ಬೆಂಗಳೂರು : ಮುಂದಿನ ಲೊಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಸೆಂಟ್ರಲ್ ಕೇಂದ್ರದಿಂದ ಸ್ಪರ್ಧೆ ಮಾಡಲು ಬಯಸಿರುವ  ನಟ ಪ್ರಕಾಶ್ ರಾಜ್ ಗೆ ಆಮ್ ಆದ್ಮಿ ಪಕ್ಷ ಬೆಂಬಲ ಘೋಷಿಸಿದೆ. 

ಮನೀಷ್ ಸಿಸೋಡಿಯಾ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಾಶರ್ಶ ರಾಜ್ ಕೂಡ ಪಾಲ್ಗೊಂಡಿದ್ದರು. 
ಈ ವೇಳೆ ಮಾತನಾಡಿದ ಪ್ರಕಾಶ್ ರಾಜ್ ನಾನು ಈ ವರೆಗೂ ಮಾಧ್ಯಮಗಳ ಮೂಲಕ ಅನೇಕ ಪ್ರಶ್ನೆಗಳನ್ನು ಕೇಳಿದ್ದೇನೆ. ಇದೀಗ ಸಂಸತ್ತಿನಲ್ಲಿ ಕೇಳುವ ವಿಷಯ ಪ್ರಸ್ತಾಪಿಸುವ ಸಂದರ್ಭ ಎದುರಾಗಿದೆ. 

ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ.  ಈ ವೇಳೆ ಎಎಪಿ ಎಂಬಲ ಸಿಕ್ಕರೆ ಹೆಚ್ಚು ಸಂತೋಷವಾಗುತ್ತದೆ ಎಂದರು. ಈ ವೇಳೆ ಸಿಸೋಡಿಯಾ ಬೆಂಬಲ ನೀಡುವುದಾಗಿ ಹೇಳಿದರು.