Asianet Suvarna News Asianet Suvarna News

ಕೋವಿಡ್ ಬಳಿಕ ಸುಧಾಕರ್ ಗೆ ಮತ್ತೊಂದು ಶಾಕ್ ನೀಡಲು ಮುಂದಾದ ಸರ್ಕಾರ!

ಮುಡಾ ಹಗರಣದ ಬಳಿಕ ರಾಜ್ಯದಲ್ಲಿ ಈಗ ಹೆಚ್ಚು ಕೂತೂಹಲ ಮೂಡಿಸಿರೊದೇ ಕೋವಿಡ್ ವಿಚಾರ, ಗುರುವಾರ ನಡೆಯಲಿರೋ ಸಚಿವ ಸಂಪುಟ ಸಭೆಯಲ್ಲಿ ನ್ಯಾಯಧೀಶ ಮೈಕಲ್ ಕುನ್ಹಾ ನೀಡಿರೋ ಮಧ್ಯಂತರ ವರದಿಯನ್ನು ಅಂಗೀಕರಿಸಲಿದ್ದು, ಏನಾಗುತ್ತೋ ಎಂಬ ಕೂತೂಹಲ ಸಹಜವಾಗಿಯೇ ಇದೆ.. ಈ ಮಧ್ಯೆ ಸರ್ಕಾರ ಈಗ ಸಂಸದ ಸುಧಾಕರ್ ಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದೆ.

After Covid case karnataka govt gave another shock to dr k sudhakar rav
Author
First Published Sep 4, 2024, 11:44 PM IST | Last Updated Sep 4, 2024, 11:44 PM IST

ವರದಿ -  ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್ 
ಚಿಕ್ಕಬಳ್ಳಾಪುರ
- ಮುಡಾ ಹಗರಣದ ಬಳಿಕ ರಾಜ್ಯದಲ್ಲಿ ಈಗ ಹೆಚ್ಚು ಕೂತೂಹಲ ಮೂಡಿಸಿರೊದೇ ಕೋವಿಡ್ ವಿಚಾರ, ಗುರುವಾರ ನಡೆಯಲಿರೋ ಸಚಿವ ಸಂಪುಟ ಸಭೆಯಲ್ಲಿ ನ್ಯಾಯಧೀಶ ಮೈಕಲ್ ಕುನ್ಹಾ ನೀಡಿರೋ ಮಧ್ಯಂತರ ವರದಿಯನ್ನು ಅಂಗೀಕರಿಸಲಿದ್ದು, ಏನಾಗುತ್ತೋ ಎಂಬ ಕೂತೂಹಲ ಸಹಜವಾಗಿಯೇ ಇದೆ.. ಈ ಮಧ್ಯೆ ಸರ್ಕಾರ ಈಗ ಸಂಸದ ಸುಧಾಕರ್ ಗೆ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಹೌದ ಅದು ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ , ಉಪಾಧ್ಯಕ್ಷ ಚುನಾವನೆಯಲ್ಲಿ. ಹೌದು ಈಗಾಗಲೇ ನಗರಸಭೆಯ 31 ಸದಸ್ಯರ ಪೈಕಿ 18 ಮಂದಿ ಸಂಸದ ಸುಧಾಕರ್ ಕಡೆ ಇದ್ದು,  ಉಳಿದ 13 ಮಂದಿ ಸದಸ್ಯರು ಮಾತ್ರ ಕಾಂಗ್ರೆಸ್ ಕಡೆ ಇದ್ದಾರೆ. ಹೂಗಾಗಿ ಏನಾದ್ರು ಮಾಡಿ ಸುಧಾಕರ್ ಗೆ ಶಾಕ್ ನೀಡಲು ರಣತಂತ್ರ ರೂಪಸಿದೆ.. 5 ಮಂದಿ ವಿಧಾನಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸಲು ಕಾಂಗ್ರೆಸ್ ತೆರೆಮರೆ ಪ್ರಯತ್ನ ಮಾಡುತ್ತಿದೆ, ಈಗಾಗಲೇ ಇಬ್ಬರು ಸದಸ್ಯರನ್ನು ಸೇರ್ಪಡೆ ಮಾಡಿದ್ದು, ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ. 

