ಬೆಂಗಳೂರು,(ಜೂನ್. 16): ರಾಜ್ಯ ವಿಧಾನಪರಿಷತ್‌ ಚುನಾವಣೆಗೆ ಕಾಂಗ್ರೆಸ್ ತನ್ನ 2 ಸೀಟಿಗೆ ನಾಲ್ವರ ಹೆಸರಗಳನ್ನು ಅಂತಿಮಗೊಳಿಸಿದ್ದು, ಈ ಪೈಕಿ ಇಬ್ಬರ ಹೆಸರುಗಳನ್ನು ಫೈನಲ್‌ ಮಾಡಲು ಹೈಕಮಾಂಡ್‌ಗೆ ಬಿಟ್ಟಿದೆ.

ಇನ್ನು ಬಗ್ಗೆ  ಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಇಂದು (ಮಂಗಳವಾರ) ಸಿದ್ದರಾಮಯ್ಯ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಬೇರೆ ಬೇರೆ ವರ್ಗಗಳ ನಾಯಕರು ಆಕಾಂಕ್ಷಿಗಳಿದ್ದಾರೆ. ನಾಲ್ವರನ್ನ ಈಗಾಗಲೇ ಆಯ್ಕೆ ಮಾಡಲಾಗಿದ್ದು, ಇನ್ನೊಮ್ಮೆ ಸಭೆ ಮಾಡಿ ಇಬ್ಬರು ಅಭ್ಯರ್ಥಿಗಳನ್ನು ನಿರ್ಧರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ವಿಧಾನಪರಿಷತ್ ಎಲೆಕ್ಷನ್: ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಫೈನಲ್

 ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ನೀಡಲು ನೋಡುತ್ತಿದ್ದೇವೆ. ಅವರಿಗೆ ಟಿಕೆಟ್ ಕೊಟ್ಟರೆ ಪಕ್ಷ ಸಂಘಟನೆ ಸುಲಭವಾಗಲಿದೆ. ನೋಡೋಣ  ಒಂದು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು. ಆದ್ರೆ, ನಾಲ್ವರ ಹೆಸರು ಯಾವವು ಎನ್ನುವುದು ಮಾತ್ರ ಹೇಳಿಲಿಲ್ಲ.

7 ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ 4, ಜೆಡಿಎಸ್‌ಗೆ 1 ಮತ್ತು ಕಾಂಗ್ರೆಸ್‌ಗೆ 2 ಸ್ಥಾನಗಳಿದ್ದು, ಈ ಎರಡು ಸ್ಥಾನಕ್ಕೆ ನಾಲ್ವರನ್ನ ಫೈನಲ್‌ ಮಾಡಿ ಹೈಕಮಾಂಡ್‌ಗೆ ಪಟ್ಟಿ ರವಾನಿಸಲಾಗಿದೆ. 

ಇನ್ನೊಂದು ಸಭೆ ನಡೆಸಿ ನಾಲ್ವರಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಫೈನಲ್ ಮಾಡಿ ಅಧಿಕೃತ ಮಂಗಳವಾರ ಸಂಜೆ ಅಥವಾ ಬುಧವಾರ ಘೋಷಣೆ ಮಾಡುವ ಸಾಧ್ಯತೆಗಳಿವೆ. ಇನ್ನು ಬಿಜೆಪಿ ಸಹ ಕೋರ್ ಕಮಿಟಿ ಸಭೆಯಲ್ಲಿಅಭ್ಯರ್ಥಿಗಳನ್ನ ಅಂತಿಮಗೊಳಿಸಿ ಪಟ್ಟಿಯನ್ನ ಹೈಕಮಾಂಡ್‌ ರವಾನಿಸಿದೆ.

 ಕರ್ನಾಟಕ ವಿಧಾನಸಭೆಯಿಂದ ಒಟ್ಟು 7 ಸದಸ್ಯರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಲು ಜೂನ್ 29ರಂದು ಚುನಾವಣೆ ನಡೆಯಲಿದ್ದು, ಜೂನ್ 18 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ.