Asianet Suvarna News Asianet Suvarna News

Lok Sabha Election 2024: ನಾಮಪತ್ರ ಪರಿಶೀಲನೆ ಮುಕ್ತಾಯ, 276 ಸ್ವೀಕೃತ, 60 ತಿರಸ್ಕೃತ

ಬೆಂಗಳೂರು ದಕ್ಷಿಣ ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ಕಾರ್ಯ ತಡರಾತ್ರಿಯವರೆಗೆ ನಡೆದಿರುವ ಹಿನ್ನೆಲೆಯಲ್ಲಿ ಆ ಒಂದು ಕ್ಷೇತ್ರದ ಅಂತಿಮ ಉಮೇದುವಾರಿಕೆಯ ಸಂಖ್ಯೆ ತಿಳಿಯಬೇಕಿದೆ. ಇನ್ನುಳಿದಂತೆ ಎಲ್ಲಾ ಕ್ಷೇತ್ರಗಳ ಪರಿಶೀಲನೆ ಕಾರ್ಯ ನಡೆದಿದೆ. ಏ.8ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ. ತದನಂತರ ಚುನಾವಣಾ ಅಖಾಡದಲ್ಲಿ ಎಷ್ಟು ಅಭ್ಯರ್ಥಿಗಳಿದ್ದಾರೆ ಎಂಬುದು ಸಷ್ಟವಾಗಲಿದೆ.

276 Nominations Accepted and 60 Rejected at Karnataka in Lok Sabha Election 2024 grg
Author
First Published Apr 6, 2024, 7:00 AM IST | Last Updated Apr 6, 2024, 7:00 AM IST

ಬೆಂಗಳೂರು(ಏ.06):  ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ 358 ಅಭ್ಯರ್ಥಿಗಳು 492 ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, 13 ಕ್ಷೇತ್ರದಲ್ಲಿ ಪರಿಶೀಲನೆ ಕಾರ್ಯ ಮುಗಿದಿದೆ. 276 ನಾಮಪತ್ರಗಳು ಕ್ರಮಬದ್ಧವಾಗಿದ್ದು, 60 ನಾಮಪತ್ರಗಳು ತಿರಸ್ಕೃತಗೊಂಡಿವೆ. ಬೆಂಗಳೂರು ದಕ್ಷಿಣ ಕ್ಷೇತ್ರದ ನಾಮಪತ್ರಗಳ ಪರಿಶೀಲನೆ ಕಾರ್ಯ ತಡರಾತ್ರಿಯವರೆಗೆ ನಡೆದಿರುವ ಹಿನ್ನೆಲೆಯಲ್ಲಿ ಆ ಒಂದು ಕ್ಷೇತ್ರದ ಅಂತಿಮ ಉಮೇದುವಾರಿಕೆಯ ಸಂಖ್ಯೆ ತಿಳಿಯಬೇಕಿದೆ. ಇನ್ನುಳಿದಂತೆ ಎಲ್ಲಾ ಕ್ಷೇತ್ರಗಳ ಪರಿಶೀಲನೆ ಕಾರ್ಯ ನಡೆದಿದೆ. ಏ.8ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ. ತದನಂತರ ಚುನಾವಣಾ ಅಖಾಡದಲ್ಲಿ ಎಷ್ಟು ಅಭ್ಯರ್ಥಿಗಳಿದ್ದಾರೆ ಎಂಬುದು ಸಷ್ಟವಾಗಲಿದೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 34 ಅಭ್ಯರ್ಥಿಗಳು 49 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.ಇವರ ನಾಮಪತ್ರಗಳ ಪರಿಶೀಲನೆ ಕಾರ್ಯವು ತಡರಾತ್ರಿಯವರೆಗೆ ನಡೆದಿದೆ. ಈ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಮಾಹಿತಿಯು ತಡವಾಗಿ ಲಭ್ಯವಾಗಲಿದೆ. 358 ಅಭ್ಯರ್ಥಿಗಳು 492 ನಾಮಪತ್ರಗಳು ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ 384 ನಾಮಪತ್ರಗಳು ಸ್ವೀಕೃತಗೊಂಡಿದ್ದು, 60 ನಾಮಪತ್ರಗಳು ತಿರಸ್ಕೃತಗೊಂಡಿದೆ. 276 ನಾಮಪತ್ರ ಕ್ರಮಬದ್ದವಾಗಿವೆ ಎಂದು ಮುಖ್ಯಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ಮೈಸೂರು ಮಹಾರಾಜ ಯದುವೀರ ಒಡೆಯರ ಬಳಿ 4.99 ಕೋಟಿ ಆಸ್ತಿಯಿದ್ದರೂ, ಸ್ವಂತಕ್ಕೊಂದು ಮನೆ, ಕಾರು ಇಲ್ಲ!

