ರಗ್ಬಿ ಮೈದಾನಕ್ಕೂ ನುಗ್ಗಿದ ಯೂಟ್ಯೂಬರ್ ಜಾರ್ವೊ 69 !
* ಮತ್ತೊಮ್ಮೆ ಮೈದಾನ ಪ್ರವೇಶಿಸಿ ಗಮನ ಸೆಳೆದ ಜಾರ್ವೊ 69
* ರಗ್ಬಿ ಮೈದಾನದಲ್ಲಿ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಮೈದಾನ ಪ್ರವೇಶ
* ಭಾರತ-ಇಂಗ್ಲೆಂಡ್ ಟೆಸ್ಟ್ ವೇಳೆಯೂ ಪಂದ್ಯಕ್ಕೆ ಅಡ್ಡಿ ಪಡಿಸಿದ್ದ ಜಾರ್ವೊ
ಕಾರ್ಡಿಫ್(ನ.01): ಪದೇ ಪದೇ ಭದ್ರತಾ ನಿಯಮ ಉಲ್ಲಂಘಿಸಿ ಮೈದಾನಕ್ಕೆ ನುಗ್ಗುವ ಮೂಲಕವೇ ಸುದ್ದಿಯಾಗುವ ಯೂಟ್ಯೂಬರ್ (YouTuber) ಡೇನಿಯಲ್ ಜಾರ್ವಿಸ್ (Daniel Jarvis) (ಜಾರ್ವೊ 69) ರಗ್ಬಿ ಪಂದ್ಯದ ವೇಳೆಯೂ ಮೈದಾನದಲ್ಲಿ ಕಾಣಿಸಿಕೊಂಡ ಪ್ರಸಂಗ ನಡೆದಿದೆ.
ಕಾರ್ಡಿಫ್‌ನಲ್ಲಿ ಶನಿವಾರ ನಡೆದ ವೇಲ್ಸ್ ಹಾಗೂ ನ್ಯೂಜಿಲೆಂಡ್ ನಡುವಿನ ರಗ್ಬಿ ಪಂದ್ಯದ (Rugby) ವೇಳೆ ಮೈದಾನಕ್ಕೆ ಬಂದ ಜಾರ್ವಿಸ್, ಆಟಗಾರರು ರಾಷ್ಟ್ರಗೀತೆ ಹಾಡುತ್ತಿದ್ದಾಗ ಅವರ ಜೊತೆ ಸಾಲಾಗಿ ನಿಂತಿದ್ದಾನೆ. ಬಳಿಕ ಆತನನ್ನು ಭದ್ರತಾ ಸಿಬ್ಬಂದಿ ಮೈದಾನದಿಂದ ಹೊರಹಾಕಿದ್ದಾರೆ. ಘಟನೆಯ ವಿಡಿಯೋವನ್ನು ಸ್ವತಃ ಜಾರ್ವಿಸ್ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ.
Ind vs Eng 3ನೇ ಬಾರಿಗೆ ಮೈದಾನಕ್ಕೆ ನುಗ್ಗಿದ ಜಾರ್ವೊ ಆರೆಸ್ಟ್..!
ಇಂಗ್ಲೆಂಡ್‌ನಲ್ಲಿ ಈ ಮೊದಲು ಭಾರತ-ಇಂಗ್ಲೆಂಡ್ (Ind vs Eng) ನಡುವಿನ ಟೆಸ್ಟ್ ಸರಣಿಯಲ್ಲಿ (Test Match Series) 3 ಬಾರಿ ಮೈದಾನಕ್ಕೆ ನುಗ್ಗಿ ಸುದ್ದಿಯಾಗಿದ್ದ. ಮೊದಲಿಗೆ ಲಾರ್ಡ್ಸ್ ಟೆಸ್ಟ್ (Lords Test) ಪಂದ್ಯದಲ್ಲಿ ಟೀಂ ಇಂಡಿಯಾ (Team India) ಜೆರ್ಸಿ ತೊಟ್ಟು ಮೈದಾನಕ್ಕಿಳಿದಿದ್ದ. ಇದಾದ ಬಳಿಕ ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆಯಲ್ಲಿ ಟೀಂ ಇಂಡಿಯಾ ಜೆರ್ಸಿ (Jersey) ತೊಟ್ಟು ಬೌಲಿಂಗ್ ಮಾಡಲು ಕಣಕ್ಕಿಳಿದಿದ್ದರು. ಈ ವೇಳೆ ಇಂಗ್ಲೆಂಡ್ ಕ್ರಿಕೆಟಿಗ ಜಾನಿ ಬೇರ್‌ಸ್ಟೋವ್ ಅವರಿಗೆ ಡಿಕ್ಕಿ ಹೊಡೆದಿದ್ದ. ಇನ್ನು ಈತ ಇದೇ ತಿಂಗಳಲ್ಲಿ ನ್ಯಾಷನಲ್ ಫುಟ್ಬಾಲ್ ಲೀಗ್(ಎನ್‌ಎಫ್‌ಎಲ್) (National Football League) ಮೈದಾನಕ್ಕೂ ನುಗ್ಗಿದ್ದ.
