ಬಹುಭಾಷಾ ನಟ ಪ್ರಕಾಶ್ ರೈ ರಾಜಕೀಯಕ್ಕೆ ಕಾಲಿಡುವುದಾಗಿ ಈಗಾಗಲೇ ತಿಳಿಸಿದ್ದಾರೆ. ಆದ್ರೆ ಯಾವ ಕ್ಷೇತ್ರ ಎಂದು ಹೇಳಿರಲಿಲ್ಲ. ಆದ್ರೆ, ಇದೀಗ ಟ್ವೀಟ್ ಮೂಲಕ ತಮ್ಮ ಕ್ಷೇತ್ರ ಯಾವುದು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ.
ಬೆಂಗಳೂರು, [ಜ.05]: ರಾಜಕೀಯಕ್ಕೆ ಎಂಟ್ರಿಕೊಡುವುದಾಗಿ ಘೋಷಿಸಿದ್ದ ಬಹುಭಾಷಾ ನಟ ಪ್ರಕಾಶ್ ರೈ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು ಪಕ್ಕಾ ಆಗಿದ್ದು, ತಮ್ಮ ಕ್ಷೇತ್ರ ಯಾವುದು ಎನ್ನುದನ್ನು ರಿವಿಲ್ ಮಾಡಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.
ಚುನಾವಣಾ ಸ್ಪರ್ಧೆ : ಈ ಪಕ್ಷದಿಂದ ಪ್ರಕಾಶ್ ರಾಜ್ ಗೆ ಸಿಕ್ತು ಆಫರ್
ಈಗಾಗಲೇ ತಾವು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಟ್ವೀಟ್ ಮಾಡಿದ್ದ ಪ್ರಕಾಶ್ ರೈ, ಕ್ಷೇತ್ರದ ಬಗ್ಗೆ ಮಾತ್ರ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಆದ್ರೆ, ಇದೀಗ ತಾವು ಸ್ಪರ್ಧೆ ಮಾಡುವ ಕ್ಷೇತ್ರವನ್ನು ಬಹಿರಂಗಪಡಿಸಿದ್ದಾರೆ. .
ಇಂದು [ಶನಿವಾರ] ಟ್ವೀಟ್ ಮಾಡಿರುವ ಪ್ರಕಾಶ್ ರೈ, ನನ್ನ ಹೊಸ ಪಯಣಕ್ಕೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ನಾನು ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಪ್ರಕಾಶ್ ರೈ ಸ್ಪರ್ಧೆ!: ಯಾವ ಪಕ್ಷ, ಕ್ಷೇತ್ರದಿಂದ ಸ್ಪರ್ಧಿಸ್ತಾರೆ?
ಬಿಜೆಪಿಯ ವಶದಲ್ಲಿರುವ ಬೆಂಗಳೂರು ಸೆಂಟ್ರಲ್, ಪಿ.ಸಿ. ಮೋಹನ್ ಸಂಸದರಾಗಿದ್ದಾರೆ. ಇನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪಿ.ಸಿ.ಮೋಹನ್ ವಿರುದ್ಧ ಕಣಕ್ಕಿಳಿಯುತ್ತಿದ್ದು, ಭಾರೀ ಕುತೂಹಲ ಮೂಡಿಸಿದೆ.
ಮತ್ತೊಂದು ಪ್ರಮುಖ ಅಂಶ ಅಂದ್ರೆ ಆಮ್ ಆದ್ಮಿ ಪಕ್ಷ ಬೆಂಬಲ ಘೋಷಿಸಿರುವುದು ನಟ ಪ್ರಕಾಶ್ ರಾಜ್ ಗೆ ಬಲ ಬಂದಂತಾಗಿದೆ.
