ಚಾರಿಟಿ ಚೆಸ್ ಪಂದ್ಯ: ಕ್ಷಮೆ ಕೇಳಿದ ಝೆರೋಧ ಮುಖ್ಯಸ್ಥನಿಗೆ ನಿಷೇಧ ಶಿಕ್ಷೆ!

  • ಕೋವಿಡ್ ಪರಿಹಾರಕ್ಕಾಗಿ ಚಾರಿಟಿ ಚೆಸ್ ಟೂರ್ನಿ
  • ದಿಗ್ಗಜ ವಿಶ್ವನಾಥನ್ ಆನಂದ್ ವಿರುದ್ಧ ಸೆಲೆಬ್ರೆಟಿಗಳ ಟೆಸ್
  • ಮೋಸದಾಟದಲ್ಲಿ ವಿಶಿ ಸೋಲಿಸಿದ ಝೆರೋಧ ಮುಖ್ಯಸ್ಥನಿಗೆ ಶಿಕ್ಷೆ
Zerodha founder Nikhil Kamath banned from Chess Apologies for Unfair Chess Win vs Viswanathan Anand ckm

ನವದೆಹಲಿ(ಜೂ.14): ಕೋವಿಡ್ ಸಂಕಷ್ಟಕ್ಕೆ ಪರಿಹಾರ ಒದಗಿಸಲು ಆಯೋಜಿಸಿದ ವರ್ಚುವಲ್ ಚಾರಿಟಿ ಪಂದ್ಯ ಅತ್ಯಂತ ಯಶಸ್ವಿಯಾಗಿದೆ. ಆದರೆ ಈ ಟೂರ್ನಿ ಇದೀಗ ವಿವಾದಕ್ಕೆ ಕಾರಣಾಗಿದೆ. ದಿಗ್ಗಜ ವಿಶ್ವನಾಥನ್ ಆನಂದ್ ವಿರುದ್ಧ ಚೆಸ್ ಆಡಲು ಬಾಲಿವುಡ್ ನಟ ಅಮಿರ್ ಖಾನ್, ರಿತೇಶ್ ದೇಶ್‌ಮುಖ್, ಕಿಚ್ಚ ಸುದೀಪ್, ಕ್ರಿಕೆಟಿಗ ಯಜುವೇಂದ್ರ ಚಹಾಲ್ ಸೇರಿದಂತೆ ಹಲವ ಸೆಲೆಬ್ರೆಟಿಗಳು ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಝೆರೋಧ ಸಂಸ್ಥೆ ಸಂಸ್ಥಾಪಕ ನಿಖಿಲ್ ಕಾಮತ್ ಮೋಸದಾಟದಿಂದ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದಾರೆ.

ಚೆಸ್ ಪಂದ್ಯದಲ್ಲಿ ಸೆಲೆಬ್ರೆಟಿಗಳ ಮೋಡಿ; ಸುದೀಪ್ ಆಟಕ್ಕೆ ದಿಗ್ಗಜ ವಿಶ್ವನಾಥನ್ ಆನಂದ್ ಮೆಚ್ಚುಗೆ!.

ಸೆಲೆಬ್ರೆಟಿಗಳು ಏಕಕಾಕಲಕ್ಕೆ ಚೆಸ್ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ವಿರುದ್ಧ ಆಟವಾಡಿದ್ದರು. ಸುದೀಪ್, ಚಹಾಲ್ ಸೇರಿದಂತೆ ಎಲ್ಲಾ ಸೆಲೆಬ್ರೆಟಿಗಳನ್ನು ಸೋಲಿಸಿದ್ದ ಆನಂದ್ ನಿಖಿಲ್ ಕಾಮತ್ ವಿರುದ್ದ ಆಟ ಅಷ್ಟು ಸುಲಭವಾಗಿರಲಿಲ್ಲ. ಈ ಆಟದಲ್ಲಿ ನಿಖಿಲ್, ದಿಗ್ಗಜ ವಿಶಿಯನ್ನೇ ಸೋಲಿಸಿದ್ದರು. ಶೇ.99 ರಷ್ಟು ನಿಖರತೆ ಹೊಂದಿದ್ದ ಕಾರಣ ಪರಿಶೀಲಿಸಲಾಯಿತು. ಈ ವೇಳೆ ನಿಖಿಲ್ ಕಂಪ್ಯೂಟರ್ ಅನಾಲಿಸ್ಟ್ ನೆರವು ಪಡೆದಿರುವುದು ಬಹಿರಂಗವಾಗಿತ್ತು.

ನಿಖಿಲ್ ಮೋಸದಾಟ ಬಹಿರಂಗವಾಗುತ್ತದ್ದಂತೆ ಆಕ್ರೋಶ ಹೆಚ್ಚಾಗಿತ್ತು, ಟ್ವಿಟರ್ ಮೂಲಕ ನೆಟ್ಟಿಗರು ನಿಖಿಲ್ ವಿರುದ್ಧ ಕಮೆಂಟ್ ಮಾಡಿದ್ದರು. ಇತ್ತ ಆನಂದ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಈ ಘಟನೆ ಬಳಿಕ ನಿಖಿಲ್ ಕಾಮತ್ ತಮ್ಮ ಮೋಸದಾಟಕ್ಕೆ ಕ್ಷಮೆ ಕೇಳಿದ್ದಾರೆ. ಜೊತೆಗೆ ತಾವು ಕಂಪ್ಯೂಟರ್ ಅನಾಲಿಸ್ಟ್ ನೆರವು ಪಡೆದಿರುವುದನ್ನು ಒಪ್ಪಿಕೊಂಡಿದ್ದರು. 

ಮೋಸದಾಟವಾಡಿದ ನಿಖಿಲ್ ಕಾಮತ್ ಕ್ಷಮೆ ಕೇಳಿದರೂ, ವರ್ಚುವಲ್ ಚೆಸ್.ಕಾಂ ನಿಷೇಧ ಶಿಕ್ಷೆ ವಿಧಿಸಿದೆ. ನಿಖಿಲ್ ವರ್ಚುಲ್ ಚೆಸ್ ಆಡದಂತೆ ನಿರ್ಬಂಧಿಸಿದೆ. 

Latest Videos
Follow Us:
Download App:
  • android
  • ios