ಕಾಂಗ್ರೆಸ್ ಸರ್ಕಾರದಲ್ಲಿ ಶೇ.60ರಷ್ಟು ಕಮಿಷನ್‌, ಹಣ ಲೂಟಿಗೂ ಒಂದು ಇತಿಮಿತಿ ಇಲ್ಲವಾ?: ಎಚ್‌ಡಿಕೆ ಕಿಡಿ

ರಾಜ್ಯದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲಂಚ ಶೇ.60ಕ್ಕೆ ತಲುಪಿದೆ. ಇದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. 

60 Percent commission in Congress government Says HD Kumaraswamy gvd

ಮೈಸೂರು (ಜ.06): ರಾಜ್ಯದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲಂಚ ಶೇ.60ಕ್ಕೆ ತಲುಪಿದೆ. ಇದನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಗಳ ಹಂಚಿಕೆಯಲ್ಲೂ ಲಂಚ ಪಡೆಯಲಾಗುತ್ತಿದೆ‌. ಮೊದಲು ಪಿಡಿಒಗಳು ಲಂಚ ಪಡೆಯುತ್ತಿದ್ದರು, ಈಗ ವಿಧಾನಸೌಧದಲ್ಲಿ ಸಚಿವರೇ ಲಂಚ ಪಡೆಯುತ್ತಿದ್ದಾರೆ ಎಂದು ದೂರಿದರು.

ತಾವು ಸತ್ಯವಂತರು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಸತ್ಯಮೇವ ಜಯತೇ ಎಂಬಂತೆ ನಡೆದುಕೊಳ್ಳುತ್ತಿದ್ದಾರಾ?. ಅವರು ಆತ್ಮಸಾಕ್ಷಿಯಾಗಿ ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳಲಿ. ಹಣ ಲೂಟಿ ಮಾಡುವುದಕ್ಕೂ ಇತಿಮಿತಿ ಎಂಬುದು ಇಲ್ಲವಾ?. ಈಗಿನ ಸರ್ಕಾರದ ಲಂಚಾವತಾರ ನೋಡಿದರೆ ಹಿಂದಿನ ಬಿಜೆಪಿ ಸರ್ಕಾರವೇ ಚೆನ್ನಾಗಿತ್ತು ಎಂದು ಕಾಂಗ್ರೆಸ್ ಪರ ಗುತ್ತಿಗೆದಾರರು ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿ.ಟಿ.ದೇವೇಗೌಡ-ಜೆಡಿಎಸ್‌ದು ಗಂಡ- ಹೆಂಡತಿ ಸಂಬಂಧ: ಎಚ್‌.ಡಿ.ಕುಮಾರಸ್ವಾಮಿ

ನಾಯಕರ ಕನಸು ನನಸಾಗದು: ಪಕ್ಷಕ್ಕೆ ಕಾರ್ಯಕರ್ತರ ಶಕ್ತಿ ಇರುವುದರಿಂದ ಜೆಡಿಎಸ್ಮುಗಿಸಬೇಕು ಎಂಬ ಕನಸು ಹೊತ್ತವರ ಪ್ರಯತ್ನ ನನಸಾಗುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ನಗರದ ಸಾರಾ ಕನ್ವೆನ್ಷನ್ಹಾಲ್ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ಕಾರ್ಯಕರ್ತರ ಶ್ರಮದಿಂದ ಉಳಿದಿದ್ದು, ಫೀನಿಕ್ಸ್ಪಕ್ಷಿಯಂತೆ ಮೇಲೇಳುವ ಶಕ್ತಿ ಇದೆ. ಈಗ ಪಕ್ಷಕ್ಕೆ ಹೆಚ್ಚಿನ ಸದಸ್ಯರನ್ನು ನೋಂದಾಯಿಸುವ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗೋಣ ಎಂದರು.

