿಗೆ ಸಚಿವ ಶ್ರೀರಾಮುಲು ಮುಂದಾಗಿದ್ದು, ಇದರ ಹಿಂದೆ 50 ಕೋಟಿ ರು. ಡೀಲ್ ಕುದುರಿದೆ ಎನ್ನುವ ಆರೋಪ ಕೇಳಿ ಬಂದಿದೆ ಎಂದು ಹರೀಶ್ ಕುಮಾರ್ ಅನುಮಾನ ವ್ಯಕ್ತಪಡಿಸಿದರು.
ಎಲ್ಲ ಕ್ಷೇತ್ರಗಳಲ್ಲೂ ಎಸ್‌ಡಿಪಿಐ ಸ್ಪರ್ಧಿಸಲಿ:
ಕಾಂಗ್ರೆಸ್‌ಗೆ ಎಲ್ಲಿಯೂ ಎಸ್‌ಡಿಪಿಐ ಜತೆ ಒಪ್ಪಂದವಿಲ್ಲ. ಈ ಬಗ್ಗೆ ಎಸ್‌ಡಿಪಿಐ ಮುಖಂಡರೋರ್ವರು ಮಾಡಿರುವ ಆರೋಪಕ್ಕೆ ಮಹತ್ವವಿಲ್ಲ. ಎಸ್‌ಡಿಪಿಐ ಮತ್ತು ಬಿಜೆಪಿ ಸಮಾನ ಮನಸ್ಕ ಪಕ್ಷಗಳು. ಒಪ್ಪಂದವಿರುವುದು ಆ ಎರಡು ಪಕ್ಷಗಳ ನಡುವೆ. ಉಳ್ಳಾಲದಲ್ಲಿ ಕಳೆದ ಚುನಾವಣೆಯೊಂದರ ಸಂದರ್ಭ ಏನು ನಡೆದಿದೆ ಎಂದು ಎಲ್ಲರಿಗೂ ಗೊತ್ತು. 224 ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಸ್ಪರ್ಧಿಸಿದರೂ ನಮಗೆ ತೊಂದರೆ ಇಲ್ಲ ಎಂದು ಅವರು ಹೇಳಿದರು.
Karnataka assembly election: ಎಂ.ಪಿ.ರೇಣುಕಾಚಾರ್ಯ ಗೆಲುವು ನಿಶ್ಚಿತ: ಬಿಎಸ್‌ವೈ...
ಕಾಂಗ್ರೆಸ್ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ಮಹಾಬಲ ಮಾರ್ಲ, ಪ್ರಕಾಶ್ ಸಾಲ್ಯಾನ್, ಮೊಹಮ್ಮದ್ ಕುಂಜತ್ತಬೈಲು, ಉದಯ ಆಚಾರ್, ಸಲೀಂ ಅಹಮ್ಮದ್ ಇದ್ದರು.