Asianet Suvarna News Asianet Suvarna News

ನನಗೆ ರಾಷ್ಟ್ರಭಕ್ತರ ಬಳಗ ಬೆಂಬಲ ನೀಡಿದೆ: ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್

ನನಗೆ ರಾಷ್ಟ್ರಭಕ್ತರ ಬಳಗ ಬೆಂಬಲ ನೀಡಿದೆ ಮಾತ್ರವಲ್ಲ, ನಾನೂ ರಾಷ್ಟ್ರಭಕ್ತರ ಬಳಗವೇ ಆಗಿದ್ದೇನೆ. ನಾನು ಗೆಲ್ಲುವುದು ಶತಸಿದ್ಧವಾಗಿದ್ದು, ನನ್ನ ಗೆಲುವಿನ ಮೂಲಕ ವ್ಯವಸ್ಥೆಗೆ ಸರಿಯಾದ ಉತ್ತರ ನೀಡಬೇಕಿದೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಹೇಳಿದರು. 

A group of patriots have supported me Says Raghupati Bhat gvd
Author
First Published May 30, 2024, 6:49 PM IST

ಶಿವಮೊಗ್ಗ (ಮೇ.30): ನನಗೆ ರಾಷ್ಟ್ರಭಕ್ತರ ಬಳಗ ಬೆಂಬಲ ನೀಡಿದೆ ಮಾತ್ರವಲ್ಲ, ನಾನೂ ರಾಷ್ಟ್ರಭಕ್ತರ ಬಳಗವೇ ಆಗಿದ್ದೇನೆ. ನಾನು ಗೆಲ್ಲುವುದು ಶತಸಿದ್ಧವಾಗಿದ್ದು, ನನ್ನ ಗೆಲುವಿನ ಮೂಲಕ ವ್ಯವಸ್ಥೆಗೆ ಸರಿಯಾದ ಉತ್ತರ ನೀಡಬೇಕಿದೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಾನು ಮಂಗಳೂರು, ಉಡುಪಿ ಮತದಾರರು ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಧೈರ್ಯದಿಂದ ಸ್ಪರ್ಧಿಸಿದೆ. ಆದರೆ ಆ ಬಳಿಕ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಪ್ರವಾಸ ಮಾಡಿದಾಗ ಅಲ್ಲಿನ ಮತದಾರರು ನೀಡಿದ ಅದ್ಭುತ ಬೆಂಬಲ, ತೋರಿಸಿದ ಪ್ರೀತಿ, ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗದ ಬೆಂಬಲ ಕಂಡು ಮೂಕ ವಿಸ್ಮಿತನಾಗಿದ್ದೇನೆ. 

ಜಾತಿ, ಜನಾಂಗ ಎಂಬ ಬೇಧವಿಲ್ಲದೆ, ಬಿಜೆಪಿ ಬಹುತೇಕ ಕಾರ್ಯಕರ್ತರು, ಸಂಘ ಪರಿವಾರದ ಬೆಂಬಲ ನನಗೆ ಸಿಕ್ಕಿದೆ ಎಂದು ಹೇಳಿದರು. ಮಲೆನಾಡಿನ ಪ್ರೀತಿ ಕಂಡು ಹೃದಯ ತುಂಬಿ ಬಂದಿದೆ. ಇಲ್ಲಿನ ರಾಜಕೀಯ, ಸಮಸ್ಯೆಯ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ. ಆದರೆ ಇಲ್ಲಿ ಓಡಾಡಿದ ಬಳಿಕ ಎಲ್ಲವೂ ಅರಿವಿಗೆ ಬಂದಿತು. ನಾನು ಗೆದ್ದ ಬಳಿಕ ಸದನದಲ್ಲಿ ಪದವೀಧರರ ಸಮಸ್ಯೆಯ ಜೊತೆಗೆ ಬಿಜೆಪಿ ಕಾರ್ಯಕರ್ತರು ಮತ್ತು ಮಲೆನಾಡಿನ ಸಮಸ್ಯೆಯ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಹಿಂದೆ ಡಿಕೆಶಿ ಮಾಸ್ಟರ್‌ಮೈಂಡ್: ಸಿ.ಪಿ.ಯೋಗೇಶ್ವರ್

