Karnataka Politics: 2023ರ ಚುನಾವಣೆ ನನ್ನ ಕೊನೆ ಎಲೆಕ್ಷನ್‌: ಸಿದ್ದು

*  ಸಕ್ರಿಯ ರಾಜಕಾರಣದಲ್ಲಿರುತ್ತೇನೆ
*  ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ: ವಿಪಕ್ಷ ನಾಯಕ
*  ನಾನು ಇನ್ನೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಿರ್ಧರಿಸಿಲ್ಲ
 

2023 Election Is My Last Election Says Siddaramaiah grg

ಮೈಸೂರು(ಮಾ.26): ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ. ನಂತರ ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಆದರೆ, ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ತಿಳಿಸಿದ್ದಾರೆ.

ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಗೆ ಬಹಳಷ್ಟು ಕ್ಷೇತ್ರದ ನಾಯಕರು ತಮ್ಮಲ್ಲಿ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ. ನಾನು ಇನ್ನೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಿರ್ಧರಿಸಿಲ್ಲ. ಚುನಾವಣೆಗೆ(Election) ಇನ್ನೂ ಒಂದು ವರ್ಷವಿದೆ. ಈಗಲೇ ಈ ಬಗ್ಗೆ ತೀರ್ಮಾನ ಮಾಡಲ್ಲ. ವರುಣ, ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರದಿಂದಲ್ಲೂ ಒತ್ತಡವಿದೆ. ರಾಜಕೀಯ ಪುನರ್‌ಜನ್ಮ ಕೊಟ್ಟಚಾಮುಂಡೇಶ್ವರಿ ಕ್ಷೇತ್ರದ ಜನರೆ ನನ್ನನ್ನು ಸೋಲಿಸಿದರು. ಆದರೂ ನಾನು ಅವರನ್ನು ದ್ವೇಷಿಸಲಿಲ್ಲ. ಆಗ ಮತ್ತೆ ಅವರೇ ನನ್ನನ್ನು ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ ಎಂದರು.

News Hour: ಹಿಜಾಬ್ ವಿಚಾರಕ್ಕೆ ಸ್ವಾಮೀಜಿಗಳನ್ನು ಎಳೆದ ಸಿದ್ದರಾಮಯ್ಯಗೆ ಠಕ್ಕರ್!

ಮಠಾಧೀಶರ ಉಡುಪಿನ ಬಗ್ಗೆ ಮಾತನಾಡಿ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ(Karnataka) ಹೊತ್ತಿ ಉರಿದು ತಣ್ಣಗಾಗಿದ್ದ ಬೆಂಕಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತುಪ್ಪ ಸುರಿದಿದ್ದಾರೆ. ಸ್ವಗ್ರಾಮ ಸಿದ್ದರಾಮನ ಹುಂಡಿಯಲ್ಲಿ ಅವರು ಮಾತನಾಡಿದ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅವರ ಮಾತಿನಿಂದ ಕೆರಳಿದ ಮಠಾಧೀಶರು (pontiff) ಕ್ಷಮೆ ಕೇಳುವ ಪರಿಸ್ಥಿತಿ ಸಿದ್ದರಾಮಯ್ಯಗೆ ಬರುತ್ತೆ ಎಂದು ಎಚ್ಚರಿಸಿದ್ದಾರೆ.  

ಹೌದು, ಊರ ಹಬ್ಬ ಸಿದ್ದರಾಮೇಶ್ವರ ಚಿಕ್ಕಮ್ಮತಾಯಿ ಜಾತ್ರಾ ಮಹೋತ್ಸವಕ್ಕಾಗಿ ಸಿದ್ದರಾಮನ ಹುಂಡಿಯಲ್ಲಿ ಉಳಿದುಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಜಾಲಿ ಮೂಡ್‌ನಲ್ಲಿ ಇದ್ದಾರೆ. ರಾಜಕೀಯ ಜಂಜಾಟ ಮರೆತು ಜಾಲಿಯಾಗಿರುವ ಸಿದ್ದರಾಮಯ್ಯ  ಗ್ರಾಮ ದೇವತೆಯಾದ ಸಿದ್ದರಾಮೇಶ್ವರ ಜಾತ್ರೆಯಲ್ಲಿ ಬರೊಬ್ಬರಿ 45 ನಿಮಿಷ ವೀರ ಕುಣಿತ ಕುಣಿದು ಕುಪ್ಪಳಿಸಿದ್ರು. ಅದೇ ಮೂಡನ್ನು ಇಂದೂ ಮುಂದುವರಿಸಿದ ಅವರು ಬೆಳಿಗ್ಗೆಯಿಂದ ಊರ ದೇವರ ಪೂಜೆ ಹಾಗು ದೇವರ ಉತ್ಸವಗಳಲ್ಲಿ ಭಾಗವಹಿಸಿದರು.

