ಅಣ್ಣಾಮಲೈಯಂತೆ ಆಪ್ ನಾಯಕನಿಂದಲೂ ಚಾಟಿ ಏಟು: ಸ್ವತಃ ಹೊಡೆದುಕೊಂಡು ನ್ಯಾಯಕ್ಕೆ ಆಗ್ರಹ
ಗುಜರಾತ್‌ನಲ್ಲಿ ಜನರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಆಪ್ ನಾಯಕ ಗೋಪಾಲ್ ಇಟಾಲಿಯಾ ಸಾರ್ವಜನಿಕ ಸಭೆಯಲ್ಲಿ ಚಾಟಿಯಲ್ಲಿ ಹೊಡೆದುಕೊಂಡಿದ್ದಾರೆ. ತಮಿಳ್ನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಅನುಕರಿಸಿ, ಪಾಟಿದಾರ್ ಮಹಿಳೆಯ ಮೇಲಿನ ಬಿಜೆಪಿ ನಾಯಕರ ಮಾನಹಾನಿ ಘಟನೆಯನ್ನು ಉಲ್ಲೇಖಿಸಿ ಕ್ಷಮೆ ಕೇಳುತ್ತಾ ಈ ರೀತಿ ಮಾಡಿದ್ದಾರೆ.
ಸೂರತ್: ‘ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌ನಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ’ ಎಂದು ಆಪ್ ನಾಯಕ ಗೋಪಾಲ್ ಇಟಾಲಿಯಾ ಸಾರ್ವಜನಿಕ ಸಭೆಯೊಂದರಲ್ಲೇ ಚಾಟಿಯಲ್ಲಿ ಹೊಡೆದುಕೊಂಡ ಘಟನೆ ನಡೆದಿದೆ. ಈ ಮೂಲಕ ತಮಿಳ್ನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಚಾಟಿಯೇಟನ್ನು ಅವರು ಅನುಕರಿಸಿದ್ದಾರೆ.ಅಮ್ರೇಲಿಯಲ್ಲಿ ಪಾಟಿದಾರ್ ಮಹಿಳೆಯ ಮೇಲೆ ಬಿಜೆಪಿ ನಾಯಕರೊಬ್ಬರ ಮಾನಹಾನಿ ಘಟನೆಯನ್ನು ಉಲ್ಲೇಖಿಸಿ ವೇದಿಕೆಯ ಕಾರ್ಯಕ್ರಮವೊಂದರಲ್ಲಿ ಜನರಲ್ಲಿ ಕ್ಷಮೆ ಕೇಳಿದ ಎಎಪಿ ರಾಷ್ಟ್ರೀಯ ಕಾರ್ಯದರ್ಶಿ ತನ್ನ ಪ್ಯಾಂಟಿನ ಬೆಲ್ಟ್ ತೆಗೆದುಕೊಂಡು ಹೊಡೆದುಕೊಂಡಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ‘ತಾನು ಸಂತ್ರಸ್ತರಿಗಾಗಿ ಕಾನೂನು, ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳನ್ನು ನಡೆಸುತ್ತಿದ್ದೇನೆ. ಆದರೆ ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳು ಮತ್ತು ನಾಯಕರ ಭ್ರಷ್ಟ ನಂಟಿನಿಂದ ಜನರಿಗೆ ನ್ಯಾಯ ಪಡೆಯುವುದು ಕಷ್ಟವಾಗಿದೆ. ಗುಜರಾತಿನಲ್ಲಿ ಹಲವು ದುರಂತ, ಅಕ್ರಮಗಳು ನಡೆದಿವೆ. ಆದರೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಾಗಿಲ್ಲ’ ಎಂದು ಹೇಳಿ ಚಾಟಿ ಬೀಸಿಕೊಂಡರು. ಈ ವೇಳೆ ವೇದಿಕೆ ಮೇಲಿದ್ದ ಆಪ್ ನಾಯಕರು ತಡೆಯಲು ಯತ್ನಿಸಿದರು.
ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿ ಕೀಳು ಹೇಳಿಕೆ : ದೆಹಲಿ ಮುಖ್ಯಮಂತ್ರಿ ಆತಿಶಿ ಕಣ್ಣೀರು
ನವದೆಹಲಿ: ‘ಆತಿಶಿ ಉಪನಾಮ ಮೊದಲು ಮಲ್ರೇನಾ ಎಂದಿತ್ತು. ಈಗ ಸಿಂಗ್ ಎಂದು ಬದಲಿಸಿದ್ದಾರೆ. ಆತಿಶಿ ತಂದೆಯನ್ನೂ ಬದಲಿಸಿಕೊಳ್ಳುವ ಮೂಲಕ ನೈಜ ಚಾರಿತ್ರ್ಯ ಪ್ರದರ್ಶಿಸಿದ್ದಾರೆ’ ಎಂದು ತಮ್ಮ ವಿರುದ್ಧ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿ ಕೀಳು ಹೇಳಿಕೆ ನೀಡಿದ್ದಕ್ಕೆ ದೆಹಲಿ ಮುಖ್ಯಮಂತ್ರಿ ಆತಿಶಿ ಕಣ್ಣೀರು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಆತಿಶಿ, ‘ನಮ್ಮ ರಾಜಕಾರಣ ಇಷ್ಟೊಂದು ಕೆಳಗಡೆ ಇಳಿದಿದ್ದು ಹೇಗೆ? 10 ವರ್ಷ ಸಂಸದರಾಗಿದ್ದಾಗ ಕಲ್ಕಾಜಿಗೆ ಬಿಧೂರಿ ಏನು ಮಾಡಿದ್ದಾರೆ ಎಂಬುದನ್ನು ತೋರಿಸಬೇಕು. ಅವರು ನಮ್ಮ ಕೆಲಸದ ಮೂಲಕ ಮತ ಕೇಳಬೇಕೇ ಹೊರತು ನನ್ನ ತಂದೆಯನ್ನು ನಿಂದಿಸುವುದರ ಮೂಲಕ ಅಲ್ಲ’ ಎಂದು ಅತ್ತರು. ಈ ಹಿಂದೆ ಸಂಸರದಾದ್ದ ಬಿಧೂರಿ ಕಲ್ಕಾಜಿ ಕ್ಷೇತ್ರದಿಂದ ಆತಿಶಿ ವಿರುದ್ಧ ಕಣಕ್ಕಿಳಿದಿದ್ದು, ಭಾನುವಾರ ಆತಿಶಿ ಅವರ ಉಪನಾಮದ ವಿರುದ್ಧ ಕೀಳು ಹೇಳಿಕೆ ನೀಡಿದ್ದರು.
₹10 ಲಕ್ಷ ಸೂಟ್ ಧರಿಸುವ ಮೋದಿಗೆ ನನ್ನ ಮನೆ ಬಗ್ಗೆ ಮಾತಾಡುವ ಹಕ್ಕಿಲ್ಲ: ಅರವಿಂದ್ ಕೇಜ್ರಿವಾಲ್
ದಿಲ್ಲಿಯಲ್ಲೂ ಗೃಹಲಕ್ಷ್ಮೀ: ಆಪ್ ಗೆದ್ದರೆ ಮಹಿಳೆಯರಿಗೆ ಮಾಸಿಕ 2100 ರೂಪಾಯಿ ಘೋಷಣೆ!