ಬಿಜೆಪಿ-ಕಾಂಗ್ರೆಸ್ ಕೋಳಿಜಗಳ: ಒಂದೇ ರಸ್ತೆಗೆ ಎರಡೆರಡು ದಿನ ಉದ್ಘಾಟನೆ ಭಾಗ್ಯ!

: ಒಂದು ರಸ್ತೆ, ಒಂದೇ ಅನುದಾನ, ಆದರೆ ಉದ್ಘಾ ಟನೆ ಮಾತ್ರ ಎರಡು ದಿನ! ಹೀಗೊಂದು ವಿಲಕ್ಷಣ ಪ್ರಕರಣ ಕೋಟೆಕಾರು ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಬಿಜೆಪಿ-ಕಾಂಗ್ರೆಸ್‌ ನಡುವಿನ ರಸ್ತೆ ರಾಜಕೀಯಕ್ಕೆ ಸಾಕ್ಷಿಯಾಗಿದೆ.

A road is lucky to be inaugurated twice at Ullala at mangaluru rav

ಉಳ್ಳಾಲ (ಮಾ.3) : ಒಂದು ರಸ್ತೆ, ಒಂದೇ ಅನುದಾನ, ಆದರೆ ಉದ್ಘಾ ಟನೆ ಮಾತ್ರ ಎರಡು ದಿನ! ಹೀಗೊಂದು ವಿಲಕ್ಷಣ ಪ್ರಕರಣ ಕೋಟೆಕಾರು ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಬಿಜೆಪಿ-ಕಾಂಗ್ರೆಸ್‌ ನಡುವಿನ ರಸ್ತೆ ರಾಜಕೀಯಕ್ಕೆ ಸಾಕ್ಷಿಯಾಗಿದೆ.

ಕೋಟೆಕಾರು ಪಟ್ಟಣ(Kotekaru town) ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕುಂಪಲ ಬೈಪಾಸ್‌(Kumpala Bypass)ನಿಂದ ಬಗಂಬಿಲ(Bagambila) ಮೂಲಕ ಯೇನಪೋಯ ಆಸ್ಪತ್ರೆ(Yenepoya Specialty Hospital)ಯನ್ನು ಸಂಪರ್ಕಿಸುವ ರಸ್ತೆ ಬಹುತೇಕ ಕಾಂಕ್ರೀಟ್‌ನಿಂದ ಕೂಡಿದೆ. ಈ ರಸ್ತೆಗೆ ವಿವಿಧ ಹಂತದಲ್ಲಿ ಸರ್ಕಾರದಿಂದ ಅನುದಾನ ಬಂದಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ(Congress-BJP Supports) ಬೆಂಬಲಿಗರ ಪ್ರಯತ್ನವೂ ಇದೆ. ಈ ನಡುವೆ ಕೋಟೆಕಾರ್‌ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಐದನೇ ವಾರ್ಡ್‌ ಬಗಂಬಿಲ ಕೆಎಚ್‌ಬಿ ಕಾಲೋನಿ ಬಳಿ ಒಂದಷ್ಟುರಸ್ತೆ ಕಾಮಗಾರಿ ಬಾಕಿಯಾಗಿತ್ತು.

