ಚಿಕ್ಕಮಗಳೂರು: 5ನೇ ದಿನವಾದ ಇಂದು 23 ಮಂದಿ ನಾಮಪತ್ರ ಸಲ್ಲಿಕೆ
ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ 5ನೇ ದಿನವಾದ ಇಂದು(ಬುಧವಾರ) ಚಿಕ್ಕಮಗಳೂರು ಜಿಲ್ಲೆಯಲ್ಲಿ 23 ನಾಮಪತ್ರ ಸಲ್ಲಿಕೆಯಾಗಿವೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಏ.19): ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ 5ನೇ ದಿನವಾದ ಇಂದು(ಬುಧವಾರ) ಚಿಕ್ಕಮಗಳೂರು ಜಿಲ್ಲೆಯಲ್ಲಿ 23 ನಾಮಪತ್ರ ಸಲ್ಲಿಕೆಯಾಗಿವೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಎಎಪಿ ಪಕ್ಷದಿಂದ ರಾಜನ್ ಹೆಚ್.ಎಸ್., ಬಹುಜನ ಸಮಾಜ ಪಕ್ಷದಿಂದ ಕೆ.ಎಂ. ಗೋಪಾಲ, ಪಕ್ಷೇತರ ಅಭ್ಯರ್ಥಿಗಳಾಗಿ ನಾರಾಯಣ ಮತ್ತು ಜಿ. ಭಾರತಿ ನಾಮಪತ್ರ ಸಲ್ಲಿಸಿದ್ದಾರೆ.
ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದಿಂದ ಎಲ್.ಬಿ.ರಮೇಶ್, ಬಿಜೆಪಿಯಿಂದ ದೀಪಕ್ ದೊಡ್ಡಯ್ಯ, ಜೆಡಿಎಸ್ನಿಂದ ಬಿ.ಬಿ. ನಿಂಗಯ್ಯ, ಪಕ್ಷೇತರರಾಗಿ ರುದ್ರೇಶ್, ಎಲ್.ಚೇತನ್ ಪ್ರಸಾಸ್ ನಾಮಪತ್ರ ಸಲಿಸಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಹೆಚ್.ಡಿ. ತಮ್ಮಯ್ಯ, ಪಕ್ಷೇತರರಾಗಿ ವಿಜಯಕುಮಾರ್, ಯು.ಆರ್.ಹೊನ್ನಪ್ಪ ನಾಮಪತ್ರ ಸಲ್ಲಿಸಿದ್ದಾರೆ. ತರೀಕೆರೆ ವಿಧಾನ ಸಭಾ ಕ್ಷೇತ್ರದಿಂದ ಕೆಆರ್ಎಸ್ ಪಕ್ಷದಿಂದ ಕೆ. ಗೋವಿಂದಪ್ಪ, ಪಕ್ಷೇತರರಾಗಿ ಡಿ.ಎಂ.ಪರಮೇಶ್ವರಪ್ಪ, ಹೆಚ್.ಓ. ವೀರಭದ್ರಪ್ಪ, ಎ.ಬಿ.ರಾಜಕುಮಾರ್, ಕಾಂಗ್ರೆಸ್ನಿಂದ ಜಿ.ಹೆಚ್. ಶ್ರೀನಿವಾಸ ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಭ್ರಷ್ಟಚಾರ ಜನರ ಮುಂದೆ ಪ್ರಸ್ತಾಪ: ಸಿ.ಟಿ.ರವಿ
ಕಡೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಕೆ.ಆರ್. ಗಂಗಾಧರಪ್ಪ, ಎಚ್.ಎಲ್.ಭದ್ರರಾಜು, ಎ.ಎ.ಪಿ. ಯಿಂದ ಬಿ.ಎಚ್.ರಾಜೇಶ್ವರಿ, ಜೆಡಿಎಸ್ನಿಂದ ವೈ.ಎಸ್.ವಿ. ದತ್ತ ನಾಮಪತ್ರ ಸಲ್ಲಿಸಿದ್ದು, ಕಡೂರು ಸಿ. ನಂಜಪ್ಪ ಕಾಂಗ್ರೆಸ್ ಹಾಗೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.