ಗುಜರಾತ್ ಚುನಾವಣೆಗೆ 12 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಆಮ್ ಆದ್ಮಿ!
ಗುಜರಾತ್ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ ಇತರ ಪಕ್ಷಗಳಿಂದ ಭಿನ್ನ ರಣತಂತ್ರ ಹೆಣೆದಿದೆ. ಇದೀಗ ಚುನಾವಣೆ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ.
ಅಹಮ್ಮದಾಬಾದ್(ಅ.06): ಗುಜರಾತ್ ಚುನವಣಾ ಅಖಾಡ ರಂಗೇರಿದೆ. ಬಿಜೆಪಿ ಭದ್ರಕೋಟೆ ಛಿದ್ರ ಮಾಡಲು ಆಮ್ ಆದ್ಮಿ ಪಾರ್ಟಿ ಶತಾಯಗತಾಯ ಯತ್ನಿಸುತ್ತಿದೆ. ಇದಕ್ಕಾಗಿ ಹಲವು ರಣತಂತ್ರ ರೂಪಿಸಿದೆ. ಗುಜರಾತ್ ಚುನಾವಣೆಗೆ ಇತ್ತೀಚೆಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದ ಆಪ್ ಇದೀಗ ಎರಡನೇ ಹಂತದ ಪಟ್ಟಿ ಪ್ರಕಟಿಸಿದೆ. 12 ಅಭ್ಯರ್ಥಿಗಳ ಪಟ್ಟಿಯಲ್ಲಿ ಹಲವು ಕ್ಷೇತ್ರದ ನಾಯಕರಿಗೆ ಅವಕಾಶ ನೀಡಿದೆ. ಗುಜರಾತ್ ಚುನಾವಣೆಯಲ್ಲಿ 182 ಸ್ಥಾನಕ್ಕೆ ಆಮ್ ಆದ್ಮಿ ಪಾರ್ಟಿ ಸ್ಪರ್ಧಿಸುತ್ತಿದೆ. ಎರಡು ಹಂತದಲ್ಲಿ ಒಟ್ಟು 41 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದೆ. ಮೊದಲ ಹಂತದಲ್ಲಿ ಆಮ್ ಆದ್ಮಿ ಪಾರ್ಟಿ 29 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿತ್ತು. ಇದೀಗ 12 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಇನ್ನುಳಿದ ಸ್ಥಾನಗಳ ಅಭ್ಯರ್ಥಿಗಳ ಪಟ್ಟಿ ಶೀಘ್ರದಲ್ಲೇ ಬಿಡುಗಡೆ ಮಾಡಲು ಆಮ್ ಆದ್ಮಿ ಮುಂದಾಗಿದೆ.
ಸನಂದ್ ಕ್ಷೇತ್ರಕ್ಕೆ ಕೈಗಾರಿಕೋದ್ಯಮಿ ಕುಲದೀಪ್ ವಘೇಲಾ, ವತ್ವಾ ಕ್ಷೇತ್ರಕ್ಕೆ ಗಾರ್ಮೆಂಟ್ಸ್ ಮಾಲೀಕ ಬಿಪಿಲ್ ಪಟೇಲ್, ಅಮ್ರೈವಾಡಿ ಕ್ಷೇತ್ರಕ್ಕೆ ಈ ಹಿಂದೆ ಕಾರ್ಪೋರೇಶನ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಎಪಿ ಕಾರ್ಯಕರ್ತ ಭರತ್ ಪಟೇಲ್ ಸೇರಿದಂತ ಪ್ರಮುಖ 12 ಅಭ್ಯರ್ಥಿಗಳ ಪಟ್ಟಿಯನ್ನು ಗುಜರಾತ್ ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಗೋಪಾಲ್ ಇಟಾಲಿಯಾ ಹೇಳಿದ್ದಾರೆ.
ಆಪ್ ಶಾಸಕ ಅಮಾನತುಲ್ಹಾ ಖಾನ್ ಬಂಧನ, 5 ಕಡೆ ದಾಳಿ ನಡೆಸಿ ಅಕ್ರಮ ಪಿಸ್ತೂಲ್, ನಗದು ವಶ!
