ತೆಲಂಗಾಣ ಚುನಾವಣೆ -2023 ವಿಐಪಿ ಅಭ್ಯರ್ಥಿಗಳು ಯಾರಾರು ಇಲ್ಲಿದೆ ನೋಡಿ ಮಾಹಿತಿ..
ಲೋಕಸಭಾ ಚುನಾವಣೆ ಫಲಿತಾಂಶದ ದಿಕ್ಸೂಚಿಯಾಗಿರುವ ಪಂಚರಾಜ್ಯ ಚುನಾವಣೆಯಲ್ಲಿ ತೆಲಂಗಾಣ ಚುನಾವಣೆ ಫಲಿತಾಂಶವೂ ಪ್ರಮುಖವಾಗಿದೆ. ತೆಲಂಗಾಣದ ವಿಐಪಿ ಅಭ್ಯರ್ಥಿಗಳು ಯಾರಾರು ಗೊತ್ತಾ.. ಇಲ್ಲಿದೆ ಪಟ್ಟಿ ನೋಡಿ..
ಬೆಂಗಳೂರು (ಡಿ.02): ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಯಾವುದೇ ಅಸ್ತಿತ್ವದ ಭಯವಿಲ್ಲ. ಹೀಗಾಗಿ, ಬಿಆರ್‌ಎಸ್ ಅಧಿಕಾರಕ್ಕೆ ಬಂದರೂ ಪರವಾಗಿಲ್ಲ, ಕಾಂಗ್ರೆಸ್ ಮಾತ್ರ ಅಧಿಕಾರಕ್ಕೆ ಬರಬಾರದು ಎಂಬುದು ಬಿಜೆಪಿಯ ಧ್ಯೇಯವಾಗಿದೆ. ಆದರೆ, ಕಾಂಗ್ರೆಸ್ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲೇಬೇಕೆಂಬ ಶತಪ್ರಯತ್ನ ಮಾಡಿದ್ದು, ಬೆಳಗಾದರೆ ಫಲಿತಾಂಶ ಹೊರಬೀಳಲಿದೆ. ತೆಲಂಗಾಣದಲ್ಲಿ ಘಟಾನುಘಟಿ ನಾಯಕರು ಯಾರಾರು ಎಂದು ನೋಡುವುದಾದರೆ ಅವರ ಪಟ್ಟಿ ಇಲ್ಲಿದೆ ನೋಡಿ...
ತೆಲಂಗಾಣದ ಬಿಆರ್‌ಎಸ್ ಮೂಲಕ ಅಧಿಕಾರ ಗದ್ದುಗೆ ಹಿಡಿದು ಹಾಲಿ ಅಧಿಕಾರ ನಡೆಸಿದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿಐಪಿ ಅಭ್ಯರ್ಥಿಯಾಗಿದ್ದಾರೆ. ಇವರು ಈ ಬಾರಿ ಎರಡು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಗಜ್ವೇಲ್ ಮತ್ತು ಕಾಮರೆಡ್ಡಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ಗಜ್ವೇಲ್ ಅವರ ತವರು ಕ್ಷೇತ್ರವಾಗಿದ್ದು, ಅಲ್ಲಿಂದ ಅವರು ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಕಾಮರೆಡ್ಡಿ ಕ್ಷೇತ್ರದಲ್ಲಿ ರೇವಂತ ರೆಡ್ಡಿಯನ್ನು ಎದುರಿಸುತ್ತಿದ್ದಾರೆ.
ತೆಲಂಗಾಣ, ರಾಜಸ್ಥಾನದಲ್ಲಿ ಗೆಲ್ಲುವ ಕೈ ನಾಯಕರು ಕರ್ನಾಟಕ ರೆಸಾರ್ಟ್‌ಗೆ ಶಿಫ್ಟ್: ತೆಲಂಗಾಣಕ್ಕೆ ಹೊರಟ ಡಿಕೆಶಿ
ಕಾಂಗ್ರೆಸ್‌ನ ಎ.ರೇವಂತ್ ರೆಡ್ಡಿ, ಕೆಸಿಆರ್ ಸ್ಪರ್ಧಿಸುತ್ತಿರುವ ಕಾಮರೆಡ್ಡಿ ಕ್ಷೇತ್ರದಿಂದ ರೇವಂತ ರೆಡ್ಡಿ ಸ್ಪರ್ಧಿಸುತ್ತಿದ್ದಾರೆ. ರೆಡ್ಡಿ ಕಾಂಗ್ರೆಸ್‌ನ ಫೈರ್‌ಬ್ರಾಂಡ್ ನಾಯಕರಾಗಿದ್ದು, ಅವರ ತವರು ಕ್ಷೇತ್ರವಾದ ಕೊಡಂಗಲ್‌ನಿಂದಲೂ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೇವಂತ ರೆಡ್ಡಿ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನಲಾಗುತ್ತಿದೆ.
