ಕಾವೇರಿ ಸಮಸ್ಯೆ ಕೇವಲ ರಾಜಕೀಯ ಹೋರಾಟವಲ್ಲ: ಸಂಸದೆ ಸುಮಲತಾ
ಕಾವೇರಿ ಹೋರಾಟ ಎನ್ನುವುದು ಕೇವಲ ರಾಜಕೀಯ ಹೋರಾಟವಲ್ಲ. ಇದರಲ್ಲಿ ಜನಸಾಮಾನ್ಯರೆಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಮಂಡ್ಯ (ಆ.19): ಕಾವೇರಿ ಹೋರಾಟ ಎನ್ನುವುದು ಕೇವಲ ರಾಜಕೀಯ ಹೋರಾಟವಲ್ಲ. ಇದರಲ್ಲಿ ಜನಸಾಮಾನ್ಯರೆಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಮಳೆ ಕೊರತೆ ಎದುರಾದಾಗಲೆಲ್ಲಾ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಕೇಂದ್ರದಿಂದ ಹಿಡಿದು ಸುಪ್ರೀಂಕೋರ್ಚ್ವರೆಗೂ ತಮಿಳುನಾಡು ಪರವಾಗಿಯೇ ತೀರ್ಪುಗಳು ಹೊರಬೀಳುತ್ತಿವೆ. ಇದರಿಂದ ರೈತರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಈ ಹಂತದಲ್ಲಿ ಸರ್ಕಾರಗಳು ಜವಾಬ್ದಾರಿಯುತ ತೀರ್ಮಾನಗಳನ್ನು ಕೈಗೊಳ್ಳಬೇಕಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಳೆಯಾಗುವ ಪರಿಸ್ಥಿತಿ ಇಲ್ಲ: ಮುಂದಿನ ದಿನಗಳಲ್ಲಿ ಮಳೆ ಬೀಳುವ ಪರಿಸ್ಥಿತಿ ಕಾಣಿಸುತ್ತಿಲ್ಲ. ಕಾವೇರಿ ಕಣಿವೆ ಜಲಾಶಯಗಳು ಭರ್ತಿಯಾಗಿಲ್ಲ. ನೀರಿಗೆ ಸಂಕಷ್ಟಎದುರಾಗಿರುವ ಸಮಯದಲ್ಲಿ ಕೆಆರ್ಎಸ್ನಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದು ರೈತರಿಗೆ ಮಾತ್ರವಲ್ಲ ಜನಸಾಮಾನ್ಯರಿಗೂ ಸಂಕಷ್ಟಎದುರಾಗಲಿದೆ. ಹಾಗಾಗಿ ರೈತರ ಹೋರಾಟದ ಜೊತೆ ನಾವೆಲ್ಲರೂ ನಿಲ್ಲಬೇಕಾಗಿದೆಸಂಕಷ್ಟಕಾಲದಲ್ಲಿ ರೈತರು ಬೆಳೆಯುವ ಬೆಳೆಗೆ ಮಾತ್ರ ಸಂಕಷ್ಟಎಂದು ಭಾವಿಸಬಾರದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಕಾಡಲಿದೆ. ಹಾಗಾಗಿ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ಇಂದಿರಾ ಕ್ಯಾಂಟೀನ್ನಲ್ಲಿ ಊಟದ ದರ ದುಬಾರಿ: ಬಡವರ ಹೊಟ್ಟೆ ಮೇಲೆ ಸಿದ್ದು ಸರ್ಕಾರ ಬರೆ!
ಜನಸಾಮಾನ್ಯರ ಸಮಸ್ಯೆ: ನದಿ ನೀರು ಹಂಚಿಕೆ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ರೈತರ ಸಮಸ್ಯೆ, ನೀರಿನ ಸಮಸ್ಯೆ ಕೇವಲ ಯಾರೋ ಒಬ್ಬರಿಗೆ ಸಂಬಂಧಿಸಿದ ಸಮಸ್ಯೆಯಲ್ಲ. ಅದು ಜನಸಾಮಾನ್ಯರ ಸಮಸ್ಯೆ ಎಂದು ಭಾವಿಸಬೇಕು. ಮಳೆ ಬಾರದ ಕಾರಣ ಪ್ರಸ್ತುತ ಸಂಕಷ್ಟಪರಿಸ್ಥಿತಿ ಎದುರಾಗಿದೆ. ಜಲ ಸಂಕಷ್ಟದ ನಡುವೆಯೂ ಈ ಬಾರಿ ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ರೈತರನ್ನು ಸಂದಿಗ್ಧ ಸ್ಥಿತಿಗೆ ದೂಡಿದೆ. ಈ ಸಮಯದಲ್ಲಿ ನಾವು ಯಾವ ರೀತಿ ಹೋರಾಟ ಮಾಡುತ್ತೇವೆ ಎನ್ನುವುದು ಮುಖ್ಯ ಎಂದು ತಿಳಿಸಿದರು.
