ಅಭಿಮಾನಿಯ ಎದೆ, ಬೆನ್ನು ತಲೆ ಮೇಲೆ ಖರ್ಗೆ, ಪ್ರಿಯಾಂಕ್ ಖರ್ಗೆ ಟ್ಯಾಟೂ!
ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ ಅಭಿಮಾನಿಯೊಬ್ಬರು ತಮ್ಮ ಎದೆ, ಬೆನ್ನು, ತಲೆ ಮೇಲೆ ಈ ಇಬ್ಬರು ನಾಯಕರ ಭಾವಚಿತ್ರಗಳ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ.
ಕಲಬುರಗಿ (ಏ.13): ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ ಅಭಿಮಾನಿಯೊಬ್ಬರು ತಮ್ಮ ಎದೆ, ಬೆನ್ನು, ತಲೆ ಮೇಲೆ ಈ ಇಬ್ಬರು ನಾಯಕರ ಭಾವಚಿತ್ರಗಳ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಿಲಕೇರಿ ಗ್ರಾಮದ ಹಣಮಂತ ಹೊಸ್ಮನಿ ಎಂಬುವರೇ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದ ಅಭಿಮಾನಿ.
'ಖರ್ಗೆ ಸಾಹೇಬ್ರು ತಪ್ಪು ತಿಳ್ಕೊಬಾರದು' ಅಂತಾ ಹೇಳಿ ಭಾರತ್ ಮಾತಾಕೀ ಜೈ ಎಂದ ಸವದಿ!
ಇವರು ಎದೆಯ ಮೇಲೆ ಡಾ. ಖರ್ಗೆ, ಪ್ರಿಯಾಂಕ್ ಭಾವಚಿತ್ರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಲೆಯ ಮೇಲೆ ಪಿಕೆ ಬಾಸ್ ಎಂದು ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಬೆನ್ನ ಮೇಲೆಲ್ಲಾ ಡಾ.ಮಲ್ಲಿಕಾರ್ಜುನ ಖರ್ಗೆಯವರು ರಾಜಕೀಯವಾಗಿ 5 ದಶಕಗಳ ಕಾಲ ನಡೆದು ಬಂದ ದಾರಿಯ ಮಾಹಿತಿಯನ್ನು ಟ್ಯಾಟೂ ಮೂಲಕ ಬರೆದುಕೊಂಡಿದ್ದಾರೆ.
ಹಣಮಂತ ಹೊಸ್ಮನಿಯವರ ಅಭಿಮಾನಕ್ಕೆ ಮನಸೋತ ಪ್ರಿಯಾಂಕ್ ಖರ್ಗೆಯವರು ಇವರನ್ನು ಕಾಂಗ್ರೆಸ್ ಸಮಾವೇಶದಲ್ಲಿ ಆಹ್ವಾನಿಸಿ ಅವರಿಗೆ ಡಾ. ಖರ್ಗೆಯವರಿಂದ ಸತ್ಕಾರ ಮಾಡಿಸಿದ್ದಾರೆ.
ನಾನು ಇನ್ನೂ ಸತ್ತಿಲ್ಲ, ಬದುಕಿದ್ದೇನೆ: ಮಲ್ಲಿಕಾರ್ಜುನ ಖರ್ಗೆ ಎಮೋಷನಲ್ ಭಾಷಣ
ಖರ್ಗೆಗೆ ಅನಾರೋಗ್ಯ; ದೆಹಲಿಗೆ ವಾಪಸ್
ಬಸವಕಲ್ಯಾಣ: ಕಲಬುರಗಿಯಲ್ಲಿ ಅಳಿಯ ರಾಧಾಕೃಷ್ಣ ನಾಮಪತ್ರ ಸಲ್ಲಿಕೆ ಸಂದರ್ಭ ಉಪಸ್ಥಿತರಿದ್ದು ಬಿಸಿಲಿನ ಬೇಗೆಗೆ ಬಹಳಷ್ಟು ಬಳಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬಸವಕಲ್ಯಾಣದ ಸಾಗರ ಖಂಡ್ರೆ ಪ್ರಚಾರ ಸಮಾವೇಶಕ್ಕೆ ಗೈರಾದರು. ಶುಕ್ರವಾರ ಬಸವಕಲ್ಯಾಣದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಬೇಕಿದ್ದ ಖರ್ಗೆ ಅವರು ನಿರ್ಜಲೀಕರಣ ಸಮಸ್ಯೆ ಹಿನ್ನೆಲೆ ವೈದ್ಯರ ಬಳಿ ತಪಾಸಣೆಗೆ ತೆರಳಿ, ನಂತರ ಬಸವಕಲ್ಯಾಣ ಪ್ರವಾಸ ರದ್ದುಗೊಳಿಸಿ ನೇರವಾಗಿ ದೆಹಲಿಗೆ ತೆರಳಿದರು.