ಅಕ್ರಮ ಚಿನ್ನ ಸಾಗಣೆ ಕೇಸಲ್ಲಿ ಬಂಧಿತ ನಟಿ ರನ್ಯಾ ರಾವ್‌ಗೆ ತಮ್ಮ ಚಾರಿಟೆಬಲ್ ಟ್ರಸ್ಟ್‌ನಿಂದ 25 ಲಕ್ಷ ರು. ಮತ್ತು 15 ಲಕ್ಷ ರು. ಪ್ರತ್ಯೇಕವಾಗಿ ನೀಡಲಾಗಿದೆ ಎಂದು ಡಾ.ಜಿ.ಪರಮೇಶ್ವರ್‌ ಅವರೇ ತಿಳಿಸಿದ್ದಾರೆ ಹೀಗೆಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ಮಾಧ್ಯಮಗಳಿಗೆ ಮಾಹಿತಿ ತಿಳಿಸಿದ್ದಾರೆ. 

ಬೆಂಗಳೂರು (ಮೇ.23): ಅಕ್ರಮ ಚಿನ್ನ ಸಾಗಣೆ ಕೇಸಲ್ಲಿ ಬಂಧಿತ ನಟಿ ರನ್ಯಾ ರಾವ್‌ಗೆ ತಮ್ಮ ಚಾರಿಟೆಬಲ್ ಟ್ರಸ್ಟ್‌ನಿಂದ 25 ಲಕ್ಷ ರು. ಮತ್ತು 15 ಲಕ್ಷ ರು. ಪ್ರತ್ಯೇಕವಾಗಿ ನೀಡಲಾಗಿದೆ ಎಂದು ಡಾ.ಜಿ.ಪರಮೇಶ್ವರ್‌ ಅವರೇ ತಿಳಿಸಿದ್ದಾರೆ ಹೀಗೆಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ಮಾಧ್ಯಮಗಳಿಗೆ ಮಾಹಿತಿ ತಿಳಿಸಿದ್ದಾರೆ. ಇದರಿಂದ ರನ್ಯಾ ರಾವ್ ಪ್ರಕರಣಕ್ಕೂ ಪರಮೇಶ್ವರ್ ಅವರ ಶಿಕ್ಷಣ ಮೇಲಿನ ಸಂಸ್ಥೆಗಳ ನಿರ್ದೇಶನಾಲಯ (ಇ.ಡಿ) ಜಾರಿ ದಾಳಿಗೂ ಸಂಬಂಧದ ಶಂಕೆ ಮೂಡುವಂತಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಾ.ಜಿ.ಪರಮೇಶ್ವರ್ ಭೇಟಿ ನಂತರ ಮತ್ತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾನು ಡಿ.ಕೆ.ಶಿವಕುಮಾರ್, ಪರಮೇಶ್ವರ್ ಅವರ ಮನೆಗೆ ಹೋಗಿ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಸಾರ್ವಜನಿಕ ಜೀವನದಲ್ಲಿರುವ ನಾವೆಲ್ಲ ನಮ್ಮ ಚಾರಿಟೆಬಲ್ ಟ್ರಸ್ಟ್‌ಗಳ ಮೂಲಕ ಹಲವರಿಗೆ ನೆರವು ನೀಡುತ್ತೇವೆ. ಅದೇ ರೀತಿ ಪರಮೇಶ್ವರ್ ಅವರೂ ಹಣ ನೀಡಿದ್ದಾರೆ. ತಮ್ಮ ಟ್ರಸ್ಟ್‌ನಿಂದ 25 ಲಕ್ಷ ರು. ಮತ್ತು 15 ಲಕ್ಷ ರು. ನೀಡಿರುವುದಾಗಿ ತಿಳಿಸಿದ್ದಾರೆ. 

ಇನ್ನು ಮದುವೆಯಲ್ಲಿ ಉಡುಗೊರೆ ನೀಡಿರುವುದು ಸಾಮಾನ್ಯ ವಿಚಾರ. ಮದುವೆ ಸೇರಿ ಶುಭಸಮಾರಂಭಕ್ಕೆ ಹೋದಾಗ ಕೊಟ್ಟಿರಬಹುದು ಎಂದರು. ಡಾ.ಪರಮೇಶ್ವರ್ ಹಣ ನೀಡಿದ್ದಾರೆಂದ ಮಾತ್ರಕ್ಕೆ ಅದನ್ನು ಸ್ಮಗ್ಲಿಂಗ್‌ಗೆ ಬಳಸಿ ಎಂದು ಅವರು ಹೇಳಿಲ್ಲವಲ್ಲ. ಅಂತಹ ಪ್ರಭಾವಿ ವ್ಯಕ್ತಿ, ಕಾನೂನು ಪಾಲಿಸುವವರು ಆ ರೀತಿಯ ಕೆಲಸಕ್ಕೆ ಪ್ರೇರೇಪಿಸುವುದಿಲ್ಲ. ರನ್ಯಾರಾವ್ ತಪ್ಪು ಮಾಡಿದ್ದರೆ ಅದು ಆಕೆಯ ವೈಯಕ್ತಿಕ ವಿಚಾರ. ತಪ್ಪು ಸಾಬೀತಾದರೆ ಶಿಕ್ಷೆಯಾಗಲಿ ಎಂದರು.

ಬೆಂಗ್ಳೂರಿಗೆ 4500 ಎಲೆಕ್ಟ್ರಿಕ್ ಬಸ್‌: ಕೇಂದ್ರ ಸಚಿವ ಎಚ್‌ಡಿಕೆ ಬಂಪರ್!

ಪರಂ ಸಜ್ಜನ ರಾಜಕಾರಣಿ: ಪರಮೇಶ್ವರ್ ಅವರು, ಗೃಹಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಅವರ ಬಗ್ಗೆ ನಮಗೆ ಹೆಮ್ಮೆಯಿದೆ. 1990ರಿಂದಲೂ ನನ್ನೊಂದಿಗೆ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರು ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿ. ಪರಮೇಶ್ವರ್ ಯಾವುದೇ ತಪ್ಪು ಮಾಡಿಲ್ಲ. ನಾವು ಅವರ ಪರ ನಿಲ್ಲುತ್ತೇವೆ ಎಂದು ಹೇಳಿದರು.