ಆಪರೇಷನ್ ಕಮಲಕ್ಕೆ ಒಳಗಾಗುವವರು ನಮ್ಮಲ್ಲಿ ಯಾರೂ ಇಲ್ಲ. ಬಿಜೆಪಿ ಮತ್ತು ಜೆಡಿಎಸ್‌ನ ಹತ್ತು-ಹದಿನೈದು ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲು ಸಿದ್ಧರಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ಬೆಂಗಳೂರು (ಜ.03): ಆಪರೇಷನ್ ಕಮಲಕ್ಕೆ ಒಳಗಾಗುವವರು ನಮ್ಮಲ್ಲಿ ಯಾರೂ ಇಲ್ಲ. ಬಿಜೆಪಿ ಮತ್ತು ಜೆಡಿಎಸ್‌ನ ಹತ್ತು-ಹದಿನೈದು ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲು ಸಿದ್ಧರಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು. ಆಪರೇಷನ್ ಕಮಲಕ್ಕೆ ನಮ್ಮಲ್ಲಿನ ಒಬ್ಬ ಶಾಸಕರೂ ಒಳಗಾಗುವುದಿಲ್ಲ. ಐದು ವರ್ಷವೂ ಕಾಂಗ್ರೆಸ್ ಆಡಳಿತ ನಡೆಸಲಿದೆ. ಲೋಕಸಭಾ ಚುನಾವಣೆಯ ಮೊದಲು ಅಥವಾ ನಂತರ ಬಿಜೆಪಿ, ಜೆಡಿಎಸ್‌ನ ಹತ್ತು-ಹದಿನೈದು ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧರಾಗಿದ್ದಾರೆ.
ಅವರಿಗೆ ಅನುಕೂಲವಾದಾಗ ಬರಲಿ ಎಂದು ನಾವು ಒತ್ತಾಯ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಆರ್.ಅಶೋಕ್ ವಿಧಾನ ಸಭೆ ಪ್ರತಿಪಕ್ಷ ನಾಯಕ ಹಾಗೂ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಬಿಜೆಪಿಯಲ್ಲಿ ಹಲವು ಶಾಸಕರಿಗೆ ಅಸಮಾಧಾನ ಉಂಟಾಗಿದೆ. ಅಸಮಾಧಾನಿತರು ಪಕ್ಷ ತ್ಯಜಿಸಬಾರದು ಎಂದು ಇವರು ಸರ್ಕಾರ ಪತನದ ಹೇಳಿಕೆ ನೀಡುತ್ತಿದ್ದಾರೆ. 130 ಸ್ಥಾನ ಇರುವ ನಾವು ಕಿವಿಗೆ ಹೂ ಮೂಡಿಸಿಕೊಂಡಿದ್ದೇವಾ. ರಾಜಕಾರಣದ ಪ್ರಜ್ಞೆ ಕಾಂಗ್ರೆಸಿಗರಿಗೆ ಇಲ್ಲವಾ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಿಂದ 7764 ಮೆಟ್ರಿಕ್ ಟನ್ ಸಿರಿಧಾನ್ಯ ರಫ್ತು: 2022-23 ನೇ ಸಾಲಿನಲ್ಲಿ ರಾಜ್ಯದಿಂದ 36 ಕೋಟಿ ರು. ಮೌಲ್ಯದ 7764 ಮೆಟ್ರಿಕ್ ಟನ್ ಸಿರಿಧಾನ್ಯ ಮತ್ತು ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಅಮೆರಿಕಾ, ಆಸ್ಟ್ರೇಲಿಯಾ, ಯುಎಇ, ಕೆನಡಾ, ಕತಾರ್, ಥಾಯ್ಲೆಂಡ್, ಸಿಂಗಾಪುರ ಮುಂತಾದವು ಸಿರಿಧಾನ್ಯಗಳ ಪ್ರಮುಖ ರಫ್ತು ತಾಣಗಳಾಗಿವೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು. ಜ.5 ರಿಂದ 7 ರವರೆಗೂ ಅರಮನೆ ಮೈದಾನದಲ್ಲಿ ಆಯೋಜಿಸಲಿರುವ ಸಿರಿಧಾನ್ಯ ಮೇಳದ ಪೂರ್ವಭಾವಿಯಾಗಿ ಹೋಟೆಲ್‌ವೊಂದರಲ್ಲಿ ಆಯೋಜಿಸಿದ್ದ ‘ರಫ್ತುದಾರರ ಸಮಾವೇಶ’ಕ್ಕೆ ರಾಗಿ ಸಸಿಗಳಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಲೋಕಸಭಾ ಸೀಟು ಹಂಚಿಕೆ ಚರ್ಚೆಗೆ ಎಚ್.ಡಿ.ಕುಮಾರಸ್ವಾಮಿ ಶೀಘ್ರ ದಿಲ್ಲಿಗೆ
ಸಿರಿಧಾನ್ಯಗಳ ಪೈಕಿ ಪ್ರಸ್ತುತ ಪೌಷ್ಠಿಕಭರಿತ ಹಾಗೂ ಗ್ಲುಟನ್ ಮುಕ್ತ ಸಜ್ಜೆ ಹಿಟ್ಟಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಪರಿಗಣಿಸಲಾಗಿದ್ದು ಗೋಧಿ ಹಿಟ್ಟಿಗೆ ಪರ್ಯಾಯವಾಗಿ ಪ್ರಪಂಚದಾದ್ಯಂತ ಬಳಸಲಾಗುತ್ತದೆ. ಸಜ್ಜೆಯ ಜೊತೆಗೆ ಜೋಳ ಮತ್ತು ರಾಗಿಯೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿವೆ ಎಂದು ಹೇಳಿದರು.
