Asianet Suvarna News Asianet Suvarna News

ಬಿಜೆಪಿ ಸರ್ಕಾರದಿಂದ ಸಾಕಷ್ಟುಅಭಿ​ವೃದ್ಧಿ ಕೆಲ​ಸ : ಸಿ.ಸಿ.ಪಾಟೀಲ್

ನಮ್ಮನ್ನು ತೆಗಳುವವರಿಗೆ, ನಾವು ಮಾಡಿರುವ ರಸ್ತೆಗಳೇ ಅವರಿಗೆ ಉತ್ತರ ನೀಡುತ್ತವೆ. ನಮ್ಮ ಪ್ರಧಾನ ಮಂತ್ರಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಸಾಕಷ್ಟುಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು.

A lot of development work by BJP government says ccpatil rav
Author
First Published Dec 25, 2022, 1:13 PM IST

ಹೊಳೆಆಲೂರ (ಡಿ.25) : ನಮ್ಮನ್ನು ತೆಗಳುವವರಿಗೆ, ನಾವು ಮಾಡಿರುವ ರಸ್ತೆಗಳೇ ಅವರಿಗೆ ಉತ್ತರ ನೀಡುತ್ತವೆ. ನಮ್ಮ ಪ್ರಧಾನ ಮಂತ್ರಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಸಾಕಷ್ಟುಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು. ಬಿಜೆಪಿ ಹೊಳೆಆಲೂರ ಮಂಡಲದ ವತಿಯಿಂದ ಜೋಡೆತ್ತು ಹೊಂದಿದ ರೈತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸರಕಾರದಿಂದ ಸಾಕಷ್ಟುಅಭಿವೃದ್ಧಿ ಪರ ಕೆಲಸಗಳು ಜರುಗಿದ್ದು, ಮನೆಯ ಮಹಿಳೆಯರು, ಅನ್ನದಾತರ ಹಿತ ಕಾಪಾಡಲು, ರೈತರ ಮಕ್ಕಳಿಗೆ ಅನುಕೂಲವಾಗುವಂತೆ ಕೆಲಸಗಳನ್ನು ಮಾಡಿದೆ. ಹೊಳೆಆಲೂರ ಮಂಡಲದಿಂದ ರಾಜ್ಯದಲ್ಲಿಯೆ ಯಾರೂ ಮಾಡದ, ದೇಶದ ಬೆನ್ನೆಲುಬು ಅಂದೆ ಕರೆಯಿಸಿಕೊಳ್ಳುವ ರೈತರನ್ನು ಸನ್ಮಾನ ಮಾಡಲಾಗುತ್ತಿದೆ. ಹೀಗೆ ತಂತ್ರಜ್ಞಾನ ಕಾಲದಲ್ಲಿ ಜೋಡೆತ್ತು ಹೊಂದಿದ ರೈತರಿಗೆ ಸನ್ಮಾನ ಕಾರ್ಯ ಶ್ಲಾಘನೀಯ ಎಂದರು.

ರಾಜ್ಯಕ್ಕೆ ಟಿಪ್ಪು ಸುಲ್ತಾನ್‌ ಕೊಡುಗೆ ಏನು? ಸಚಿವ ಸಿ.ಸಿ.ಪಾಟೀಲ್

ಈ ಸಂದರ್ಭದಲ್ಲಿ ಅಲಮೆಲದ ಚಂದ್ರಶೇಖರ ಸ್ವಾಮಿಗಳು, ಯಚ್ಚರೇಶ್ವರ ಮಠದ ಯಚ್ಚರೇಶ್ವರ ಸ್ವಾಮಿಗಳು, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ಮೆಣಸಗಿಯ ಎ.ಪಿ. ಕುಲಕರ್ಣಿ, ಜಿ.ಪಿ. ಪಾಟೀಲ, ಮಂಡಲ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಶಶಿಧರ ಪಾಟೀಲ ಹಾಗೂ ಬಿಜೆಪಿ ಪಕ್ಷದ ಜಿಲ್ಲಾ, ತಾಲೂಕು ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಮುಂತಾದವರು ಇದ್ದರು.

Follow Us:
Download App:
  • android
  • ios