ಕ್ಷೇತ್ರವಾರು ಮಾಹಿತಿ:

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 13 ಅಭ್ಯರ್ಥಿಗಳು 19 ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, 10 ನಾಮಪತ್ರಗಳು ಕ್ರಮಬದ್ಧವಾಗಿದ್ದು,4ತಿರಸ್ಕೃತಗೊಂಡಿವೆ. ಹಾಸನ ಕ್ಷೇತ್ರದಲ್ಲಿ 21 ಅಭ್ಯರ್ಥಿಗಳು 29 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 18 ಕ್ರಮಬದ್ಧವಾಗಿದ್ದು, ಮೂರು ತಿರಸ್ಕೃತಗೊಂಡಿವೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು 21 ನಾಮಪತ್ರಗಳನ್ನು ಸಲ್ಲಿಸಿದ್ದು, 10 ಕ್ರಮವಾಗಿವೆ. 2 ತಿರಸ್ಕೃತಗೊಂಡಿವೆ. ಚಿತ್ರದುರ್ಗ ಕ್ಷೇತ್ರದಲ್ಲಿ 28 ಅಭ್ಯರ್ಥಿಗಳು 36 ನಾಮಪತ್ರ ಸಲ್ಲಿಕೆ ಮಾಡಿದ್ದು, 24 ನಾಮಪತ್ರಗಳು ಕ್ರಮಬದ್ದವಾಗಿವೆ. 4 ಉಮೇದುವಾರಿಕೆ ತಿರಸ್ಕೃತವಾಗಿವೆ. ತುಮಕೂರುಕ್ಷೇತ್ರದಲ್ಲಿ 22 ಅಭ್ಯರ್ಥಿಗಳು
31 ಉಮೇದುವಾರಿಕೆ ಸಲ್ಲಿಕೆಮಾಡಿದ್ದಾರೆ.

Loksabha Eection: ಜೋರಾದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಭರಾಟೆ.. ಇಂದು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಂದ ಉಮೇದುವಾರಿಕೆ!

ಇದರಲ್ಲಿ 22 ನಾಮಪತ್ರಗಳು ಕ್ರಮಬದ್ಧವಾಗಿವೆ. ಮಂಡ್ಯ ಕ್ಷೇತ್ರದಲ್ಲಿ 27 ಅಭ್ಯಥಿ ಅಭ್ಯರ್ಥಿಗಳು 37 ನಾಮಪತ್ರಗಳನ್ನು ಸಲ್ಲಿಸಿದ್ದು, 10 ನಾಮಪತ್ರಗಳು ತಿರಸ್ಕೃತಗೊಂಡಿವೆ. 19 ಉಮೇದುವಾರಿಕೆ ಕ್ರಮಬದ್ದವಾಗಿವೆ. ಮೈಸೂರು ಕ್ಷೇತ್ರದಲ್ಲಿ 28 ಅಭ್ಯರ್ಥಿಗಳು 37 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದು, 5 ಉಮೇದುವಾರಿಕೆ ತಿರಸ್ಕೃತ, 24 ಉಮೇದುವಾರಿಕೆ ಕ್ರಮವಾಗಿವೆ. ಚಾಮರಾಜನಗರ ಕ್ಷೇತ್ರದಲ್ಲಿ 25 ಅಭ್ಯರ್ಥಿಗಳಿಂದ 36 ಉಮೇದುವಾರಿಕೆಯಾಗಿದ್ದು, 5 ತಿರಸ್ಕೃತ, 22 ಕ್ರಮಬದ್ಧವಾಗಿವೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ 31 ಅಭ್ಯರ್ಥಿಗಳಿಂದ 45 ನಾಮಪತ್ರ ಸಲ್ಲಿಕೆಯಾಗಿದ್ದು, 7 ನಾಮಪತ್ರಗಳು ತಿರಸ್ಕೃತ, 27 ಕ್ರಮಬದ್ಧವಾಗಿವೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 25 ಅಭ್ಯರ್ಥಿಗಳು 36 ನಾಮಪತ್ರ ಸಲ್ಲಿಕೆ ಮಾಡಿದ್ದು, 6 ಉಮೇದುವಾರಿಕೆ ತಿರಸ್ಕೃತ, 21 ಕ್ರಮಬದ್ಧವಾಗಿವೆ. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 32 ಅಭ್ಯರ್ಥಿಗಳಿಂದ 40 ಉಮೇದುವಾರಿಕೆ ಸಲ್ಲಿಕೆಯಾಗಿದ್ದು, 28 ಕ್ರಮಬದ್ಧವಾಗಿವೆ. 4 ತಿರಸ್ಕೃತಗೊಂಡಿವೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 36 ಅಭ್ಯರ್ಥಿಗಳು 43 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದು, 4 ನಾಮಪತ್ರಗಳು ತಿರಸ್ಕೃತ, 32 ಕ್ರಮಬದ್ಧವಾಗಿವೆ. ಕೋಲಾರ ಕ್ಷೇತ್ರದಲ್ಲಿ 25 ಅಭ್ಯರ್ಥಿಗಳಿಂದ 33 ಉಮೇದುವಾರಿಕೆ ಸಲ್ಲಿಸಲಾಗಿದ್ದು, 6 ತಿರಸ್ಕೃತಗೊಂಡಿವೆ. 19 ನಾಮಪತ್ರಗಳು ಕ್ರಮಬದ್ಧವಾಗಿವೆ.

Latest Videos
Follow Us:
Download App:
  • android
  • ios