ಹಿಮಂತನಗರ್ ಕ್ಷೇತ್ರದಿಂದ ನಿರ್ಮಲಾ ಸಿನ್ಹ ಪರ್ಮಾರ್, ಗಾಂಧಿನಗರ ದಕ್ಷಿಣ ಕ್ಷೇತ್ರಕ್ಕೆ ಉದ್ಯಮಿ ದೌಲತ್ ಪಟೇಲ್, ಕೇಶೋದ್ ಕ್ಷೇತ್ರಕ್ಕೆ ರಾಮ್ಜಿ ಭಾಯಿ ಚುದಾಸನಾ, ಖೇಡಾ ಜಿಲ್ಲೆಯ ಥಸ್ರಾ ಕ್ಷೇತ್ರಕ್ಕೆ ನಟವರ್ ಸಿನ್ಹ ರಾಥೋಡ್ ಹೆಸರನ್ನು ಆಮ್ ಆದ್ಮಿ ಪಾರ್ಟಿ ಅಂತಿಮಗೊಳಿಸಿದೆ.
ಕಲೋಲ್ ಕ್ಷೇತ್ರಕ್ಕೆ ದಿನೇಶ್ ಬರಿಯಾಸ ಗರ್ಬಡಾ ಕ್ಷೇತ್ರಕ್ಕೆ ಶೈಲೇಸ್ ಬರ್ಬೋರ್, ಸೂರತ್‌ನ ಲಿಂಬಾಯತ್ ಕ್ಷೇತ್ರಕ್ಕೆ ಪಂಕಜ್ ತಾಯ್ಡೆ, ಗಾಂದೇವಿ ಕ್ಷೇತ್ರಕ್ಕೆ ಪಂಕಜ್ ಪಟೇಲ್ ಹೆಸರನ್ನು ಆಮ್ ಆದ್ಮಿ ಪಾರ್ಟಿ ಅಂತಿಮಗೊಳಿಸಿದೆ.
ಬಿಜೆಪಿ ನಾಯಕನಿಗೆ ಸಂಕಷ್ಟ ತಂದ ಸೆಲ್ಫಿ, 6 ನಿಮಿಷದಲ್ಲಿನ ಪೋಸ್ಟ್‌ಗೆ 6 ವರ್ಷ ಪಕ್ಷದಿಂದ ಅಮಾನತು!
ಗುಪ್ತಚರ ವರದಿ ಪ್ರಕಾರ ಗುಜರಾತಲ್ಲಿ ಆಪ್ ಅಧಿಕಾರಕ್ಕೆ: ಕೇಜ್ರಿ
ಗುಜರಾತ್ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ನಿತ್ಯ ಪ್ರಚಾರ ಮಾಡುತ್ತಿರುವ ಆಪ್ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ. ‘ಈಗ ಚುನಾವಣೆ ನಡೆದರೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಗುಪ್ತಚರ ದಳ ಮಾಹಿತಿ ನೀಡಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಮೂಲಗಳ ಪ್ರಕಾರ ಗುಪ್ತಚರ ದಳ ವರದಿ ಸಿದ್ಧಪಡಿಸಿದೆ. ಅದರಲ್ಲಿ ಆಪ್ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಲಾಗಿದೆ. ಆದರೆ ಜಯದ ಅಂತರ ತುಂಬಾ ಕಡಿಮೆ ಇರುತ್ತದೆ ಎಂದು ವರದಿಯಲ್ಲಿದೆ. ಹೀಗಾಗಿ ಜನರು ದೊಡ್ಡ ಅಂತರದಿಮದ ಆಪ್ ಗೆಲ್ಲಿಸಿ ಬಹುಮತ ಕೊಡಿಸಬೇಕು’ ಎಂದು ಮನವಿ ಮಾಡಿದರು.
‘ಯಾವಾಗ ಗುಪ್ತಚರ ವರದಿ ಕೈಸೇರಿತೋ ಆಗ ಕಾಂಗ್ರೆಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ. ಆಪ್ ಸೋಲಿಸಲು ಯತ್ನಿಸುತ್ತಿವೆ. ಬಿಜೆಪಿ ಮಾತ್ರ ನಡುಗಿ ಹೋಗಿದೆ’ ಎಂದು ಕೇಜ್ರಿವಾಲ್ ಹೇಳಿದರು.