ಬಣ್ಣ ಹಚ್ಚಿದ ಯು.ಟಿ ಖಾದರ್: 'ಸೆಪ್ಟೆಂಬರ್ 13' ಸಿನಿಮಾದಲ್ಲಿ 'ಶಾಸಕ'ರಾಗಿ ನಟನೆ

ಇಲ್ಲಿನ ರಸ್ತೆ ಗುಂಡಿಗಳಿಂದ ಕೂಡಿ ವಾಹನ ಸಂಚಾರವೂ ಕಷ್ಟಕರವಾಗಿತ್ತು. 15ನೇ ಹಣಕಾಸು ಯೋಜನೆಯಡಿ ಐದು ಲಕ್ಷ ಮತ್ತು ಪಟ್ಟಣ ಪಂಚಾಯಿತಿಯಿಂದ 10 ಲಕ್ಷ ಅನುದಾನದಲ್ಲಿ ಕಾಂಕ್ರೀಟ್‌ ಕಾಮಗಾರಿ ನಡೆಸಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿದೆ. ಇದೇ ವೇಳೆ ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯರಾಗಿರುವ ಪ್ರವೀಣ್‌ ಬಗಂಬಿಲ ಅವರ ಭಾವಚಿತ್ರವುಳ್ಳ ಫ್ಲೆಕ್ಸ್‌ ಜಾಲತಾಣದಲ್ಲಿ ಹರಿದಾಡಿದೆ. ಈ ಫ್ಲೆಕ್ಸ್‌ನಲ್ಲಿ ಪ್ರವೀಣ್‌ ಅವರು ಅನುದಾನ ಬಿಡುಗಡೆಗೊಳಿಸಿದ್ದು ಅವರಿಗೆ ಅಭಿನಂದನೆ ಸಲ್ಲಿಸಲಾಗಿದೆ. ಅಲ್ಲದೆ ಮುಂದಿನ ಗುರುವಾರದಂದು ಉದ್ಘಾಟನೆಗೂ ದಿನ ನಿಗದಿಗೊಳಿಸಲಾಗಿದೆ.

ಬಗಂಬಿಲ ಕಾಂಗ್ರೆಸ್‌ ಕಾರ್ಯಕರ್ತರ ಹೆಸರಿನಲ್ಲೂ ಹಾಕಲಾಗಿರುವ ಫ್ಲೆಕ್ಸ್‌ ಜಾಲತಾಣದಲ್ಲಿ ಹರಿದಾಡಿದೆ. ಇದರಲ್ಲಿ ಶಾಸಕ ಖಾದರ್‌ ಅವರ ಭಾವಚಿತ್ರ ಅಳವಡಿಸಲಾಗಿದ್ದು ಅನುದಾನ ಬಿಡುಗಡೆಗೊಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಲಾಗಿದೆ. ಭಾನುವಾರ ಉದ್ಘಾಟನೆಗೆ ದಿನ ನಿಗದಿಪಡಿಸಲಾಗಿದೆ. ಒಂದೇ ಕಾಮಗಾರಿ, ಒಂದೇ ಅನುದಾನದಲ್ಲಿ ನಡೆದಿರುವ ರಸ್ತೆ ಕಾಮಗಾರಿ ರಾಜಕೀಯ ಮೇಲಾಟಕ್ಕಾಗಿ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಉಡುಪಿ: ರಾಜ್ಯದಲ್ಲಿ ಮೊದಲ ಬಾರಿಗೆ Dragon Boat Championship!

ಅನುದಾನ ಯಾರದ್ದು?: ಈ ರಸ್ತೆಗೆ 15ನೇ ಹಣಕಾಸು ಮತ್ತು ಪಟ್ಟಣ ಪಂಚಾಯಿತಿ ನಿಧಿಯನ್ನು ಬಳಸಲಾಗಿದೆ. ಇವೆರಡೂ ಸರ್ಕಾರದ ಅನುದಾನವೇ ಆಗಿದೆ. ಆದರೆ ವಿದಾನಸಭಾ ಚುನಾವಣೆ ಸಮೀಪದಲ್ಲೇ ಇರುವುದರಿಂದ ರಾಜಕೀಯವಾಗಿ ಗೊಂದಲ ಸೃಷ್ಟಿಸಿದೆ. ಕೋಟೆಕಾರು ಪಟ್ಟಣ ಪಂಚಾಯಿತಿಗೆ ಇದುವರೆಗೂ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ನಡೆಯದ ಕಾರಣ ಅನುದಾನ ಬಳಕೆಯ ಜವಾಬ್ದಾರಿ ಶಾಸಕರದ್ದಾಗಿದ್ದು, ಅವರ ಸೂಚನೆಯನ್ನು ಅಧಿಕಾರಿಗಳು ಪಾಲಿಸಬೇಕಾಗಿದೆ. ರಸ್ತೆ ಕೆಲಸಕ್ಕೂ ಶಾಸಕರ ಸೂಚನೆ ಮೇರೆಗೆ ಅನುದಾನ ಬಳಸಲಾಗಿದೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios