ಖಾಸಗಿಯವರಿಗೆ ಸರ್ಕಾರಿ ಜಮೀನಿನ ಪರಿಹಾರ ನೀಡಿದ್ದರೆ ಕ್ರಮ: ಡಿಕೆಶಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ ಜಾಗವನ್ನು ಮೆಟ್ರೋ ಯೋಜನೆಗೆ ನೀಡಿದ ಸಂಬಂಧ 24 ಕೋಟಿ ರು. ಪರಿಹಾರವನ್ನು ಬಿಡಿಎಗೆ ನೀಡುವ ಬದಲು ಕೆಐಎಡಿಬಿಯು ಖಾಸಗಿಯವರಿಗೆ ನೀಡಿರುವ ಬಗ್ಗೆ ದಾಖಲೆ ಸಲ್ಲಿಸಿದರೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಉಪ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ವಿಧಾನಪರಿಷತ್ (ಜು.14): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ ಜಾಗವನ್ನು ಮೆಟ್ರೋ ಯೋಜನೆಗೆ ನೀಡಿದ ಸಂಬಂಧ 24 ಕೋಟಿ ರು. ಪರಿಹಾರವನ್ನು ಬಿಡಿಎಗೆ ನೀಡುವ ಬದಲು ಕೆಐಎಡಿಬಿಯು ಖಾಸಗಿಯವರಿಗೆ ನೀಡಿರುವ ಬಗ್ಗೆ ದಾಖಲೆ ಸಲ್ಲಿಸಿದರೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಉಪ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಜೆಡಿಎಸ್ ಸದಸ್ಯರ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರಿಗಳ ನೀಡುವ ಮಾಹಿತಿ ಪ್ರಕಾರ ಒವರ್‌ಲ್ಯಾಪ್ ಆಗಿ ಹಣ ನೀಡಲಾಗಿದೆ ಹೊರತು, ಖಾಸಗಿಯವರಿಗೆ ಪರಿಹಾರ ನೀಡಿಲ್ಲ, ಆದಾಗ್ಯೂ ತಮ್ಮಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ, ದಾಖಲೆ ಇದ್ದಲ್ಲಿ ತಮಗೆ ಸಲ್ಲಿಸಿದರೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಸರ್ಕಾರದ ಒಂದೇ ಒಂದು ರುಪಾಯಿ ಖಾಸಗಿಯವರಿಗೆ ಹೋಗಲು ಬಿಡುವುದಿಲ್ಲ ಎಂದರು.
ಪೊಲೀಸರ ಸೋಗಿನಲ್ಲಿ ಕಿಡಿಗೇಡಿಗಳಿಂದ ದರೋಡೆ: ಇಬ್ಬರ ಬಂಧನ
ಕಾರ್ಯಪಡೆ ರಚನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆಗೆ ಐವರು ದಕ್ಷ ಅಧಿಕಾರಿಗಳ ಕಾರ್ಯಪಡೆ ರಚಿಸಿದ ಮಾದರಿಯಲ್ಲಿ ಬಿಡಿಎ ಅಕ್ರಮಗಳ ಬಗ್ಗೆ ತನಿಖೆಗೆ ಪ್ರತ್ಯೇಕ ಕಾರ್ಯಪಡೆ ರಚಿಸಬೇಕೆಂಬ ಮರಿತಿಬ್ಬೇಗೌಡ ಅವರ ಮನವಿಗೆ ಪ್ರತಿಕ್ರಿಯಿಸಿದ ಅವರು, ತಾವು ಕಾರ್ಯಪಡೆ ರಚಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೆ. ಈ ಮಧ್ಯೆ ಬೆಂಗಳೂರಿನ ಶಾಸಕರೊಬ್ಬರು ತಮ್ಮ ಕ್ಷೇತ್ರದಲ್ಲಿ ಮಾತ್ರ ಯಾಕೆ ತನಿಖೆ ಇಡೀ ಬೆಂಗಳೂರಿಗೆ ಅನ್ವಯವಾಗುವಂತೆ ತನಿಖೆ ಮಾಡಿ ಎಂದು ಹೇಳಿದ್ದಾರೆ. ಹೀಗಾಗಿ ಬಿಡಿಎ ಬಗ್ಗೆ ಕಾರ್ಯಪಡೆ ರಚಿಸಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಮರಿತಿಬ್ಬೇಗೌಡ ಅವರು ಬೆಂಗಳೂರು ಉತ್ತರ ತಾಲ್ಲೂಕು ಕಸಬಾ ಹೋಬಳಿ ನಾಗವಾರ ಗ್ರಾಮದ ಸರ್ವೆ ನಂಬರ್ 135/1ರಲ್ಲಿ 20 ಗುಂಟೆ ಜಮೀನು ಬಿಡಿಎಗೆ ಸೇರಿದ್ದು, ಅದನ್ನು ಕೆ ಐಎಡಿಬಿ ಸ್ವಾಧೀನಪಡಿಸಿಕೊಂಡು ಮೆಟ್ರೋ ಯೋಜನೆಗೆ ನೀಡಿತ್ತು. ಆದರೆ ಬಿಡಿಎಗೆ 24 ಕೋಟಿ ರು. ಪರಿಹಾರ ನೀಡುವ ಬದಲು ಖಾಸಗಿಯವರಿಗೆ ನೀಡಲಾಗಿದೆ. ಇದರಲ್ಲಿ ಬಿಡಿಎ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಆ್ಯಂಬುಲೆನ್ಸ್ನಲ್ಲೇ ಹೆರಿಗೆ: ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ಬೊಮ್ಮನಹಳ್ಳಿ ರಿಪಬ್ಲಿಕ್: ಬೆಂಗಳೂರಿನಲ್ಲಿ ‘ಬೊಮ್ಮನಹಳ್ಳಿ ರಿಪಬ್ಲಿಕ್’ ಬಿಡಿಎ ಆಸ್ತಿಯನ್ನು ಖಾಸಗಿಯವರೇ ವಶಪಡಿಸಿಕೊಂಡಿದ್ದಾರೆ. ನಿವೇಶನ ಹಂಚಿಕೆ ಆದವರಿಗೂ ಹೋಗಲು ಬಿಡದೇ ಬೇಲಿ ಹಾಕಿದ್ದಾರೆ. ಸುಮಾರು 3000 ಕೋಟಿ ಈ ಆಸ್ತಿಯ ಬೆಲೆಯಾಗಿದೆ. ಹಾಗಾಗಿ ಬಗ್ಗೆ ಕ್ರಮ ಕೈಗೊಳ್ಳುವಂತೆ ಮರಿತಿಬ್ಬೇಗೌಡ ಆಗ್ರಹಿಸಿದರು. ಇದಕ್ಕೆ ಸಚಿವ ಡಿ.ಕೆ. ಶಿವಕುಮಾರ್ ಈ ಬಗ್ಗೆ ದಾಖಲೆ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.