ತಮ್ಮ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿರುವ ಪತ್ರಗಳನ್ನು ಮಂಡಲ ಅಧ್ಯಕ್ಷ ಶೈಲೇಶ ಗುಣಾರಿ ಅವರಿಗೆ ಸಲ್ಲಿಸಿದ 8 ಜನ ಪಕ್ಷದ ಮುಖಂಡರು 

ಚವಡಾಪುರ(ಫೆ.03): ಅಫಜಲ್ಪುರ ಮತಕ್ಷೇತ್ರದ ಫರಹತಾಬಾದ ವಲಯದ ಶಕ್ತಿ ಕೇಂದ್ರದ ಪ್ರಮುಖರು, ಮಂಡಲ ಉಪಾಧ್ಯಕ್ಷರು, ಎಸ್‌ಟಿ ಘಟಕದ ಅಧ್ಯಕ್ಷರು ಸೇರಿದಂತೆ ಒಟ್ಟು 8 ಜನ ಮುಖಂಡರು ಬಿಜೆಪಿ ಪಕ್ಷದ ವಿವಿಧ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ರಾಜಿನಾಮೆ ನೀಡಿದವರಲ್ಲಿ ಅಬ್ದುಲ್‌ ಲತೀಫ್‌ ಜಾಗಿರದಾರ ಮಾಜಿ ತಾಪಂ ಸದಸ್ಯ, ಹಾಲಿ ಗ್ರಾಪಂ ಉಪಾಧ್ಯಕ್ಷ ಹಾಗೂ ಶಕ್ತಿ ಕೇಂದ್ರದ ಪ್ರಮುಖರಾಗಿದ್ದಾರೆ. ಮಲ್ಲಿಕಾರ್ಜುನ ಗುಡುಬಾ ಕೋಲಿ ಸಮಾಜದ ಮುಖಂಡರು ಬಿಜೆಪಿ ಮಂಡಲ ಉಪಾದ್ಯಕ್ಷರಾಗಿದ್ದಾರೆ. ರಾಜಶೇಖರ ನೆಲೋಗಿ ಗ್ರಾಪಂ ಸದಸ್ಯರು ಹಾಗೂ ಫರಹತಾಬಾದ್‌ ಶಕ್ತಿ ಕೇಂದ್ರದ ಪ್ರಮುಖರಾಗಿದ್ದಾರೆ. ಭೀಮರಾಯ ಪಾಟೀಲ್‌ ಮಿಣಜಗಿ ಶಕ್ತಿ ಕೇಂದ್ರದ ಪ್ರಮುಖರಾಗಿದ್ದಾರೆ.

ಕೇಂದ್ರ ಬಿಜೆಟ್‌ನಲ್ಲಿ ಕನ್ನಡಿಗರಿಗೆ ಮೋಸ: ಪ್ರಿಯಾಂಕ್‌ ಖರ್ಗೆ

ಸೋಮಲಿಂಗಯ್ಯ ಹಿರೇಮಠ ಪರಹತಾಬಾದ್‌ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶರಣಬಸಪ್ಪ ಸುಬೇದಾರ ತಾಲೂಕು ಎಸ್‌ಟಿ ಮೋರ್ಚಾದ ಅಧ್ಯಕ್ಷರಾಗಿದ್ದಾರೆ. ಡಾ. ಕೇಶವ ಕಾಬಾ ಮಾಜಿ ಕೆಡಿಪಿ ಸದಸ್ಯರು, ಶಕ್ತಿ ಕೇಂದ್ರದ ಪ್ರಮುಖರಾಗಿದ್ದಾರೆ. ಧನರಾಜ ಧರಣಿ ಸರಡಗಿ(ಬಿ) ಶಕ್ತಿ ಕೇಂದ್ರದ ಪ್ರಮುಖರಾಗಿದ್ದಾರೆ.

ಒಟ್ಟು 8 ಜನ ಪಕ್ಷದ ಮುಖಂಡರು ತಮ್ಮ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿರುವ ಪತ್ರಗಳನ್ನು ಮಂಡಲ ಅಧ್ಯಕ್ಷ ಶೈಲೇಶ ಗುಣಾರಿ ಅವರಿಗೆ ಸಲ್ಲಿಸಿದ್ದಾರೆ. ಅಲ್ಲದೆ ತಾವು ಕೇವಲ ಪಕ್ಷದ ಹುದ್ದೆಗಳಿಗೆ ಮಾತ್ರ ರಾಜೀನಾಮೆ ನೀಡಿದ್ದು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಅಲ್ಲದೆ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಮಾಜಿ ಜಿಪಂ ಅಧ್ಯಕ್ಷ ನಿತೀನ್‌ ಗುತ್ತೇದಾರ ಅವರೊಂದಗೆ ಯಾವಾಗಲೂ ಬೆಂಬಲವಾಗಿ ನಿಲ್ಲುತ್ತೇವೆಂದು ಪತ್ರದಲ್ಲಿ ತಿಳಿಸಿದ್ದಾರೆ.