ಭೋಪಾಲ್[ಮಾ.11]: ಮಧ್ಯಪ್ರದೇಶದ ರಾಜಕೀಯ ಮಂಗಳವಾರ ಮತ್ತೊಂದು ರಾಜಕೀಯ ತಿರುವು ಪಡೆದುಕೊಂಡಿದೆ. ಮಧ್ಯಪ್ರದೇಶದ ಕಾಂಗ್ರೆಸ್‌ ಮುಖಂಡರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಂಗಳವಾರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಬಳಿಕ ಕೆಲವೇ ಹೊತ್ತಿನಲ್ಲಿ ಅವರನ್ನು ಕಾಂಗ್ರೆಸ್‌ ಪಕ್ಷ ಉಚ್ಚಾಟಿಸಿದೆ. ಅವರು ಬಿಜೆಪಿ ಸೇರುವುದು ನಿಚ್ಚಳವಾಗಿದೆ.

ಹೀಗಿರುವಾಗ 18 ವರ್ಷ ಕಾಂಗ್ರೆಸ್‌ನಲ್ಲಿದ್ದು ಜನ ಸೇವೆ ಮಾಡಿದ್ದ, ಬಿಜೆಪಿ ವಿರೋಧಿಸಿದ್ದ ಸಿಂಧಿಯಾ ಇದ್ದಕ್ಕಿದ್ದಂತೆ ಪಕ್ಷ ತೊರೆದಿದ್ದೇಕೆ? ಇಂತಹ ನಿರ್ಧಾರಕ್ಕೇನು ಕಾರಣ? ಇದು ಸಿಂಧಿಯಾ ಹಳೇ ಸೇಡಿಗೆ ಕೊಟ್ಟ ಹೊಸ ಪೆಟ್ಟು.

18 ವರ್ಷ ಬಿಜೆಪಿ ವಿರೋಧಿಸಿದ್ದ ಜ್ಯೋತಿರಾದಿತ್ಯ!

- ಮಧ್ಯಪ್ರದೇಶದಲ್ಲಿ ಕಮಲ್‌ನಾಥ್‌ ಅವರಿಗೂ ಸಿಂಧಿಯಾಗೂ ವೈಮನಸ್ಯ

- ತಮ್ಮನ್ನು ಮ.ಪ್ರ. ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ ಪರಿಗಣಿಸದ ಹೈಕಮಾಂಡ್‌

- ಮಧ್ಯಪ್ರದೇಶದಿಂದ ರಾಜ್ಯಸಭೆ ಟಿಕೆಟ್‌ ಕೊಡಲೂ ವರಿಷ್ಠರ ನಕಾರ

- ಹೈಕಮಾಂಡ್‌ ತಮ್ಮನ್ನು ಅನಿಶ್ಚಿತ ಸ್ಥಿತಿಯಲ್ಲಿ ಇಟ್ಟಿದ್ದಕ್ಕೆ ಸಿಂಧಿಯಾರಲ್ಲಿ ಒಳಬೇಗುದಿ

- ಮ.ಪ್ರ. ವಿಚಾರದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲು ಹೈಕಮಾಂಡ್‌ ವಿಫಲವಾಗಿದ್ದು

ಸಿಂಧಿಯಾ ರಾಜೀನಾಮೆ : ಬಿಜೆಪಿಗೆ ಸೇರ್ಪಡೆ?