ತಮಿಳುನಾಡು ಪರ ಹೆಚ್ಚು ಒಲವು: ಕೇಂದ್ರದಲ್ಲಿ ತಮಿಳುನಾಡು ಪರವಾಗಿ ಹೆಚ್ಚು ಒಲವು ಇದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಹೋರಾಟ ಮಾಡಬೇಕಾದ ಅವಶ್ಯಕತೆಯಿದೆ. ಕಾವೇರಿ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡಬೇಕು. ನಮಗೇ ನೀರಿನ ಸಮಸ್ಯೆ ಇದೆ. ಹಾಗಾಗಿ ನಮ್ಮ ಹೋರಾಟ ನಾವು ಮಾಡಬೇಕು. ನಮಗೆ ಸಮಸ್ಯೆ ಇದ್ದರೂ ನೀರು ಬಿಡುತ್ತಿದ್ದಾರೆ. ಸರ್ವ ಪಕ್ಷಗಳ ಸಭೆ ಕರೆದಿರುವ ಬಗ್ಗೆ ಮಾಹಿತಿ ಇದೆ, ಎಲ್ಲರೂ ಸೇರಿ ಚರ್ಚಿಸಲಿ. ಮುಖ್ಯವಾಗಿ ರೈತರ ಹಿತ ಕಾಪಾಡುವುದು ಪ್ರಮುಖವಾಗಿದೆ ಎಂದರು.
ವಿದ್ಯಾರ್ಥಿಗಳು ಹೇಗೆ ಓದಬೇಕು ಅಂದ್ರೆ ರಿಸಲ್ಟ್ ದಿನ ಇಡೀ ಕರ್ನಾಟಕವೇ ನಿಮ್ಮ ಬಗ್ಗೆ ಓದಬೇಕು: ಪ್ರದೀಪ್ ಈಶ್ವರ್
ನಾನು ಬಿಜೆಪಿ ಸಂಸದೆಯಲ್ಲ: ರಾಜಕೀಯವಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದೇನೆ. ಆದರೆ, ನಾನು ಬಿಜೆಪಿ ಸಂಸದೆ ಅಲ್ಲ . ಬಿಜೆಪಿ ನಿರ್ಧಾರ ನನಗೆ ಅನ್ವಯವಾಗುವುದಿಲ್ಲ. ಅದು ಅವರಿಗೆ ಬಿಟ್ಟದ್ದು. ಎಲ್ಲವನ್ನೂ ನನ್ನ ಕೇಳಿ ಮಾಡಬೇಕು ಎಂಬ ನಿಯಮವೂ ಇಲ್ಲ. ಪ್ರತಿಯೊಂದು ವಿಷಯದಲ್ಲೂ ನಾನು ಮಧ್ಯ ಪ್ರವೇಶ ಮಾಡುವುದಿಲ್ಲ. ನನ್ನನ್ನು ಸಂಪರ್ಕ ಮಾಡಿದರೆ ಬೆಂಬಲ ಮಾಡುತ್ತೇವೆ. ಇನ್ನು ನನಗೆ ರಾಜಕೀಯ ಅನಿವಾರ್ಯವಾಗಿಲ್ಲ, ಆಕಸ್ಮಿಕ ಮಾತ್ರ ಎಂದರು. ಆಪರೆಷನ್ ಹಸ್ತ ವಿಚಾರವಾಗಿ ಯಾರೂ ನನಗೆ ಆಹ್ವಾನ ಮಾಡಿಲ್ಲ, ನಾನು ಸಂತೋಷವಾಗಿದ್ದೇನೆ. ಕಾಂಗ್ರೆಸ್‌ನಿಂದ ನಮಗೆ ಯಾವುದೇ ಆಫರ್ ಬಂದಿಲ್ಲ. ಎಲ್ಲವೂ ವದಂತಿ ಅಷ್ಟೇ. ಎಲ್ಲವೂ ಸರಿ ಎಂದಾದರೆ ಮಾತ್ರ ಮುಂದಿನ ಹೆಜ್ಜೆ ಇಡುತ್ತೇನೆ ಎಂದರು.