2.5 ವರ್ಷ ಬಳಿಕ ಸಿದ್ದು ಸಚಿವ ಸಂಪುಟ ಪೂರ್ಣ ಬದಲು: ಶಾಸಕ ವಿನಯ್ ಕುಲಕರ್ಣಿ ಹೊಸಬಾಂಬ್
ಎರಡೂವರೆ ವರ್ಷ ಬಳಿಕ ಸಂಪುಟದ ಹಿರಿಯ ಸಚಿವರು ಬೇರೆಯವರಿಗೆ ಅಧಿಕಾರ ಬಿಟ್ಟುಕೊಡಬೇಕೆಂಬ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ ಬೆನ್ನಲ್ಲೇ ಇದೀಗ ಶಾಸಕ ವಿನಯ್ ಕುಲಕರ್ಣಿ ಕೂಡ ಸಚಿವ ಸಂಪುಟ ಬದಲಾವಣೆಯ ಸುಳಿವು ನೀಡಿದ್ದಾರೆ.

ವಿಜಯಪುರ (ಆ.19): ಎರಡೂವರೆ ವರ್ಷ ಬಳಿಕ ಸಂಪುಟದ ಹಿರಿಯ ಸಚಿವರು ಬೇರೆಯವರಿಗೆ ಅಧಿಕಾರ ಬಿಟ್ಟುಕೊಡಬೇಕೆಂಬ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ ಬೆನ್ನಲ್ಲೇ ಇದೀಗ ಶಾಸಕ ವಿನಯ್ ಕುಲಕರ್ಣಿ ಕೂಡ ಸಚಿವ ಸಂಪುಟ ಬದಲಾವಣೆಯ ಸುಳಿವು ನೀಡಿದ್ದಾರೆ. ಎರಡೂವರೆ ವರ್ಷ ಬಳಿಕ ರಾಜ್ಯ ಸಚಿವ ಸಂಪುಟದ ಇಡೀ ತಂಡ ಬದಲಾಗಲಿದೆ. ಆಗ ಹೊಸಬರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಈ ಬಾರಿ ನಿರೀಕ್ಷೆಗೂ ಮೀರಿ 136 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಕೇವಲ 34 ಶಾಸಕರಿಗೆ ಸಚಿವರಾಗಲು ಅವಕಾಶವಿದೆ. ಎಲ್ಲ ಶಾಸಕರನ್ನೂ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ. ಎರಡೂವರೆ ವರ್ಷ ನಂತರ ಸಚಿವ ಸಂಪುಟ ಬದಲಾವಣೆ ಆಗಲಿದೆ. ಆಗ ಹೊಸಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಇದರಿಂದಾಗಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡವರ ಅತೃಪ್ತಿ ಶಮನವಾಗಲಿದೆ ಎಂದರು.
ಕಾವೇರಿ ಸಮಸ್ಯೆ ಕೇವಲ ರಾಜಕೀಯ ಹೋರಾಟವಲ್ಲ: ಸಂಸದೆ ಸುಮಲತಾ
ಸಚಿವ ಸಂಪುಟ ಬದಲಾವಣೆ ಕುರಿತು ಈಗಾಗಲೇ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಅವರು ಸಚಿವರ ತಂಡ ಬದಲಾವಣೆ ಆಗಬೇಕು ಎಂದಿರುವುದು ಸೂಕ್ತವಾಗಿದೆ. ಇದು ಸಂತಸದ ಸಂಗತಿ. ನಿಗಮ-ಮಂಡಳಿಗಳಿಗೆ 30 ಶಾಸಕರಂತೆ 2 ಬಾರಿ ನೇಮಕವಾದರೆ, ಎರಡು ಬಾರಿ ಸಚಿವರು ಬದಲಾವಣೆಯಾದರೆ ಬಹುತೇಕ ಎಲ್ಲ ಶಾಸಕರಿಗೂ ಅಧಿಕಾರ ಸಿಕ್ಕಂತಾಗಲಿದೆ ಎಂದರು.
ಇದೇ ವೇಳೆ ಮುಖ್ಯಮಂತ್ರಿ ಬದಲಾವಣೆ ಏನಿದ್ದರೂ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ ಅವರು, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ಡಿ.ಕೆ.ಶಿವಕುಮಾರ್ ಯಾರ ಬಳಿಯೂ ಹೋಗಿಲ್ಲ. ಸಿದ್ದರಾಮಯ್ಯ ಅವರನ್ನು ದುರ್ಬಲ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮುನಿಯಪ್ಪ ಹೇಳಿದ್ದೆನು?: ಎರಡೂವರೆ ವರ್ಷ ಬಳಿಕ ಸಂಪುಟದ ಹಿರಿಯ ಸಚಿವರು ಬೇರೆಯವರಿಗೆ ಅಧಿಕಾರ ಬಿಟ್ಟುಕೊಡಬೇಕು ಎಂದು ಕೆಪಿಸಿಸಿ ಸರ್ವಸದಸ್ಯರ ಸಭೆಯಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದರು. ಈ ಹೇಳಿಕೆಗೆ ಕೆಲ ಸಚಿವರಿಂದ ವಿರೋಧ ವ್ಯಕ್ತವಾಗಿತ್ತು.
ಇಂದಿರಾ ಕ್ಯಾಂಟೀನ್ನಲ್ಲಿ ಊಟದ ದರ ದುಬಾರಿ: ಬಡವರ ಹೊಟ್ಟೆ ಮೇಲೆ ಸಿದ್ದು ಸರ್ಕಾರ ಬರೆ!
ವಿನಯ್ ವಾದವೇನು?: ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಈ ಬಾರಿ ನಿರೀಕ್ಷೆಗೂ ಮೀರಿ 136 ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಕೇವಲ 34 ಶಾಸಕರಿಗೆ ಸಚಿವರಾಗಲು ಅವಕಾಶವಿದೆ. ಎಲ್ಲ ಶಾಸಕರನ್ನೂ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ. ಎರಡೂವರೆ ವರ್ಷ ನಂತರ ಸಚಿವ ಸಂಪುಟ ಬದಲಾವಣೆ ಆಗಲಿದೆ. ಆಗ ಹೊಸಬರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.