ಬಿಆರ್‌ಎಸ್‌ನ ಕೆ.ಟಿ ರಾಮರಾವ್ ಇವರು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರರಾಗಿದ್ದಾರೆ. ತಂದೆ ಕೆಸಿಆರ್ ಎಂದು ಹಾಗೂ ಮಗ ಕೆಟಿಆರ್ ಎಂದೇ ಜನಪ್ರಿಯ ಆಗಿದ್ದಾರೆ. ಇವರು ಸಿರ್ಸಿಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಬಂಡಿ ಸಂಜಯ್ ಕುಮಾರ್, ಬಿಜೆಪಿ: ಬಿಜೆಪಿ ಪಕ್ಷದಿಂದ ಕರೀಂನಗರ ವಿಧಾನಸಭಾ ಕ್ಷೇತ್ರದಿಂದ ಬಂಡಿ ಸಂಜಯ್ ಕುಮಾರ್ ಕಣಕ್ಕಿಳಿದಿದ್ದಾರೆ. ಪ್ರಸ್ತುತ ಲೋಕಸಭಾ ಸದಸ್ಯರಾಗಿರುವ ಬಂಡಿ ಸಂಜಯ್ ಹಿಂದುತ್ವದ ಫೈರ್ ಬ್ರಾಂಡ್ ಆಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಯಾಗಿದ್ದಾರೆ.
ಮೊಹಮ್ಮದ್ ಅಜರುದ್ದೀನ್, ಕಾಂಗ್ರೆಸ್: ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಜುಬ್ಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ರೈತರಿಗೆ ಬರ ಪರಿಹಾರ ಕೊಡಲು ದುಡ್ಡಿಲ್ಲ, ಆದ್ರೆ ಶಾಸಕರ ಬರ್ತಡೇಲಿ ಹಣದ ಮಳೆಯನ್ನೇ ಸುರಿಸಲಾಗ್ತಿದೆ!
ಹರೀಶ್ ರಾವ್: ಬಿಆರ್‌ಎಸ್ ಮುಖಂಡ ಹಾಗೂ ವೈದ್ಯಕೀಯ-ಆರೋಗ್ಯ ಮತ್ತು ಹಣಕಾಸು ಸಚಿವ ಹರೀಶ್ ರಾವ್ ಅವರು ಮತ್ತೊಮ್ಮೆ ಸಿದ್ದಿಪೇಟೆಯಿಂದ ಸ್ಪರ್ಧಿಸಿದ್ದಾರೆ. ಹರೀಶ್ ರಾವ್ 2004 ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಟಿ. ರಾಜಾ ಸಿಂಗ್: ರಾಜಾ ಸಿಂಗ್ ತೆಲಂಗಾಣದ ಗೋಶಾಮಹಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ರಾಜಾ ಸಿಂಗ್ ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನ ನೀಡಿದ್ದ ಕಾರಣ ಬಿಜೆಪಿಯಿಂದ ಅಮಾನತುಗೊಂಡಿದ್ದರು. ಬಳಿಕ ಪಂಚರಾಜ್ಯಗಳ ಚುನಾವಣೆ ಘೋಷಣೆ ಬಳಿಕ, ಬಿಜೆಪಿ ಮತ್ತೆ ಸ್ಥಾನ ನೀಡಿ ಚುನಾವಣೆಗೆ ಟಿಕೆಟ್ ನೀಡಿದೆ. ಈ ಬಾರಿ ರಾಜಾ ಸಿಂಗ್ ಗೆದ್ದರೆ, ಹ್ಯಾಟ್ರಿಕ್ ಗೆಲುವು ಸಾಧಿಸಿದಂತೆ ಆಗುತ್ತದೆ.