ಬೆಂಗಳೂರು, [ಡಿ.16]: ರಾಜ್ಯದ 15 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲಿ ಗೆದ್ದ 15 ನೂತನ ಶಾಸಕ ಡಿ.22ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಡಿಸೆಂಬರ್ 5 ರಂದು ಉಪಚುನಾವಣೆ ಾಗಿದ್ದು,  ಡಿ. 9ಕ್ಕೆ ಫಲಿತಾಂಶ ಹೊರಬಿದ್ದಾಗಿದೆ. ಇದರಲ್ಲಿ ಅಂದ್ರೆ 15 ಕ್ಷೇತ್ರಗಳಲ್ಲಿ ಬಿಜೆಪಿ 12, ಕಾಂಗ್ರೆಸ್ 2 ಹಾಗೂ ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದಾರೆ.

ಆತುರದಲ್ಲಿರುವ ಅರ್ಹ ಶಾಸಕರಿಗೆ ನಿರಾಸೆ: ಮುಂದಿನ ವರ್ಷವೇ ಮಂತ್ರಿ ಭಾಗ್ಯ..?

ಡಿ.22ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಈ 15 ಶಾಸಕರುಗಳ ಪದಗ್ರಹಣ ಸಮಾರಂಭ ನಡೆಯಲಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಸದಸ್ಯರುಗಳಿಗೆ ಪ್ರಮಾಣವಚನ ಬೋಧಿಸಲಿದ್ದಾರೆ.

ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಿ.ಎಸ್. ಯಡಿಯೂರಪ್ಪ  ಸಂಪುಟ ವಿಸ್ತರಣೆಯಾಗುವುದು ಸಹ ಖಚಿತವಾಗಿದೆ. ಬೈ ಎಲೆಕ್ಷನ್ ಪ್ರಚಾರದಲ್ಲಿ  ಸಿಎಂ ಮಾತು ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಸಮರ ಗೆದ್ದ  12 ಶಾಸಕರ ಪೈಕಿ ಬಿಜೆಪಿಯ  11 ಅರ್ಹ ಶಾಸಕರು ಸಚಿವರಾಗಲು ತುದಿಗಾಗಲ್ಲಲ್ಲಿ ನಿಂತಿದ್ದಾರೆ.   

ಆದ್ರೆ, ಇದುವರೆಗೂ ಹೈಕಮಾಂಡ್ ನಿಂದ ಯಾವುದೇ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಎಲ್ಲವೂ ಅಂದುಕೊಂಡತೆ ಆದ್ರೆ, ಡಿ 22ರ ನಂತರ ಸಂಪುಟ ವಿಸ್ತರಣೆಯಾಗಲಿದೆ. ಇಲ್ಲ ಜನವರಿಯಲ್ಲಿ ಮಾಡುವ ಮಾತುಗಳ ಸಹ ಕೇಳಿಬರುತ್ತಿವೆ.