17ನೇ ಲೋಕಸಭೆಯ ಕೊನೆಯ ಅಧಿವೇಶನ ಮುಗಿದಿದೆ. ಇದರ ಬೆನ್ನಲ್ಲೇ ಲೋಕಸಭೆಯ ಅಧಿಕೃತ ಅಂಕಿ-ಅಂಶ ಆಧರಿಸಿ ‘ಪಿಆರ್‌ಎಸ್‌ ಲೆಜಿಸ್ಲೇಟಿವ್‌’ ಸಂಸ್ಥೆ ಬಿಡುಗಡೆ ವರದಿಯೊಂದನ್ನು ಬಿಡುಗಡೆ ಮಾಡಿದೆ. 

ನವದೆಹಲಿ(ಫೆ.14): ಕರ್ನಾಟಕದ 28 ಲೋಕಸಭಾ ಸದಸ್ಯರ ಪೈಕಿ ನಾಲ್ವರು ತಮ್ಮ ಐದು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಲೋಕಸಭೆಯ ಒಂದೂ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರವಷ್ಟೇ 17ನೇ ಲೋಕಸಭೆಯ ಕೊನೆಯ ಅಧಿವೇಶನ ಮುಗಿದಿದೆ. ಇದರ ಬೆನ್ನಲ್ಲೇ ಲೋಕಸಭೆಯ ಅಧಿಕೃತ ಅಂಕಿ-ಅಂಶ ಆಧರಿಸಿ ‘ಪಿಆರ್‌ಎಸ್‌ ಲೆಜಿಸ್ಲೇಟಿವ್‌’ ಸಂಸ್ಥೆ ಬಿಡುಗಡೆ ವರದಿಯೊಂದನ್ನು ಬಿಡುಗಡೆ ಮಾಡಿದೆ. 

ಲೋಕಸಭೆ ಕದನದಿಂದ ಅಧಿಕೃತವಾಗಿ ಹಿಂದೆ ಸರಿದ ಸೋನಿಯಾ, ರಾಜಸ್ಥಾನದಿಂದ ರಾಜ್ಯಸಭೆಗೆ ಫೈಟ್‌!

ಅದರ ಪ್ರಕಾರ, ರಾಜ್ಯದ ಅನಂತಕುಮಾರ ಹೆಗಡೆ (ಉತ್ತರ ಕನ್ನಡ), ರಮೇಶ ಜಿಗಜಿಣಗಿ (ವಿಜಯಪುರ), ಬಿ.ಎನ್‌. ಬಚ್ಚೇಗೌಡ (ಚಿಕ್ಕಬಳ್ಳಾಪುರ) ಹಾಗೂ ವಿ. ಶ್ರೀನಿವಾಸ ಪ್ರಸಾದ್‌ (ಚಾಮರಾಜನಗರ) ಕಳೆದ 5 ವರ್ಷದಲ್ಲಿ ಸದನದಲ್ಲಿ ನಡೆದ ಒಂದೂ ಚರ್ಚೆಯಲ್ಲಿ ಪಾಲ್ಗೊಂಡಿಲ್ಲ ಎಂಬ ಮಾಹಿತಿ ಲಭಿಸಿದೆ.