ದಿನಕ್ಕೆ ಐದು ಕಾಸ್ಟ್ಯೂಮ್‌ಗಳ ಬದಲಾವಣೆ, ಕ್ಯಾಮೆರಾ ಡಿಪಾರ್ಟ್‌ಮೆಂಟ್‌ನೊಂದಿಗೆ ಜನರ ತೆರಿಗೆ ಹಣ ಖರ್ಚು ಮಾಡಿಕೊಂಡು ಸುತ್ತಾಡುವುದೇ ಮೋದಿ ಜಾಯಮಾನ ಎಂದು ಬಹುಭಾಷಾ ನಟ ಪ್ರಕಾಶ್‌ ರಾಜ್‌ ಕಿಡಿಕಾರಿದ್ದಾರೆ. 

ಉಳ್ಳಾಲ(ದ.ಕ): ತೊಕ್ಕೊಟ್ಟು ಕಲ್ಲಾಪು ಯುನಿಟಿ ಸಭಾಂಗಣದ ಬಳಿ ಡಿವೈಎಫ್‌ ನೇತೃತ್ವದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ೧೨ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿ ಪ್ರಧಾನಿ ವಿರುದ್ಧ ತೀವ್ರ ಕಿಡಿಕಾರಿದರು. ಶ್ರದ್ಧೆಯಿಲ್ಲದ ಭಕ್ತಿಯಿಂದ ಎಲ್ಲ ಧರ್ಮಗಳಲ್ಲೂ ಅಂಧ ಭಕ್ತರಿದ್ದಾರೆ. ಮುಸ್ಲಿಂ, ಕ್ರೈಸ್ತ, ಹಿಂದೂ ಧರ್ಮಗಳಲ್ಲೂ ಈ ರೀತಿಯ ಭಕ್ತರಿರುವುದರಿಂದ ದೇಶದಲ್ಲಿ ಸಮಸ್ಯೆಯಿದೆ. 

ನನ್ನದು ಯಾವ ಪಕ್ಷವೂ ಅಲ್ಲ, ಜನರ ಪಕ್ಷ. ಎಲ್ಲ ಧರ್ಮ, ಭಾಷೆಯ ಸಹೃದಯಿಗಳಿಂದ ನಾನು ಬದುಕನ್ನು ಕಟ್ಟಿಕೊಂಡಿದ್ದೇನೆ. ಅದಕ್ಕಾಗಿ ಜನರಿಗೆ ಸಮಸ್ಯೆಗಳು ಬಂದಾಗ ಅವರ ಪರ ನಿಲ್ಲಬೇಕು ಎಂಬುದಷ್ಟೇ ಆಶಯ ಎಂದರು. ದೇಶವನ್ನು ಆಳುವಾತ ೨೦೧೯ರಲ್ಲಿ ಗುಹೆ ಸೇರಿಕೊಂಡರು, ೨೦೨೪ರಲ್ಲಿ ನೀರಿನಡಿ ಹೋಗಿಬಿಟ್ಟರು, ಮುಂದಿನ ಚುನಾವಣೆ ನಂತರ ಚಂದಿರನ ಮೇಲೆ ನಿಂತು ಪೋಸ್‌ ಕೊಡುವುದಂತು ಸತ್ಯ. ವಂದೇ ಭಾರತ್‌ ರೈಲು ಉದ್ಘಾಟನಾ ಸಂದರ್ಭದಲ್ಲಿ ರೈಲ್ವೇ ಸ್ಟೇಷನ್‌ ಮಾಸ್ಟರ್‌ ಕೂಡಾ ಬಾವುಟಗಳನ್ನು ತೋರಿಸದಷ್ಟು ಈ ವ್ಯಕ್ತಿ ತೋರಿಸಿದ್ದಾರೆ. 

ಅಲಹಾಬಾದ್‌ ಸೇರಿ ಇತರ ಕಡೆಗಳಿಗೆ ರೈಲ್ವೇ ಸಂಚಾರ ಆರಂಭಿಸಿದರೂ ಒಂದು ರೈಲು ಕೂಡಾ ಮಣಿಪುರಕ್ಕೆ ತೆರಳದೇ ಇರುವುನ್ನು ಟ್ವೀಟ್‌ನಲ್ಲಿ ಪ್ರಶ್ನಿಸಿದರೆ, ಅದನ್ನೇ ಡಿಲೀಟ್‌ ಮಾಡುತ್ತಾರೆ. ಬಿಜೆಪಿ, ಆರ್‌ಎಸ್‌ಎಸ್‌ನಂತಹ ಕಿಡ್ನ್ಯಾಪಿಂಗ್‌ ಟೀಂ ಬೇರೊಂದಿಲ್ಲ. ಭಗತ್‌ ಸಿಂಗ್‌ನನ್ನು ಕಿಡ್ನ್ಯಾಪ್‌ ಮಾಡಿದರು. ಪಟೇಲ್‌ರನ್ನು ಕಿಡ್ನ್ಯಾಪ್‌ ಮಾಡಿ ಮೂರ್ತಿ ಮಾಡಿ ನಿಲ್ಲಿಸಿದ್ದಾರೆ. ಈಗ ಕೋಟಿ ಚೆನ್ನಯರನ್ನು ಕಿಡ್ನಾಪ್‌ ಮಾಡಲು ಟ್ರೈ ಮಾಡಿದ್ದಾರೆ. ಆದರೆ ಅದಕ್ಕೆ ಸರಿಯಾದ ಉತ್ತರವನ್ನು ಸಮಾವೇಶದ ಸಂದರ್ಭ ನೀಡಲಾಗಿದೆ ಎಂದು ಪ್ರಕಾಶ್‌ ರಾಜ್‌ ಹೇಳಿದರು.

ಕಾಂಗ್ರೆಸ್ ಸರ್ಕಾರ ಪಾಕಿಸ್ತಾನ ಪರವಾಗಿದ್ಯಾ?: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ಪೆಟ್ರೋಲ್‌ಗೆ 10 ರು. ಜಾಸ್ತಿ ಮಾಡಿರುವುದು ದೇಶಕ್ಕಾಗಿ ಅಂತ ಅಂಧ ಭಕ್ತರು ಹೇಳುತ್ತಾರೆ. ಆದರೆ ಅದು ಹೋಗುವುದು ನಿನ್ನ ಜೇಬಿ‌ನಿಂದ ತಾನೇ ಎಂದ ಪ್ರಕಾಶ್‌ ರಾಜ್‌, ಚುನಾವಣೆ ಅಂದರೆ ಹೊಸ ನಾಯಕನನ್ನು ಸೃ಼ಷ್ಟಿಸಲೇ ಹೊರತು ದ್ವೇಷ ಸಾಧಿಸಲು ಅಲ್ಲ. ಈ ದೇಶದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದಾರಾ? ಬಡತನ ಕಡಿಮೆ ಆಗಿದೆಯಾ? ಕಪ್ಪು ಹಣ ಕಡಿಮೆ ಆಗಿದೆಯಾ? ಎಂದು ಕೇಳಿಕೊಳ್ಳಬೇಕು. ಈ ದೇಶದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುವುದೇ ಬಹು ಸಂಖ್ಯಾತರ ಜವಾಬ್ದಾರಿ. ಮೆರವಣಿಗೆ ಹೋಗುವಾಗ ಜೊತೆಗೆ ಕರೆದುಕೊಂಡು ಹೋದರೆ ಮಾತ್ರ ಮೆರವಣಿಗೆ ಆಗುವುದು ಎಂದರು.