Ind vs Eng 3ನೇ ಬಾರಿಗೆ ಮೈದಾನಕ್ಕೆ ನುಗ್ಗಿದ ಜಾರ್ವೊ ಆರೆಸ್ಟ್‌..!

* 4ನೇ ಟೆಸ್ಟ್‌ ಪಂದ್ಯಕ್ಕೆ ಮತ್ತೆ ಜಾರ್ವೊ 69 ಅಡ್ಡಿ

* ಮೈದಾನಕ್ಕೆ ಓಡಿಬಂದು ಬೇರ್‌ಸ್ಟೋವ್‌ಗೆ ಡಿಕ್ಕಿ ಹೊಡೆದ ಅಭಿಮಾನಿ

* ಜಾರ್ವೊನನ್ನು ಬಂಧಿಸಿದ ದಕ್ಷಿಣ ಲಂಡನ್ ಪೊಲೀಸರು

Ind vs Eng Jarvo The Pitch Invader Arrested by South London Police kvn

ಲಂಡನ್‌(ಸೆ.04): ಭಾರತ-ಇಂಗ್ಲೆಂಡ್‌ ನಡುವಿನ ಕಳೆದೆರಡು ಟೆಸ್ಟ್‌ ಪಂದ್ಯದ ವೇಳೆ ‘ಜಾರ್ವೊ69’ ಎನ್ನುವ ಹೆಸರುಳ್ಳ ಭಾರತೀಯ ಜೆರ್ಸಿ ಧರಿಸಿ ಮೈದಾನಕ್ಕೆ ನುಗ್ಗಿದ್ದ ಡೇನಿಯಲ್‌ ಜಾರ್ವಿಸ್‌, ಶುಕ್ರವಾರವೂ ಮೈದಾನದೊಳಗೆ ಕಾಣಿಸಿಕೊಂಡರು. ಮತ್ತೊಮ್ಮೆ ಪಂದ್ಯಕ್ಕೆ ಅಡ್ಡಿಪಡಿಸಿದ ಪರಿಣಾಮ ಜಾರ್ವಿಸ್‌ರನ್ನು ದಕ್ಷಿಣ ಲಂಡನ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸತತ 3ನೇ ಬಾರಿಗೆ ಭದ್ರತಾ ಲೋಪವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಮಾಜಿ ಕ್ರಿಕೆಟಿಗರು, ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗಿದೆ. ಶುಕ್ರವಾರ ಬೌಲಿಂಗ್‌ ಮಾಡುವುದಾಗಿ ಮೈದಾನಕ್ಕೆ ನುಗ್ಗಿದ ಜಾರ್ವೊ, ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಜಾನಿ ಬೇರ್‌ಸ್ಟೋವ್‌ಗೆ ಡಿಕ್ಕಿ ಹೊಡೆದರು. ಭದ್ರತಾ ಸಿಬ್ಬಂದಿ ಜಾರ್ವೊರನ್ನು ಮೈದಾನದಿಂದ ಹೊರಗಟ್ಟಿದರು. ಲೀಡ್ಸ್‌ ಕ್ರೀಡಾಂಗಣಕ್ಕೆ ಜಾರ್ವೊಗೆ ಆಜೀವ ನಿಷೇಧ ಹೇರಲಾಗಿದೆ. 

Ind vs Eng ಇಂಗ್ಲೆಂಡ್ ಕಟ್ಟಿಹಾಕುವ ಟೀಂ ಇಂಡಿಯಾದಾಸೆಗೆ ಪೋಪ್‌-ವೋಕ್ಸ್‌ ತಣ್ಣೀರು

ಟೀಂ ಇಂಡಿಯಾ ಜೆರ್ಸಿ ತೊಟ್ಟು ಮೈದಾನದೊಳಗೆ ಪ್ರವೇಶಿಸಿ ಆಟಕ್ಕೆ ಅಡ್ಡಿಪಡಿಸುವ ಇಂಗ್ಲೆಂಡ್‌ನ ಕ್ರಿಕೆಟ್‌ ಅಭಿಮಾನಿ ಡೇನಿಯಲ್‌ ಜಾರ್ವಿಸ್‌ ಅಲಿಯಾಸ್‌ ‘ಜಾರ್ವೊ 69’ಗೆ ಯಾರ್ಕ್ಶೈರ್‌ ಕೌಂಟಿ ಕ್ರಿಕೆಟ್‌ ಕ್ಲಬ್‌ ಹೆಡಿಂಗ್ಲಿ ಕ್ರೀಡಾಂಗಣಕ್ಕೆ ಪ್ರವೇಶಿಸದಂತೆ ಆಜೀವ ನಿಷೇಧ ಹೇರಿದೆ. ಅಲ್ಲದೇ ದಂಡವನ್ನು ವಿಧಿಸಲಾಗಿದೆ.
 

Latest Videos
Follow Us:
Download App:
  • android
  • ios