ಬೆಂಗಳೂರು/ ಸೋಂಪುರ ( ಜ. 14) ಒಂದು ಕಡೆ ಮುನಿರತ್ನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬುದು ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.  ಆದರೆ  ಮಂತ್ರಿ ಮಂಡಲ‌ ವಿಸ್ತರಣೆ ಬಗ್ಗೆ  ಸಹಕಾರಿ ಸಚಿವ, ಎಸ್.ಟಿ ಸೋಮಶೇಖರ್ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ  ನಡೆದುಕೊಂಡಿದ್ದಾರೆ ಎಂದು ಸೋಮಶೇಖರ್ ಹೇಳಿದ್ದಾರೆ. ಯಾರಿಗೂ ಅಸಮಾಧಾನವಿಲ್ಲ, ಹಂತ ಹಂತವಾಗಿ ಎಲ್ಲರಿಗೂ ಅವಕಾಶ ಸಿಗಲಿದೆ ಎಂದು ಸೋಮಶೇಖರ್ ಹೇಳಿದ್ದಾರೆ.

ಮಂತ್ರಿಗಿರಿ ತಪ್ಪಿದ ನಂತರ ಮುನಿ ಮೊದಲ ಮಾತು?  ಎಸ್‌ಬಿಎಂ ಈಗಿಲ್ಲ!

ಮುಂದಿನ ದಿನಗಳಲ್ಲಿ ನಮ್ಮೊಂದಿಗಿದ್ದ ಉಳಿದವರಿಗೂ ಸಚಿವ, ಸ್ಥಾನ ಸಿಗಲಿದೆ. ನೈಸ್ ರಸ್ತೆಯ ಸೋಂಪುರದ ಕಡಲೆಕಾಯಿ ಪರೀಶೆಯಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿ ಸಚಿವ ಸಂಪುಟ ವಿಸ್ತರಣೆ ಸಮರ್ಥನೆ ಮಾಡಿಕೊಂಡಿದ್ದರು.

ಇನ್ನೊಂದು ಕಡೆ ಮಾತನಾಡಿದ್ದ ಮುನಿರತ್ನ, ಸ್ನೇಹಿತ ಶಾಸಕರೆಲ್ಲಾ ತುಂಬಾ ಬ್ಯೂಸಿ ಆಗಿದ್ದಾರೆ. ಎಲ್ಲರು ಸಚಿವರಾಗಿದ್ದಾರೆ. ಬೆಳಗ್ಗೆ ಎದ್ದು ಫೋನ್ ಮಾಡಿದ್ರೆ ಒಬ್ಬರು ದಾವಣೆಗೆರೆ ಅಂತಾರೆ. ಇನ್ನೊಬ್ನರು ಕೆಲಸದಲ್ಲಿ ಫುಲ್ ಬ್ಯೂಸಿ. ಬಿಜೆಪಿ ಪಕ್ಷಕ್ಕೆ ಸರ್ಕಾರಕ್ಕೆ ಪಾಪ ಪ್ರಾಮಾಣಿಕವಾಗಿ ದುಡಿಯುತ್ತಿರೋರು ಇವರೇ ಎಂದು ಹೇಳಿದ್ದರು.