‘ನಮ್ಮ ಬ್ರದರ್ಸ್’ ಸರ್ಕಾರದ ನಡೆಯಿಂದ ಘಟನೆ: ಚನ್ನಗಿರಿ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ನಾನು ಚನ್ನಗಿರಿಗೆ ಹೋದಾಗ ಪೊಲೀಸ್ ಠಾಣೆಗೆ ಹೋಗಿದ್ದೆ. ಠಾಣೆಯ ಎಲ್ಲ ಗಾಜುಗಳನ್ನು ಒಡೆದು ಹಾಕಿದ್ದು, ಧ್ವಜಸ್ತಂಭದ ಕಟ್ಟೆ, ಚೈನ್ ಅನ್ನು ಕೂಡ ಒಡೆದು ಹಾಕಲಾಗಿದೆ. ಸಮಾಜವನ್ನು ರಕ್ಷಿಸುವ ಪೊಲೀಸರ ಮೇಲೆ ನಡೆದ ಹಲ್ಲೆ ಕಂಡು ಆಘಾತಕ್ಕೆ ಈಡಾಗಿದ್ದೇನೆ. ಇದೊಂದು ಖಂಡನೀಯ ಘಟನೆಯಾಗಿದ್ದು, ಭಾಗಿಯಾಗಿದ್ದ ಎಲ್ಲರನ್ನೂ ಬಂಧಿಸಬೇಕೆಂದು ಆಗ್ರಹಪಡಿಸಿದರು. ರಾಜ್ಯದಲ್ಲಿ ‘ನಮ್ಮ ಬ್ರದರ್ಸ್’ ಸರ್ಕಾರ ಇದೆ ಎಂಬ ಭಾವನೆಯಿಂದಲೇ ಇಂತಹ ಪುಂಡಾಟ ನಡೆಯುತ್ತಿದೆ. ಘಟನೆಯನ್ನು ಕಂಡಾಗ ನಮ್ಮ ರಾಜ್ಯ ಎಲ್ಲಿಗೆ ಹೋಗುತ್ತಿದೆ ಎಂಬ ಆತಂಕ ಎದುರಾಗುತ್ತಿದೆ ಎಂದರು.

ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹ: ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯವಸ್ಥಾಪಕ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಸರ ತರಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಈ ಹಿಂದೆ ತಮ್ಮ ಮೇಲೆ ಆರೋಪ ಬಂದಾಗ ಕೆ. ಎಸ್. ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮೇಲ್ಪಂಕ್ತಿ ಹಾಕಿದ್ದರು. ಆಗ ಸಿದ್ದರಾಮಯ್ಯನವರು ಈಶ್ವರಪ್ಪನ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಈಗ ನಾಗೇಂದ್ರ ರಾಜೀನಾಮೆ ಪಡೆಯಬೇಕಲ್ಲವೇ ಎಂದು ಪ್ರಶ್ನಿಸಿದರು. ಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ನಗರಸಭೆಯ ಮಾಜಿ ಅಧ್ಯಕ್ಷ ಎಂ. ಶಂಕರ್, ವಕೀಲ ವಾಗೀಶ್, ಅ. ಮ. ಪ್ರಕಾಶ್, ನಾರಾಯಣರಾವ್, ಬಾಲು, ಮುರುಗೇಶ್, ಮಾಜಿ ಪಾಲಿಕೆ ಮೇಯರ್ ಸುವರ್ಣ ಶಂಕರ್ ಮತ್ತಿತರರಿದ್ದರು.

ಎಕ್ಸ್‌ಪ್ರೆಸ್‌ ಕೆನಾಲ್‌ ಕಾಮಗಾರಿ ವಿರೋಧಿಸುವ ಶಕ್ತಿ ಡಿಕೆಶಿಗಿದೆ: ಮಾಜಿ ಶಾಸಕ ಎ.ಮಂಜುನಾಥ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಲಿಲ್ಲ. ಆಗ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿದರೂ ಬಳಿಕ ನೀಡಲಿಲ್ಲ. ಏಕೆ ಎಂದು ಕಾರಣವನ್ನೂ ನೀಡಲಿಲ್ಲ. ಪಕ್ಷದಿಂದ ಉಚ್ಚಾಟಿಸುವ ಸಂಬಂಧ ನೀಡಿದ ನೋಟಿಸ್ ನನಗೆ ಸಿಕ್ಕಿರಲಿಲ್ಲ. ಇದಕ್ಕೆ ಉತ್ತರಿಸುವ ಮುನ್ನವೇ ನನ್ನನ್ನು ಉಚ್ಚಾಟಿಸಿದರು. ನನಗೆ ಅವಕಾಶ ನೀಡಿದ್ದರೆ ನನ್ನ ಸ್ಪರ್ಧೆಗೆ ಸಮರ್ಪಕ ಕಾರಣ ನೀಡುತ್ತಿದ್ದೆ. 
-ರಘುಪತಿ ಭಟ್, ಬಿಜೆಪಿ ಬಂಡಾಯ ಅಭ್ಯರ್ಥಿ

Latest Videos
Follow Us:
Download App:
  • android
  • ios