ಮೋದಿ, ಸಿಎಂ ಕಾರ್ಯ ಮೆಚ್ಚಿ ಸುದೀಪ್ ಪ್ರಚಾರಕ್ಕೆ ಒಪ್ಪಿದ್ದಾರೆ: ಸಚಿವ ಸುಧಾಕರ್
ನಟ ಕಿಚ್ಚ ಸುದೀಪ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯ ಮೆಚ್ಚಿ ಪ್ರಚಾರ ಮಾಡಲು ಒಪ್ಪಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ (ಏ.06): ನಟ ಕಿಚ್ಚ ಸುದೀಪ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯ ಮೆಚ್ಚಿ ಪ್ರಚಾರ ಮಾಡಲು ಒಪ್ಪಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮೋದಿಯವರ 8 ವರ್ಷದ ಆಡಳಿತ, ಬಡವರಿಗೆ ಅವರು ನೀಡಿದ ಕಾರ್ಯಕ್ರಮಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ಮುಟ್ಟಿರುವ ಕಾರಣ ಬಿಜೆಪಿ ವಿಶ್ವಸಾರ್ಹ ಪಕ್ಷವಾಗಿ ಪರಿವರ್ತನೆಯಾಗಿದೆ.
ಬಿಜೆಪಿ ರಾಜಕೀಯ ಆಂದೋಲನವಾಗಿ ಉಳಿಯದೆ, ಸಾಮಾಜಿಕ ಆಂದೋಲನವಾಗಿ ಪರಿವರ್ತನೆಯಾಗಿದೆ. ಇದರಿಂದ ಪಕ್ಷದ ಮೇಲೆ ಜನರಿಗೆ ನಂಬಿಕೆ, ವಿಶ್ವಾಸ ಹೆಚ್ಚಾಗಿದೆ ಎಂದರು. ಕಾಂಗ್ರೆಸ್ ಭರವಸೆಗಳ ಸುಳ್ಳನ್ನು ಆರಂಭಿಸಿದೆ. ಪ್ರತಿ ಮಹಿಳೆಗೆ 2 ಸಾವಿರ ನೀಡುವ ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯನವರು 13 ಬಾರಿ ಬಜೆಟ್ ಮಂಡಿಸಿದವರು. ರಾಜ್ಯದಲ್ಲಿ 2 ಕೋಟಿ ಮಹಿಳೆಯರಿದ್ದರೆ ತಿಂಗಳಿಗೆ 4 ಸಾವಿರ ಕೋಟಿ, ವರ್ಷಕ್ಕೆ 48 ಸಾವಿರ ಕೋಟಿ ಅಗತ್ಯ. ಅಂದರೆ, ಬಜೆಟ್‌ನ ಒಟ್ಟು ಮೊತ್ತದಲ್ಲಿ 50 ಸಾವಿರ ಕೋಟಿಯನ್ನು ಮಹಿಳೆಯರಿಗೆ ನೀಡಿದರೆ ರಾಜ್ಯದ ಗತಿ ಏನು ಎಂದು ಪ್ರಶ್ನಿಸಿದರು.
ಇಂದು ಬೆಳಗ್ಗೆ 40-45 ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್: 100 ಕ್ಷೇತ್ರಗಳಿಗೆ ಸ್ಪರ್ಧಿ ಘೋಷಣೆ ಬಾಕಿ
ಬಿಜೆಪಿಯಿಂದ ಜನಹಿತ ಪ್ರಣಾಳಿಕೆ: ಸಮಾಜದಲ್ಲಿರುವ ಎಲ್ಲ ವಲಯಗಳ ಭಾಗಿದಾರರ ಜೊತೆ ಚರ್ಚೆ ನಡೆಸಿ ಜನಹಿತವಾದ ಪ್ರಣಾಳಿಕೆಯನ್ನು ರೂಪಿಸಲಾಗುವುದು ಎಂದು ಬಿಜೆಪಿ ಚುನಾವಣಾ ಪ್ರಣಾಳಿಕೆ ಸಂಚಾಲಕರಾದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಪ್ರಣಾಳಿಕೆ ಸಭೆಯಲ್ಲಿ ಮಾತನಾಡಿ, ಕಳೆದೊಂದು ತಿಂಗಳಿಂದ ನಿರಂತರವಾಗಿ ಕೂಲಿ ಕಾರ್ಮಿಕರ, ರೈತರ, ಮಹಿಳೆಯರನ್ನು ಒಳಗೊಂಡಂತೆ ಸಮಾಜದಲ್ಲಿರುವ ಎಲ್ಲಾ ವರ್ಗದ ಜನರ ಅಭಿಪ್ರಾಯ ಪಡೆದು ಪ್ರಣಾಳಿಕೆ ರೂಪಿಸಲಿರುವುದರಿಂದ ಅದು ಜನಪರವಾಗಿ ಜನಹಿತದ ಜೊತೆಗೆ ಸತ್ಯದಿಂದ ಕೂಡಿರುತ್ತದೆ.
ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೆ ಪ್ರಣಾಳಿಕೆ ಭಾಗವಾಗಿ ಕೇಂದ್ರ ಸಚಿವರು ವಿವಿಧ ಕಾರ್ಯಕ್ರಮಗಳಲ್ಲಿ ಶೀಘ್ರದಲ್ಲೇ ಭಾಗವಹಿಸಲಿದ್ದಾರೆ. ಜನರಿಂದ ಜನರಿಗಾಗಿ ಜನರಿಗೋಸ್ಕರ ಮುಂದಿನ 5 ವರ್ಷಗಳಲ್ಲಿ ಅನುಷ್ಠಾನಕ್ಕೆ ತರಬಹುದಾದ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ತರಲಾಗುವುದು ಎಂದ ಸುಧಾಕರ್, ಬೇರೆಯವರ ರೀತಿ ನಾವು ಎಸಿ ಕೊಠಡಿಯಲ್ಲಿ ಕೂತು ಪ್ರಣಾಳಿಕೆ ಸಿದ್ಧಪಡಿಸುವುದಿಲ್ಲ ಎಂದು ಕಾಂಗ್ರೆಸ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಎಲ್ಲ ವರ್ಗಗಳ ಅಭಿಪ್ರಾಯ ಸಂಗ್ರಹ: ಕಳೆದೊಂದು ತಿಂಗಳಿಂದ ನಿರಂತರವಾಗಿ ಕೂಲಿ ಕಾರ್ಮಿಕರರ, ರೈತರ, ಮಹಿಳೆಯರನ್ನು ಒಳಗೊಂಡಂತೆ ಸಮಾಜದಲ್ಲಿರುವ ಎಲ್ಲಾ ವರ್ಗದ ಜನರ ಅಭಿಪ್ರಾಯವನ್ನು ಪಡೆದು ನಾವು ಪ್ರಣಾಳಿಕೆ ರೂಪಿಸಲಿರುವುದರಿಂದ ಪ್ರಣಾಳಿಕ ಜನಪರವಾಗಿ ಜನಹಿತದ ಜೊತೆಗೆ ಸತ್ಯದಿಂದ ಕೂಡಿರುತ್ತದೆ ಎಂದರು. ಕೇಂದ್ರ ವಿತ್ತ ಸಚಿವರು, ಪಿಯೂಷ್ ಗೋಯೆಲ್ ಕೂಡ ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೆ ಪ್ರಣಾಳಿಕೆ ಭಾಗವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆಂದರು. ಜನರಿಂದ ಜನರಿಗಾಗಿ ಜನರಗೋಸ್ಕರ ಮುಂದಿನ 5 ವರ್ಷಗಳಲ್ಲಿ ಅನುಷ್ಟಾನಕ್ಕೆ ತರಬಹುದಾದ ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ತರಲಾಗುವುದೆಂದು ಸಚಿವ ಸುಧಾಕರ್ ತಿಳಿಸಿದರು.
ಸುದೀಪ್ ರಾಜಕೀಯ ಪ್ರವೇಶ ಇಲ್ಲ: ಬಿಜೆಪಿಯ ಪರ ಪ್ರಚಾರ
ಮೂಲಕ ಸಭೆಯಲ್ಲಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್, ಬಿಜೆಪಿ ಮಂಡಲ ಅಧ್ಯಕ್ಷ ಕೃಷ್ಣಾರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಮೋಹನ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಆನಂದ್, ಎಂಎಫ್‌ಸಿ ನಾರಾಯಣಸ್ವಾಮಿ ಮತ್ತಿತರರು ಇದ್ದರು.