3 ದಶಕ WWE ಆಳಿದ ದಿಗ್ಗಜ ರಸ್ಲರ್ ಅಂಡರ್‌ಟೇಕರ್ ವಿದಾಯ!
ಬರೋಬ್ಬರಿ 30 ವರ್ಷ WWE ರಸ್ಲಿಂಗ್ ಮೂಲಕ ವಿಶ್ವದಲ್ಲೇ ಜನಪ್ರಿಯವಾಗಿರುವ ಅಂಡರ್‌ಟೇಕರ್ ಇದೀಗ ವಿದಾಯ ಹೇಳಿದ್ದಾರೆ. 1990ರಲ್ಲಿ ರಸ್ಲಿಂಗ್ ರಿಂಗ್‌ನಲ್ಲಿ ಮೊದಲ ಬಾರಿ ಕಾಣಿಸಿಕೊಂಡ ಅಂಡರ್‌ಟೇಕರ್ ಅದೆಷ್ಟೋ ಮಂದಿಯ ಬಾಲ್ಯದ ಹೀರೋ ಆಗಿದ್ದಾರೆ. ಇದೀಗ ಥ್ಯಾಂಕ್ಯೂ ಟೇಕರ್ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ.
ಅಮೆರಿಕ(ಜೂ.22): ಬಾಲ್ಯದಲ್ಲಿ WWE ರಸ್ಲಿಂಗ್ ನೋಡದವರಿಲ್ಲ ಎಂದರೆ ತಪ್ಪಾಗಲ್ಲ. ಅಷ್ಟರ ಮಟ್ಟಿಗೆ WWE ರಸ್ಲಿಂಗ್ ಜನಪ್ರಿಯವಾಗಿದೆ. ಅದರಲ್ಲೂ ಅಂಡರ್‌ಟೇಕರ್ ಹೆಸರು ಕೇಳದವರಿಲ್ಲ. ನಮ್ಮ ಬಾಲ್ಯ ಕಳದು ಯೌವ್ವನ, ಗ್ರಹಸ್ಥಾಶ್ರಮ ಮುಗಿಸಿ ಕಣ್ಣ ಮಂಜಾದರೂ ಅಂಡರ್‌ಟೇಕರ್ ಮಾತ್ರ ಚಿರಯುವಕನಂತೆ ರಸ್ಲಿಂಗ್ ರಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಬರೋಬ್ಬರಿ 30 ವರ್ಷಗಳ WWE ರಸ್ಲಿಂಗ್ ಪಯಣಕ್ಕೆ ಅಂಡರ್‌ಟೇಕರ್ ವಿದಾಯ ಹೇಳಿದ್ದಾರೆ.
ಕೊಹ್ಲಿ-ಧೋನಿಗೆ ಶುಭಕೋರಿದ WWE ಸೂಪರ್ ಸ್ಟಾರ್ !...
1990ರಲ್ಲಿ ಸರ್ವೈವರ್ ಸೀರಿಸ್ ಮೂಲಕ WWEಗೆ ಎಂಟ್ರಿಕೊಟ್ಟ ಅಂಡರ್‌ಟೇಕರ್, ತಮ್ಮ ವಿಶಿಷ್ಠ ಶೈಲಿ ಹಾಗೂ ರಸ್ಲಿಂಗ್ ಮೂಲಕ ಗಮನ ಸೆಳೆದರು. ಬೈಕ್ ಮೂಲಕ ಎಂಟ್ರಿ, ಪ್ರೇತಾತ್ಮದ ರೀತಿಯಲ್ಲಿ ಆಗಮನ ಸೇರಿದಂತೆ ಹಲವು ಭಿನ್ನ ಗೆಟಪ್‌ನಲ್ಲಿ ಅಂಡರ್‌ಟೇಕರ್, ಎದುರಾಳಿ ಮಾತ್ರವಲ್ಲ ನೋಡುಗರನ್ನು ಬೆಚ್ಚಿ ಬೀಳಿಸಿದ್ದರು. ರಸ್ಲಮೇನಿಯಾ ಫೈಟ್‌ನಲ್ಲಿ 25-2 ಚಾಂಪಿಯನ್‌ಶಿಪ್ ದಾಖಲೆ ಬರೆದಿರುವ ಅಂಡರ್‌ಟೇಕರ್, WWEನಲ್ಲಿ ಹೊಸ ಇತಿಹಾಸ ರಚಿಸಿದ್ದಾರೆ.
ಭಾರತದ ಮೊತ್ತ ಮೊದಲ WWE ಚಾಂಪಿಯನ್ ಆಗುವತ್ತ ಕವಿತಾ ದೇವಿ!
ಕಳೆದ ಭಾನುವರಾ(ಜೂ.21) ಅಂಡರ್‌ಟೇಕರ್ ವಿದಾಯದ ಪಂದ್ಯ ಎಂದಾಗ ಅಭಿಮಾನಿಗಳ ಕಣ್ಣಲ್ಲಿ ನೀರು ಜಿನುಗಿತ್ತು. 3 ದಶಕಗಳ ಕಾಲ ಹೀರೋ ಆಗಿ ಕೊಂಡಾಡಿದ್ದ ಅಭಿಮಾನಿಗಳಿಗೆ ವಿದಾಯ ಬೇಸರ ಮೂಡಿಸಿತ್ತು. ಇದೀಗ ಥ್ಯಾಂಕ್ಯೂ ಅಂಡರ್‌ಟೇಕರ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. WWE ದಿಗ್ಗಜರು, ರಸ್ಲರ್‌ಗಳು, ಅಭಿಮಾನಿಗಳು ವಿದಾಯ ಹೇಳಿದ ಅಂಡರ್‌ಟೇಕರ್‌ಗೆ ಧನ್ಯವಾದ ಅರ್ಪಿಸಿದ್ದಾರೆ.
ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ದಿ ಗ್ರೇಟ್ ಖಲಿ ಜಾಲಿ ರೈಡ್!.