ತಮ್ಮ ಮನೆಯ ಪಡಸಾಲೆ ಮೇಲೆ ಮಾತನಾಡುತ್ತಿದ್ದ ಅವರು ಮುಸ್ಲಿಂ ಹೆಣ್ಣು ಮಕ್ಕಳು(Muslim Girls) ಶಾಲೆಗೆ ದುಪ್ಪಟ್ಟ ಹಾಕಿದರೆ ತಪ್ಪೇನು ಎಂಬಂತೆ ಮಾತನಾಡಿದ್ದಾರೆ. ಇದನ್ನು ಸಮರ್ಥಿಸುವ ಭರದಲ್ಲಿ ಸಿದ್ದು ಮಠಾಧೀಶರ ಉಡುಪಿನ ಬಗ್ಗೆ ಮಾತನಾಡಿದ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಹಿಜಾಬ್ ವಿವಾದ ಆಗಲು ಬಿಜೆಪಿ ಕಾರಣವಾಗಿದ್ದು, ಮುಸ್ಲಿಂ ಹೆಣ್ಣು ಮಕ್ಕಳು ಒಂದು ದುಪ್ಪಟ್ಟ ತಲೆ ಮೇಲೆ ಹಾಕಿಕೊಳ್ಳುತ್ತೇನೆ ಎಂದರೆ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ ಎನ್ನುತ್ತಾ ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕುತ್ತಾರೆ. ಅದನ್ನು ನೀವು ಪ್ರಶ್ನೆ ಮಾಡುತ್ತೀರಾ? ಎಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.

Karnataka Politics: ಹಿಜಾಬ್ ಬಿಜೆಪಿಯವರು ಹುಟ್ಟು ಹಾಕಿದ ವಿವಾದವಲ್ಲ: ಗೃಹ ಸಚಿವ ಜ್ಞಾನೇಂದ್ರ

ಇನ್ನು ಸ್ಪೀಕರ್ ಸದನದಲ್ಲಿ ಆರ್‌ಎಸ್‌ಎಸ್ ಬಗ್ಗೆ ಆಡಿದ ಮಾತಿಗೂ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸ್ಪೀಕರ್ ಆ ಕುರ್ಚಿಯಲ್ಲಿ ಕೂತು ನಮ್ಮ ಆರ್ ಎಸ್ ಎಸ್ ಅಂದಿದ್ದು ತಪ್ಪು ಎಂದಿದ್ದಾರೆ. ಸ್ಪೀಕರ್ ಆದ ತಕ್ಷಣ ಅವರು ಪಕ್ಷಾತೀತರಾಗಿ ಇರಬೇಕು. ಆದರೆ, ನಿನ್ನೆ ನಮ್ಮ ಆರ್‌ಎಸ್‌ಎಸ್   ಅಂದಿದ್ದು ಸರಿಯಲ್ಲ. ಆರ್‌ಎಸ್‌ಎಸ್ ಮನುಸ್ಮೃತಿ, ಶ್ರೇಣೀಕೃತ ವ್ಯವಸ್ಥೆ, ಜಾತಿ ವ್ಯವಸ್ಥೆ ಜಾರಿಗೊಳಿಸುತ್ತದೆ ಜೊತೆಗೆ ಸಮಾಜ ಒಡೆಯುವುದೇ ಆರ್‌ಎಸ್‌ಎಸ್  ಅಜೆಂಡಾವಾಗಿದ್ದು ಇದಕ್ಕಾಗಿ ನಾನು ಆರ್‌ಎಸ್‌ಎಸ್ ವಿರೋಧಿಸುತ್ತೇನೆ ಎಂದರು.

ಭಾವನಾತ್ಮಕ‌ ವಿಚಾರಗಳಿಂದ‌ ಬಿಜೆಪಿಯವರೇ ಇಕ್ಕಟ್ಟಿಗೆ ಸಿಲುಕುತ್ತಾರೆ ಎಂದಿರುವ ಸಿದ್ದರಾಮಯ್ಯ ಜನ ದಡ್ಡರಲ್ಲ, ಎಲ್ಲವನ್ನೂ ಗಮನಿಸುತ್ತಾರೆ ಎಂದರು. ಪರಿಹಾರದಲ್ಲಿ ಬಿಜೆಪಿ ತಾರತಮ್ಯ ಮಾಡುತ್ತಿದ್ದು, ಶಿವಮೊಗ್ಗ ಹರ್ಷ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಟ್ಟವರು ಕರಾವಳಿಯ ದಿನೇಶ್ ಕುಟುಂಬಕ್ಕೆ ಕೊಟ್ರಾ.? ಅಂತ ಪ್ರಶ್ನೆ ಮಾಡಿದ್ರು. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದರು.
 

Latest Videos
Follow Us:
Download App:
  • android
  • ios