ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಆಪ್ ಪಕ್ಷವು ಮಹಿಳೆಯರಿಗೆ ಮಾಸಿಕ ₹1,000 ನೀಡುವ ಭರವಸೆ ನೀಡಿದೆ. ಚುನಾವಣೆಯಲ್ಲಿ ಗೆದ್ದರೆ ಈ ಮೊತ್ತವನ್ನು ₹2,100ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ. ನೋಂದಣಿಯಾದ ಕೂಡಲೇ ಹಣವನ್ನು ನೇರವಾಗಿ ಖಾತೆಗಳಿಗೆ ಜಮೆ ಮಾಡಲಾಗುವುದು.
ನವದೆಹಲಿ (ಡಿ.13): ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಆಪ್ ಇದೀಗ ಕರ್ನಾಟಕದ ಗೃಹಲಕ್ಷ್ಮಿ ರೀತಿ ಮಹಿಳೆಯರಿಗೆ ಹೊಸ ಭರವಸೆ ನೀಡಿದೆ. ‘ದೆಹಲಿಯ ಎಲ್ಲಾ ಮಹಿಳೆಯರಿಗೆ ತಕ್ಷಣದಿಂದಲೇ ಮಾಸಿಕ 1,000 ರೂಪಾಯಿ ನೀಡಲಾಗುವುದು. ಚುನಾವಣೆಯಲ್ಲಿ ಆಪ್ ಅಧಿಕಾರಕ್ಕೆ ಬಂದರೆ ಈ ಮೊತ್ತವನ್ನು 2,100ಕ್ಕೆ ಏರಿಸಲಾಗುವುದು’ ಎಂದು ಆಪ್‌ನ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಮಹಿಳಾ ಸಮ್ಮಾನ್ ಯೋಜನೆಗೆ ದೆಹಲಿಯ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರಕಿದೆ. ಇದರಡಿ ಮಹಿಳೆಯರು ಇಂದಿನಿಂದಲೇ ನೋಂದಾಯಿಸಿಕೊಳ್ಳಲು ಪ್ರಾರಂಭಿಸಬಹುದು. ನೊಂದಣಿಯಾದ ಕೂಡಲೇ ಹಣವನ್ನು ನೇರವಾಗಿ ಖಾತೆಗಳಿಗೆ ಜಮೆ ಮಾಡಲಾಗುವುದು’ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದನ್ನು ಸಿಎಂ ಆತಿಶಿ ‘ಕೇಜ್ರಿವಾಲ್‌ರ ಗ್ಯಾರಂಟಿ’ ಎಂದು ಕರೆದಿದ್ದಾರೆ.
ಆಪ್ ಈ ಘೋಷಣೆಯ ಬೆನ್ನಲ್ಲೇ, ‘ಚುನಾವಣೆ ಸಮೀಪಿಸುತ್ತಿರುವುದರಿಂದ ಭರವಸೆಯೆಂಬ ಲಾಲಿಪಾಪ್ ತೋರಿಸಿ ಮತ ಸೆಳೆಯುವ ತಂತ್ರ’ ಎಂದು ಬಿಜೆಪಿ ಹಂಗಿಸಿದೆ. ಜನವರಿ 13 ರ ನಂತರ ಮಾದರಿ ನೀತಿ ಸಂಹಿತೆ ಜಾರಿಗೆ ಬಂದರೆ, ಮೊದಲ ಕಂತನ್ನು ಚುನಾವಣೆಗೆ ಮುನ್ನ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಹೇಳಿದ್ದಾರೆ.
ಆಪ್ ಪ್ರಧಾನ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರು ಮತ್ತು ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದಾಗ ಕೇಜ್ರಿವಾಲ್ ಅವರು ಈ ಯೋಜನೆಯನ್ನು ಪ್ರಕಟಿಸಿದರು. ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಗೆ 2024-25 ರ ಬಜೆಟ್‌ನಲ್ಲಿ ಆಗಿನ ಹಣಕಾಸು ಮಂತ್ರಿ ಮತ್ತು ಈಗಿನ ಮುಖ್ಯಮಂತ್ರಿ ಅತಿಶಿ ಘೋಷಿಸಿದ ನೋಂದಣಿ ಶುಕ್ರವಾರದಿಂದ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.
ಈ ಯೋಜನೆಯು ಮೂಲತಃ ದೆಹಲಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಅರ್ಹ ಮಹಿಳೆಯರಿಗೆ ತಿಂಗಳಿಗೆ ₹ 1,000 ನೀಡಲು ಪ್ರಸ್ತಾಪಿಸಿದೆ. "ಯೋಜನೆಯ ನೋಂದಣಿ ಶುಕ್ರವಾರ ಪ್ರಾರಂಭವಾಗುತ್ತದೆ. ಇದು ₹ 2,100 ಆಗಿರುತ್ತದೆ" ಎಂದು ಸಭೆಯಲ್ಲಿ ಕೇಜ್ರಿವಾಲ್ ಹೇಳಿದ್ದಾರೆ.
'ಅಮೆರಿಕದ 4692 ಕೋಟಿ ಬೇಡ..' ಸ್ವಂತ ಹಣದಲ್ಲೇ Colombo Port Project ಮುಗಿಸುವ ನಿರ್ಧಾರಕ್ಕೆ ಬಂದ ಅದಾನಿ!
"ಈ ಯೋಜನೆಯು ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಅವರ ಆರ್ಥಿಕ ಅಗತ್ಯಗಳನ್ನು ಪರಿಹರಿಸಲು ಆಗಿದೆ. ಬಿಜೆಪಿ ಇದನ್ನು ಉಚಿತ 'ರೇವ್ಡಿಸ್' ಎಂದು ಕರೆಯುತ್ತದೆ, ಆದರೆ ಇದು ನಮ್ಮ ಸಮಾಜವನ್ನು ಬಲಪಡಿಸುವ ಒಂದು ಹೆಜ್ಜೆ ಎಂದು ನಾನು ನೋಡುತ್ತೇನೆ. ಹಣ ಎಲ್ಲಿಂದ ಬರುತ್ತದೆ ಎಂದು ಬಿಜೆಪಿ ಕೇಳುತ್ತದೆ, ಆದರೆ ನಾವು ನೀಡುತ್ತೇವೆ ಎಂದು ನಾನು ಹೇಳಿದೆ. ಉಚಿತ ವಿದ್ಯುತ್ ನೀಡಲು ಆಗೋದಿಲ್ಲ ಎಂದು ಅವರು ಹೇಳಿದ್ದರು. ಅದನ್ನು ನಾನು ಮಾಡಿದ್ದೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
2025ರಲ್ಲಿ ಷೇರು ಮಾರುಕಟ್ಟೆಗೆ ಬರಲಿದೆ ಪ್ರಖ್ಯಾತ ಕಂಪನಿಗಳ IPO, ಇದರ ಮೌಲ್ಯವೇ 1.5 ಲಕ್ಷ ಕೋಟಿ!