ಪಕ್ಷ ಸಂಘಟನೆ ಸರಿ ಇದ್ದರೆ ನಾವು ಯಾವುದೇ ಚುನಾವಣೆಯಾದರೂ ಗೆಲ್ಲಬಹುದು. ನಮ್ಮ ಪಕ್ಷ ಬಲವಾಗಿದ್ದರೆ ರೈತರಿಗೆ ಅನುಕೂಲವಾಗುತ್ತದೆ. ಎಲ್ಲಾ ಸಮಾಜವನ್ನು ಒಟ್ಟಿಗೆ ಕರೆದೊಯ್ಯುವ ಶಕ್ತಿ ಪಕ್ಷಕ್ಕಿದೆ. ದೇವೇಗೌಡರ ಪರಿಶ್ರಮ ಮತ್ತು ದೂರದೃಷ್ಟಿಯ ಫಲವಾಗಿ ಜೆಡಿಎಸ್ಇಂದಿಗೂ ಸಶಕ್ತವಾಗಿದೆ. ಅಂಬೇಡ್ಕರ್ಅವರ ಆಶಯದಂತೆ ಎಲ್ಲಾ ಸಮುದಾಯದ ನಾಯಕರನ್ನೂ ಬೆಳೆಸಿದರು. ಅದನ್ನು ಸ್ಮರಿಸುವ ಹೃದಯ ವೈಶಾಲ್ಯತೆ ಅನೇಕರಿಗೆ ಇಲ್ಲ ಎಂದು ಅವರು ಟೀಕಿಸಿದರು. ನಾಯಕ ಸಮುದಾಯಕ್ಕೆ ಮೀಸಲಾತಿ ನೀಡುವಾಗ ದೇವೆಗೌಡರ ಕೊಡುಗೆ ದೊಡ್ಡದು. ಚಂದ್ರಶೇಖರ್ ಅವರು ಮಂತ್ರಿ ಮಾಡುತ್ತೇನೆ. ನನಗೆ ಮಂತ್ರಿ ಸ್ಥಾನ ಬೇಡ. 

ರಸ್ತೆಗಲ್ಲ, ಇಡೀ ರಾಜ್ಯಕ್ಕೆ ಸಿದ್ದರಾಮಯ್ಯ ಹೆಸರಿಡಿ: ಎಚ್.ಡಿ.ಕುಮಾರಸ್ವಾಮಿ ಲೇವಡಿ

ಅದರ ಬದಲಿಗೆ ನಾಯಕ ಸವಾಜವನ್ನು ಪ.ಪ್ರವರ್ಗಕ್ಕೆ ಸೇರಿಸಿ ಎಂದು ಕೇಳಿದರು. ಅವರ ಒತ್ತಾಯದ ಮೇರೆಗೆ ಇವತ್ತು ನಾಯಕ ಸಮಾಜ ಎಸ್ಟಿ ಪ್ರವರ್ಗದಲ್ಲಿದೆ. ಅಷ್ಟೇ ಅಲ್ಲ, ಆ ಸಮುದಾಯದ ಮಠ ಕಟ್ಟಬೇಕಾದರೆ ಅವರ ಕೊಡುಗೆ ಇದೆ ಎಂದು ಅವರು ಮಾಹಿತಿ ನೀಡಿದರು. ಕೇವಲ ಐದು ಗ್ಯಾರಂಟಿ ಕೊಟ್ಟು ಜನರ ಮೇಲೆ ಸರ್ಕಾರ ಬೆಲೆಯ ಬರೆ ಎಳೆಯುತ್ತಿದೆ. ಇಂದು ಮಧ್ಯರಾತ್ರಿಯಿಂದ ಬಸ್ ದರ ಶೇ. 15ರಷ್ಟು ಹೆಚ್ಚಾಗುತ್ತಿದೆ. ಕಾಂಗ್ರೆಸ್ ನವರಿಗೆ ಮಧ್ಯರಾತ್ರಿ ಎಂದರೆ ಬಹಳ ಇಷ್ಟ. ದರದ ಮೇಲೆ ದರ ಏರಿಸುತ್ತಾ ಹೋದರೆ 2 ಸಾವಿರ ಕೊಡುವುದು ದೊಡ್ಡ ವಿಷಯವೇ? ನಾನೇ ಸಿಎಂ ಆಗಿದ್ದಿದ್ದರೆ 2 ಸಾವಿರ ಬದಲು 5 ಸಾವಿರ ಕೊಡುತ್ತಿದ್ದೆ ಎಂದು ಅವರು ವಾಗ್ದಾಳಿ ನಡೆಸಿದರು.

Latest Videos
Follow Us:
Download App:
  • android
  • ios