5 ಎಂಎಲ್ ಸಿಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಯತ್ನ

ಹೌದು ಈಗಾಗಲೇ ಹೆಚ್ಚು ಸ್ಥಾನಗಳನ್ನು ಹೊಂದಿರೋ ಬಿಜೆಪಿ ಹಾಗೂ ಸಂಸದ ಸುಧಾಕರ್ ರನ್ನು ಎನಾದ್ರು ಮಾಡಿ ಮಣಿಸಲೇಬೇಕು ಎಂದು ಪಣತೊಟ್ಟಿರೋ ಕಾಂಗ್ರೆಸ್ 5 ಮಂದಿ ವಿಧಾನಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸಲು ಪ್ರಯತ್ನ ಮಾಡುತ್ತಿದ್ದು, ಈಗಾಗಲೇ ಇಬ್ಬರು ಎಂಎಲ್ ಸಿಗಳನ್ನು ಸೆರ್ಪಡೆ ಮಾಡಲಾಗಿದೆ ಎಂದು ಬಿಜಪಿ ಆರೋಪಿಸಿದೆ, ಎಂಆರ್ ಸೀತರಾಂ ಹಾಗೂ ಅನಿಲ್ ಕುಮಾರ್ ಇಬ್ಬರನ್ನು ಸೇರಿಸಿದ್ದು, ಉಳಿದಂತೆ ಗೋವಿಂದ್ ರಾಜ್, ಯು ಬಿ ವೆಂಕಟೇಶ್ ಹಾಗೂ ಡಿ.ಟಿ. ಶ್ರೀನಿವಾಸ್ ರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಮುಂದಾಗಿದ್ದು, ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಬಿಜೆಪಿ ನಾಯಕರು ಡಿಸಿ, ಎಸಿ ಸೇರಿದಂತೆ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.. 

ಸಾಗುವಳಿ ಚೀಟಿ ನೀಡದ ಕಂದಾಯ ಅಧಿಕಾರಿಗಳು; ವಿಷ ಸೇವಿಸಿ ರೈತ ಆತ್ಮಹತ್ಯೆಗೆ ಯತ್ನ!

ಕಾಂಗ್ರೆಸ್ ವಿರುದ್ಧ ಸುಧಾಕರ್ ಕಿಡಿ

ತನ್ನದೇ ಆದ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದ ಕಾಂಗ್ರೆಸ್ ವಾಮಮಾರ್ಗದಲ್ಲಿ ಅಧಿಕಾರಿ ಪಡೆಯಲು ಯತ್ನಿಸುತ್ತಿದ್ದು, ಚಿಕ್ಕಬಳ್ಳಾಪುರದಲ್ಲಿ ವಾಸವೇ ಇಲ್ಲದ 5 ಮಂದಿ ವಿಧಾನಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸಲು ಮುಂದಾಗಿದ್ದಾರೆ, ಒಂದು ವೇಳೆ ಇದಕ್ಕೆ ಅಧಿಕಾರಿಗಳು ಮುಂದಾದ್ರೆ ಅವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ, ಈ ಸಂಬಂಧ ನ್ಯಾಯಾಲಯದ ಕದ ತಟ್ಟಬೇಕಾಗುತ್ತದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.. \

ಗೃಹ ಲಕ್ಷ್ಮಿ ಹಣ ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಸಿ‌ಕೊಟ್ಟ ಅತ್ತೆ!

ಕಾಂಗ್ರೆಸ್ ಗೆ ಬಹುಮತವಿದ್ದರು ಹೊಂದಾಣಿಕೆ ಕೊರತೆ

ಚಿಕ್ಕಬಳ್ಳಾಪುರ ನಗರಸಭೆಗೆ ಕಾಂಗ್ರೆಸ್ ಬಹುಮತವಿದ್ದು, 16 ಮಂದಿ ಕಾಂಗ್ರೆಸ್ ನಿಂದಲೇ ಆಯ್ಕೆ ಆಗಿದ್ದರು, ಆದ್ರೆ ಕಳೆದ ವಿಧಾನಸಭಾ ಚುನಾವಣೆಯಿಂದ ಈ ಪೈಕಿ 5 ಸದಸ್ಯರು ಬಿಜೆಪಿ ಕಡೆ ವಾಲಿದ್ದು ಸುಧಾಕರ್ ಜೊತೆ ಇದ್ದಾರೆ, ನಗರಸಭೆ ಚುನಾವಣೆ ಘೋಷಣೆ ಬಳಿಕ ಮತ್ತೊಬ್ಬ ಕಾಂಗ್ರೆಸ್ ಸದಸ್ಯ ಹೋಗಿದ್ದು, ಒಟ್ಟು 6 ಸದಸ್ಯರು ಬಿಜೆಪಿ ಕಡೆ ಹೋದಂತಾಗಿದೆ. ಹೀಗಾಗಿ ಒಂದು ಕಡೆ ಶಾಸಕರು, ಉಸ್ತುವಾರಿ ಸಚಿವರು, ಸರ್ಕಾರ ಇರೋವಾಗಲಾದ್ರು ಅಧಿಕಾರವನ್ನು ಪಡೆಯದೇ ಹೋದ್ರೆ ಹೇಗೆ ಎಂಬ ಹಠಕ್ಕೆ ಬಿದ್ದಿರೋ ಕಾಂಗ್ರೆಸ್ ನಾಯಕರಿಗೆ ಈ ಚುನಾವಣೆ ಯಶಕಾಣುತ್ತೋ ಇಲ್ಲವೋ ಕಾದುನೋಡಬೇಕಿದೆ.

Latest Videos
Follow Us:
Download App:
  • android
  • ios