ಎಎಫ್‌ಸಿ ಅರ್ಹತಾ ಸುತ್ತು: ಭಾರತಕ್ಕೆ 2ನೇ ಸ್ಥಾನ
ಫುಜೈರಾ(ಯುಎಇ): ಎಎಫ್‌ಸಿ ಕಪ್ ಅಂಡರ್-23 ಏಷ್ಯನ್ ಕಪ್ (AFC Cup) ಅರ್ಹತಾ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ತಂಡ ‘ಇ’ ಗುಂಪಿನಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಶನಿವಾರ ಕಿರ್ಗಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಗೆಲುವು ಸಾಧಿಸಿತು. ಯುಎಇ ‘ಇ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.
ಮದುವೆಯಾಗದೇ 6ನೇ ಮಗುವಿಗೆ ತಂದೆಯಾಗಲಿದ್ದಾರೆ Cristiano Ronaldo...!
ಪ್ರತಿ ಗುಂಪಿನ ಅಗ್ರಸ್ಥಾನಿಗಳು ಮುಂದಿನ ವರ್ಷ ನಡೆಯಲಿರುವ ಎಎಫ್‌ಸಿ ಕಪ್ ಅಂಡರ್-23 ಏಷ್ಯನ್ ಕಪ್‌ನಲ್ಲಿ ಆಡಲಿದ್ದು, ಗುಂಪು ಹಂತದಲ್ಲಿ 2ನೇ ಸ್ಥಾನದಲ್ಲಿರುವ ತಂಡಗಳ ಪೈಕಿ ಶ್ರೇಷ್ಠ 4 ನಾಲ್ಕು ತಂಡಗಳೂ ಟೂರ್ನಿಗೆ ಅರ್ಹತೆ ಗಳಿಸಲಿವೆ. ಹೀಗಾಗಿ ಭಾರತದ ಅದೃಷ್ಠ ಇತರೆ ಗುಂಪಿನ ತಂಡಗಳ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ.
ವಿಶ್ವ ಬಾಕ್ಸಿಂಗ್: ಕ್ವಾರ್ಟರ್‌ಗೆ ಆಕಾಶ್, ನರೇಂದರ್
ಬೆಲ್ಗ್ರೇಡ್: ಭಾರತದ ಆಕಾಶ್ ಕುಮಾರ್(54 ಕೆ.ಜಿ.), ನರೇಂದರ್ ಬೆರ್ವಾಲ್ (+92 ಕೆ.ಜಿ.) ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ (World Boxing Championship) ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮೊಹಮ್ಮದ್ ಶಮಿ ನಿಂದಕರ ಬಾಯಿ ಮುಚ್ಚಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಿಟ್ಟ ನುಡಿ...!
ಪ್ರಿ ಕ್ವಾರ್ಟರ್‌ನಲ್ಲಿ ಆಕಾಶ್, ಪ್ಯುರೆಟೊ ರಿಕೊದ ಕಾಲೆಬ್ ಟಿರಾಡೊ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸಿದರೆ, ನರೇಂದರ್ ತಜಿಕಿಸ್ತಾನದ ಜಖೂನ್ ಕುರ್ಬೊನೊವ್ ವಿರುದ್ಧ ಗೆದ್ದರು. ಈ ಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಬಾಕ್ಸರ್‌ಗೆ 1 ಲಕ್ಷ ಅಮೆರಿಕನ್ ಡಾಲರ್ (ಅಂದಾಜು 74.92 ಲಕ್ಷ ರು.) ಬಹುಮಾನ ಸಿಗಲಿದೆ. ಬೆಳ್ಳಿ ಗೆಲ್ಲುವ ಬಾಕ್ಸರ್‌ಗೆ 37.46 ಲಕ್ಷ ರು., ಕಂಚು ಗೆಲ್ಲುವ ಬಾಕ್ಸರ್‌ಗೆ 18.73 ಲಕ್ಷ ರು., ಬಹುಮಾನ ಸಿಗಲಿದೆ.